ದಾವಣಗೆರೆ:ಕಾಂಗ್ರೆಸ್ ಪಕ್ಷದ ಕಾಣದ ಕೈಗಳಿಂದ ಟಿಕೆಟ್ ವಂಚಿತನಾಗಿ ಜಿಲ್ಲೆಯ ಕುಟುಂಬ ರಾಜಕಾರಣಕ್ಕೆ ರೋಷಿಹೋದ ಜನಸಾಮಾನ್ಯರ ಒತ್ತಾಯಕ್ಕೆ ಓಗೊಟ್ಟು ಹೊಸ ಹೊಸ ಆಲೋಚನೆ ಗಳ ಯುವಜನತೆಗೆ ಅವಕಾಶಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಬಲಿಷ್ಟ ಎರಡುಕುಟುಂಬಗಳಿಗೆ ರಾಜಕೀಯ ಎದುರಾಳಿಯಾಗಿ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರದ ಧೂಳೆಬ್ಬಿರುವುದು ಜಿಲ್ಲೆಯ ರಾಜಕೀಯವಲಯದಲ್ಲಿ ಅಷ್ಟೇಅಲ್ಲದೆ ರಾಜ್ಯ ಮತ್ತು ದೇಹಲಿಯಮಟ್ಟದಲ್ಲಿಯೂ ಗಮನಸೆಳೆದ ಇನ್ ಸೈಟ್ ಐಎಎಸ್ ಸಂಸ್ಥಾಪಕ ಜಿಬಿ.ವಿನಯ್ ಕುಮಾರ್ ರವರು ಜಿಲ್ಲೆಯ ಅಹಿಂದ ವರ್ಗಕ್ಕೆ ಹೊಸ ಶಕ್ತಿಯ ಆಶಾಕಿರಣವಾಗಿ ಗೋಚರಿಸುತಿದ್ದಾರೆ.
ಹಳೆಬಾತಿ,ಗುಡ್ಡದಕ್ಯಾಂಪ್,ನೀಲಾನಹಳ್ಳಿ,ದೊಡ್ಡಬಾತಿ,ದೊಗ್ಗಳ್ಳಿ,ಕೋಡಿಹಳ್ಳಿ,ದೊಡ್ಡಬೂದಿಹಾಳ,ಹೋಸಕಡ್ಲೆಬಾಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿನಯ್ ಕುಮಾರ್ ರವರು ಮತಯಾಚನೆಯಲ್ಲಿ ಜನಾಕರ್ಶನೆಯ ಕೇಂದ್ರಬಿಂದುವಾಗಿದ್ದಾರೆ.ಜೆ.ಎನ್.ವೆಂಕಟೇಶ್ ರವರು ಸಾತ್ ನೀಡಿದ್ದರು.