Saturday, December 21, 2024
Homeಕೃಷಿಇಂದವಾರ ಗ್ರಾಮದಲ್ಲಿ "ಕಿಸಾನ್ ಸತ್ಯಾಗ್ರಹ" ಎಂಬ ಸಾಕ್ಷ್ಯ ಚಿತ್ರ ಪ್ರದರ್ಶನ

ಇಂದವಾರ ಗ್ರಾಮದಲ್ಲಿ “ಕಿಸಾನ್ ಸತ್ಯಾಗ್ರಹ” ಎಂಬ ಸಾಕ್ಷ್ಯ ಚಿತ್ರ ಪ್ರದರ್ಶನ

ಬಾಗಲಕೋಟೆ:ಇತ್ತೀಚೆಗೆ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಕುರಿತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಶ್ರೀ ಕೇಸರಿ ಹರವೂ “ಕಿಸಾನ್ ಸತ್ಯಾಗ್ರಹ” ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ,* ರಾಜ್ಯಾದ್ಯಂತ ರೈತ ಚಳುವಳಿಯ ಬಗ್ಗೆ ರೈತ, ಕೃಷಿ ಕಾರ್ಮಿಕ ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸಾಕ್ಷ್ಯ ಚಿತ್ರ ಪ್ರದರ್ಶನ ಯಾತ್ರೆಯನ್ನು ಕೈಗೊಳ್ಳಲಾಗಿದ್ದು,

ಈದಿನ ಹುನಗುಂದ ತಾಲೂಕಿನಲ್ಲಿ ದಿನಾಂಕ 01/05/2024ರ ಬುಧವಾರದಂದು ಸಂಜೆ 4.30 ಗಂಟೆಗೆ ಇಂದವಾರಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಸಾಕ್ಷ್ಯ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಈ ಭಾಗದ ರೈತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಸಾಕ್ಷ್ಯಚಿತ್ರ ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ರೈತ ಮುಖಂಡ ನಾಗರಾಜ ಹೂಗಾರ್ ರವರು ಸಹ ಭಾಗವಹಿಸಿ, ರೈತರ ಬದುಕು ಬವಣೆಗಳ ಕುರಿತು ವಿಮರ್ಶೆ ನಡೆಸಬಹುದು ಎಂದು ರೈತರಲ್ಲಿ ವಿನಂತಿಸಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments