ದಾವಣಗೆರೆ:ಕರ್ನಾಟಕದ ಹೈ ಓಲ್ಟೇಜ್ ತ್ರಿಕೋಣ ಸ್ಪರ್ಧೆಯ ಜಂಗೀ ಕುಸ್ತಿ ಅಖಾಡ ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀ ಜಿ.ಬಿ.ವಿನಯ್ ಕುಮಾರ್ ಅವರು ತಮ್ಮ ಭರ್ಜರಿ ಚುನಾವಣಾ ಪ್ರಚಾರ ಕ್ಷೇತ್ರದಾದ್ಯಂತ ನಡೆಸುತಿದ್ದಾರೆ.
ಹರಿಹರ ತಾಲೂಕಿನ ಬನ್ನಿಕೋಡ,ಕೆ.ಬೇವನಹಳ್ಳಿ,ಲಕ್ಷೆಟ್ಟಿಹಳ್ಳಿ,ಕಮಲಾಪುರ,ಮಲೆಬೆನ್ನೂರು,ಬಾನುವಳ್ಳಿಯಲ್ಲಿ ಮುಂತಾದ ಕಡೆ ಬೃಹತ್ ರೋಡಶೋ ನಡೆಸಿ ತಮ್ಮ ಚಿಹ್ನೆ ಸಿಲೆಂಡರ ಪರಿಚಯಿಸುತ್ತ ನನ್ನ ಗುರುತಾದ ಸಿಲಿಂಡರ ಇಪ್ಪತ್ತೆಂಟನೇ ಕ್ರಮಸಂಖ್ಯೆಯಲ್ಲಿದೆ ಇದು ಶುಭ ಸಂಕೇತ ಕಾರಣ ಕರ್ನಾಟಕದ ಇಪ್ಪತ್ತೆಂಟು ಲೋಕಸಭೆಕ್ಷೇತ್ರದಲ್ಲಿ ಇಪ್ಪತ್ತೆಂಟನೇ ನಂಬರಲ್ಲಿರುವ ಸಿಲಿಂಡರಗೆ ಮತನೀಡಿ ರಾಜ್ಯದ ಇಪ್ಪತ್ತೆಂನೇಯ ಲೋಕಸಭೆಸದಸ್ಯನನ್ನಾಗಿ ಆಯ್ಕೆಮಾಡಿ ಕಳಿಸಿಕೊಡಲು ಮತದಾರರಲ್ಲಿ ಮನವಿಮಾಡಿಕೊಂಡರು.