Saturday, December 21, 2024
Homeರಾಜಕೀಯಮತದಾನದ ಮಾರನೆಯ ದಿನದಿಂದಲೇ ದನಿವರಿಯದೆ ವಿನಯ್ ಕುಮಾರ್ ಜನರ ಭೇಟಿ ಅಹವಾಲು ಆಲಿಕೆ

ಮತದಾನದ ಮಾರನೆಯ ದಿನದಿಂದಲೇ ದನಿವರಿಯದೆ ವಿನಯ್ ಕುಮಾರ್ ಜನರ ಭೇಟಿ ಅಹವಾಲು ಆಲಿಕೆ

ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ಬಳಿ ನಿರ್ಮಿಸಿರುವ 22 ಕೆರೆಗಳ ಏತ ನೀರಾವರಿ ಯೋಜನೆಯ ಅಂಗವಾಗಿ
ದಾವಣಗೆರೆ ತಾಲೂಕು ಮತ್ತು ಜಗಳೂರು ತಾಲೂಕಿನ ಸುಮಾರು 22 ಕೆರೆಗಳಿಗೆ ನೀರು ಉಣಿಸುವ ಈ ಬೃಹತ್ ಯೋಜನೆಯ ಪ್ರತಿಫಲವೇ ತುಪ್ಪದಳ್ಳಿ ಕೆರೆಗೆ ಏತ ನೀರಾವರಿ
ಆದರೆ ಈ ಯೋಜನೆ ಕೆಲವು ಕಾರಣಗಳಿಂದ ಕುಂಠಿತಗೊಂಡಿದ್ದು
ಇಂದು ಚಿಕ್ಕಉಜಿನಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಪಕ್ಷೇತರ ಅಭ್ಯರ್ಥಿ ಜಿ ಬಿ ವಿನಯ್ ಕುಮಾರ್ ಅವರು ತುಪ್ಪದಳ್ಳಿ ಕೆರೆಯನ್ನ ವೀಕ್ಷಣೆ ಮಾಡುತ್ತಿರುವುದು,
ರೈತರ ಜೀವ ಜಲ ಕೆರೆಗಳು
ಕೆರೆ ಇದ್ದರೆ ಊರು ಜನ ಜಾನುವಾರಗಳು
ಇಂಥ ಮೂಲ ಸಮಸ್ಯೆಯನ್ನ ಅರಿತ ವಿನಯ್ ಕುಮಾರ್ ಅವರು ಕೆರೆ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿರುವುದು….

ಲೋಕಿಕೆರೆಯ 105 ವರ್ಷದ ಹಿರಿಯಜ್ಜಿಯ ಭೇಟಿ ಆರೋಗ್ಯ ವಿಚಾರಣೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಲೋಕಿಕೆರೆ ಹೋಬಳಿ
ಲೋಕಿಕೆರೆ ಗ್ರಾಮದ ಹಿರಿಯ ಏಕೈಕ ಜೀವ 105 ವರ್ಷದ ಸಣ್ಣಪ್ಲ ತಿಮ್ಮಮ್ಮ. ದಾವಣಗೆರೆ ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆಯವರ ತಾಯಿ
ಕಳೆದ ವಾರಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು
ಸುದ್ದಿ ತಿಳಿದ ದಾವಣಗೆರೆ ಪಕ್ಷೇತರ ಪ್ರಬಲ ಅಭ್ಯರ್ಥಿ
ಜಿಬಿ ವಿನಯ್ ಕುಮಾರ್
ಇಂದು ಅವರ ಲೋಕಿಕೆರೆ ನಿವಾಸಕ್ಕೆ ಭೇಟಿ ನೀಡಿ
ಆರೋಗ್ಯ ವಿಚಾರಿಸಿ, ಹಿರಿಯ ಜೀವ ತಿಮ್ಮಮ್ಮನವರು ಶೀಘ್ರ ಗುಣ ಮುಖರಾಗಲೆಂದು ಹಾರೈಸಿದರು,

ಎಸ್.ಎಸ್.ಎಲ್.ಸಿ ಜಿಲ್ಲೆಯ ಟಾಪರ್ ಭೇಟಿ ಗೌರವ ಅರ್ಪಣೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಟಾಪರ್ ಆಗಿರುವ ಶ್ರೀ ಸಿದ್ಧಗಂಗಾ ಪ್ರೌಢಶಾಲಾ ವಿದ್ಯಾರ್ಥಿನಿ, ಶಾಮನೂರು ಸಮೀಪದ ಜೆ.ಹೆಚ್.ಪಟೇಲ್ ಬಡಾವಣೆ ನಿವಾಸಿ, ವರ್ತಕ ಹೆಚ್.ಎನ್. ಗಿರೀಶ್ ಹಾಗೂ ಜ್ಯೋತಿ ದಂಪತಿ ಪುತ್ರಿ ಹೆಚ್.ಜಿ.ಗಾನವಿ ಅವರನ್ನು ಅವರ ನಿವಾಸಕ್ಕೆ ಭೇಟಿ ನೀಡಿದ ಬೆಂಗಳೂರು ಇನ್ ಸೈಟ್ಸ್ ಸಂಸ್ಥಾಪಕ ಹಾಗೂ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಗೌರವಿಸಿದರು. ಮುಂದಿನದಿನಗಳಲ್ಲಿ ಐಎಎಸ್ ಪರೀಕ್ಷೆ ಬರೆಯಲು ಆಸಕ್ತಿ ತೋರಿದರೆ ಉಚಿತ ತರಬೇತಿ ನೀಡುವುದಾಗಿ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments