Saturday, December 21, 2024
Homeಸಾರ್ವಜನಿಕ ಧ್ವನಿಚಂದ್ರಶೇಖರನ್ ಆತ್ಮಹತ್ಯೆ ಹಾಗು 87 ಕೋಟಿ ರೂ ಹಗರಣ ನ್ಯಾಯಾಂಗ ತನಿಖೆಗೆ ವಹಿಸಿ - ಸಿಪಿಐ(ಎಂ)ಆಗ್ರಹ

ಚಂದ್ರಶೇಖರನ್ ಆತ್ಮಹತ್ಯೆ ಹಾಗು 87 ಕೋಟಿ ರೂ ಹಗರಣ ನ್ಯಾಯಾಂಗ ತನಿಖೆಗೆ ವಹಿಸಿ – ಸಿಪಿಐ(ಎಂ)ಆಗ್ರಹ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ, ಅತ್ಯಂತ ದುರ್ಬಲ ಸಮುದಾಯಗಳಲ್ಲಿ ಪ್ರಮುಖವಾದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಂಚನೆ ಮಾಡಲು ನಡೆದಿದೆಯನ್ನಲಾದ 87 ಕೋಟಿ ರೂಗಳ ಹಗರಣ ಅತ್ಯಂತ ಆತಂಕಕಾರಿ ವಿಚಾರವಾಗಿದೆ. 187 ಕೋಟಿ ರೂ ಮೊತ್ತದಲ್ಲಿ ಅದರ ಸುಮಾರು ಶೇ 50 ರಷ್ಟು ಮೊತ್ತವನ್ನು ಸರ್ಕಾರದ ಮೂಗಿನ ಕೆಳಗಿರುವ ಉನ್ನತ ಹಂತದ ಅಧಿಕಾರಿ ವಲಯದಲ್ಲಿಯೆ ಲಪಟಾಯಿಸಲು ಮುಂದಾಗಿರುವುದು ಅತ್ಯಂತ ಗಂಭೀರ ಹಾಗು ತೀವ್ರ ಖಂಡನೀಯ ವಿಚಾರವಾಗಿದೆ. ಇದು ದುರ್ಬಲ ಸಮುದಾಯಗಳ ಫಲಾನುಭವಿಗಳಿಗೆ ಸರ್ಕಾರದ ನೆರವು ಸಿಗದಂತೆ ಉನ್ನತ ವಲಯದಲ್ಲಿಯೆ ಹೇಗೆ ಲಪಟಾಯಿಸಲಾಗುತ್ತದೆ ಎಂಬುದರ ಸ್ಪಷ್ಟ ಚಿತ್ರಣ ನೀಡಿದೆ.

ಸದರಿ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿ ನಿಗಮದ ಕೇಂದ್ರ ಕಛೇರಿಯ ಅಧೀಕ್ಷಕ ಶ್ರೀ ಚಂದ್ರಶೇಖರನ್ ಮಾನಸಿಕ ಒತ್ತಡ ಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆಯು ಘಟಿಸಿದೆ.
ಈ ಎಲ್ಲ ಪ್ರಕರಣದ ಹಿಂದೆ ಕಾಣದ ಕೈಗಳು ಇಲ್ಲವೆನ್ನಲು ಹಳೆಯ ಅನುಭವಗಳು ಅವಕಾಶ ನೀಡುತ್ತಿಲ್ಲ.

ಈ ಒಟ್ಟು ಪ್ರಕರಣದ ಮೂಲವನ್ನು ಬೇಧಿಸಲು, ರಾಜ್ಯದ ಜನತೆಯ ಆತಂಕವನ್ನು ನಿವಾರಿಸಲು ಮತ್ತು ಸತ್ಯವೇನೆಂದು ತಿಳಿಯುವಂತಾಗಲು ನೇರ ಸರಕಾರದ ನಿಯಂತ್ರಣ ದಿಂದ ಸ್ವತಂತ್ರವಾದ ನ್ಯಾಯಾಂಗದ ಸುಪರ್ಧಿಯಲ್ಲಿ ನ್ಯಾಯಾಂಗ ತನಿಖೆ ನಡೆಸುವುದೊಂದೆ ಸರಿಯಾದ ವಿಧಾನವಾಗಿದೆ.

ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೆ ಪ್ರಕರಣವನ್ನು ನ್ಯಾಯಾಂಗದ ತನಿಖೆಗೆ ವಹಿಸಬೇಕೆಂದು ಮುಖ್ಯ ಮಂತ್ರಿಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ದಾವಣಗೆರೆ ಜಿಲ್ಲಾ ಸಮಿತಿ ಬಲವಾಗಿ ಒತ್ತಾಯಿಸುತ್ತದೆ ಮತ್ತು ಈ ಕೂಡಲೆ ಡೆತ್ ನೋಟ್ ನಲ್ಲಿ ಹೆಸರಿಸಲಾದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಲಾಗಿದೆಎಂದು ಕಾರ್ಯದರ್ಶಿ ಆನಂದರಾಜು ಕೆ.ಹೆಚ್.ತಿಳಿಸಿದ್ದಾರೆ.


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments