ಶ್ರೀ ಸಿದ್ಧರಾmaiah ರವರಿಗೆ
ಕುರುಬ ಸಮಾಜದ ಹಿರಿಯ ಮುಖಂಡ ಹಾಗೂ ರಾಜಕಾರಣಿಗಳು
ತಾವು ನಮ್ಮ ಸಮಾಜದ ಹಿರಿಯ ಮುಖಂಡ ಹಾಗೂ ರಾಜಕಾರಣಿಗಳು ಎಂದು ನಮ್ಮ ಸಮಾಜದ ಪ್ರತಿ ವ್ಯಕ್ತಿ ಮಕ್ಕಳಿಂದ ಹಿರಿಯರು ಹಗಲು ರಾತ್ರಿ ದುಡಿದು 2 ಭಾರಿ ಮುಖ್ಯಮಂತ್ರಿ ಮಾಡಲು ಶ್ರಮಿಸಿದ್ದಾರೆ ಎಂಬುದು ನಿಜವೆಂದು ಭಾವಿಸಿ ತಮಗೆ ಈ ಪತ್ರ ಬರೆದು ತಿಳಿಸಲು ಇಚ್ಛೆಪಡುತ್ತೇನೆ.
- ತಾವು ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಕುರುಬ, ಮುಸ್ಲಿಂ ಸಮಾಜದ ಅತಿ ಹೆಚ್ಚು ಅಭಿಮಾನದಿಂದ ಹಾಕಿರುವ ಮತ ಗಳಿಂದ ಈ ಎರಡು ಸಮಾಜಕ್ಕೆ ಅದರಲ್ಲೂ ಕುರುಬ ಸಮಾಜಕ್ಕೆ ನೀವು ನೀಡಿರುವ ಕೊಡುಗೆ ಏನು? ಎಷ್ಟು medical collage, ಎಷ್ಟು IAS, ಎಷ್ಟು ಎಂಜಿನಿಯರ್ collage, ಎಷ್ಟು hostels, ಎಷ್ಟು ಸಮುದಾಯ ಭವನ ನಿರ್ಮಾಣ ಮಾಡಲು ದಾರಿ ತೋರಿಸಿದ್ದರು ಎಂಬುದು ಮುಖ್ಯ ವಾಗಿದ್ದು. ತಾವು ಈ ಸಮಾಜದ ಕೆಲವು ಮುಖಂಡರ ಕೆಲಸ ಮಾಡಿಕೊಟ್ಟಿದೆ ಎಂದು ಹೇಳಲು ಬರುವುದಿಲ್ಲ
- ನೀವು ನಿಮ್ಮ ಮಗನನ್ನು ರಾಜಕೀಯ ಕ್ಕೆ ತರಲು ತಮ್ಮ ಕ್ಷೇತ್ರ ತ್ಯಾಗ ಮಾಡಿ ತಮ್ಮ ಎಲ್ಲಾ ಶ್ರಮ ವ್ಯರ್ಥ ಮಾಡಿ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಅನುಭವಿಸಿದರು ಎಂದು ಜನ ಹೇಳುತ್ತಾರೆ. ನಿಮ್ಮ ಮಗನ ರೀತಿ ಇದ್ದ vinayakumar GB ಸೋಲಿಸಿ ಎಂದು ನಮ್ಮ ಸಮಾಜಕ್ಕೆ ಕರೆ ನೀಡಿರುವ ನಿಮ್ಮ ವ್ಯಕ್ತಿತ್ವ ಹಾಗೂ ನಿಮ್ಮ ಆತ್ಮ ಸಾಕ್ಷಿ ಗೆ ಸರಿ ಕಾಣಿಸುತ್ತದೆ ಎಂದು ಪ್ರಶ್ನಿಸಿಕೊಳ್ಳಿ. ನೀವು ಮನಸ್ಸು ಮಾಡಿದರೆ ನಿಮ್ಮ ದಾವಣಗೆರೆ MLA ಗಳಿಗೆ ಹಾಗೂ ದಾವಣಗೆರೆ ಮೇಲ್ವರ್ಗದ ಪ್ರಭು ಗಳಿಗೆ ಸೂಚಿಸಿ ಹೇಳಿ ಸೀಟ್ ನೀಡಲು ಎಲ್ಲಾ ಸಾಧ್ಯತೆಗಳು ಹೆಚ್ಚು ಇತ್ತು.
- ನಂತರ ದಾವಣಗೆರೆ ಎಲ್ಲಾ ಕುರುಬ ಸಮಾಜ ಹಾಗೂ ಎಲ್ಲಾ ahindha ವರ್ಗ ಇಲ್ಲಿನ ರಾಜಕೀಯ ಮುಖಂಡರು ಶೋಷಣೆ ಮತ್ತು ದಬ್ಬಾಳಿಕೆ ಬೇಸತ್ತು ಈ ಹುಡುಗನ ಹಿಂದೆ ನಿಂತ ವಿಷಯವನ್ನು ತಿಳಿದ ನೀವು ಆ ಸ್ವಾರ್ಥ ರಾಜಕಾರಣಿಗಳ ಪರ ಪ್ರಚಾರ ಸಭೆಯಲ್ಲಿ ಅವರ ಯೋಗ್ಯತೆ, ಹಿಂದುಳಿದ ಸಮಾಜಕ್ಕೆ ಮತ್ತು ನಮ್ಮ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ನೋಡಿ ಮತ ಹಾಕಿ ಎಂದು ಕೇಳಬೇಕಾಯಿತು. ಆದರೆ ನೀವು ನಿಮ್ಮ ಸಮಾಜ ಒಂದು ಕಡೆ ನಿಂತಾಗ ಹಾಗೂ ಅದರ ಎದುರಾಳಿ ಆಗಿ ನಿಂತು ನಿಮ್ಮ ಬೆಂಬಲ ಮೇಲ್ವರ್ಗದ ಸ್ವಾರ್ಥ ರಾಜಕಾರಣಿಗಳ ಪರ ಎಂದು ಕರ್ಣ ದುರ್ಯೋಧನ ಜೊತೆ ನಿಂತ ಹಾಗೆ ಕಾಣುತ್ತದೆ.
- ಜನ ಸಂಖ್ಯೆ ವರು seat ಹಂಚಿಕೆ ಬಗ್ಗೆ ಪರಿಶೀಲನೆ ಮಾಡಿದಾಗ್ಯೂ ಸಹ ನಿಮ್ಮ ಸಮಾಜಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಅನ್ಯಾಯ ಮಾಡಿದಾಗ್ಯೂ ಸಹ ನೀವು GBV ಗೆ ಸೀಟ್ kodisabahudagittu
- ರಾಜಕೀಯಕ್ಕೆ ಮಠದ ಹೆಸರು ಹೇಳಿ ವಿನಯ ಕುಮಾರ್ GB ರವರು ತಪ್ಪು ಮಾಡಿದ್ದೀರಿ ಎಂದು ಬಿಂಬಿಸಿ ಮತ ಕೇಳಿದ್ದು ತುಂಬಾ ಅಪರಾಧ. ಮಠಾಧಿಪತಿಗಳು ಮಾಡಿದ್ದು ಸಹ ತಪ್ಪು.
- ಈಗ ರಾಜಕೀಯ ಪಕ್ಷಗಳು ನೀಡಿರುವ 50 ವರ್ಷದ ಒಳಗಿನ ಅಭ್ಯರ್ಥಿಗಳ ಯೋಗ್ಯತೆ ಮತ್ತು ಘನತೆ ವಿಚಾರದಲ್ಲಿ ಹೋಲಿಸಿ ಸೀಟ್ ನೀಡುವ ಕಾಯಕ ಮಾಡಲು ಹೊರಟಾಗ vinaykumar GB ರವರು ಮೊದಲ ಸ್ಥಾನ ಎಂಬುದು ಸುಳ್ಳಲ್ಲ ಎಂದು ನಿಮ್ಮ ಅರಿವಿಗೆ ಇದೆ ಎಂಬುದು ಸತ್ಯ. ಇದು ನೀವು ನಿಮ್ಮ ಆತ್ಮ ಸಾಕ್ಷಿ ಗೆ ಮಾಡಿದ ಮೋಸ.
- ನಮ್ಮ ಸಮುದಾಯದ ಜನಸಂಖ್ಯೆಯ ಅನುಗುಣವಾಗಿ ನಮ್ಮ ಹಕ್ಕು ಕನಿಷ್ಠ 6 MP ಹಾಗೂ ಕನಿಷ್ಠ 45 MLA ಗಳು ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮುಂದೆ ಯಾರು ಬರುವುದಿಲ್ಲ ಎಂಬ ಕಾರಣ. ಆದರೆ ಮುಂದೆ ಬಂದರೆ ಗುದ್ದಾ ಹಿಂದೆ ಬಂದರೆ ಒದ್ದೇ ಬಿಡುವ ನಿಮ್ಮ ಹಾಗೂ ನಿಮ್ಮ ಸಮಾಜದ ಮುಖಂಡರ ಧೋರಣೆ
ಇನ್ನಾದರೂ ನೀವು ಬೆಳೆದ ಬೆಳೆಸಿಕೊಂಡ ಸಮಾಜದ ಬಗ್ಗೆ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಲು ನಿಮ್ಮ ಸಮಾಜಕ್ಕೆ ದಾರಿ ದೀಪ ವಾಗಬೇಕು ಎಂದು ಕಳಕಳಿ ಇಂದ ಬೇಡಿ ಕೊಳ್ಳುತ್ತದೆ
ಇಂತಿ
ನಿಮ್ಮ ಸಮಾಜ (ಅಹಿಂದ ವರ್ಗ)