Saturday, December 21, 2024
Homeಸಂಸ್ಕೃತಿಯಶಸ್ವಿಯಾಗಿ ನಡೆದ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಎರಡನೇ ಬಾರಿಗೆ 9...

ಯಶಸ್ವಿಯಾಗಿ ನಡೆದ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಎರಡನೇ ಬಾರಿಗೆ 9 ನವ ಜೋಡಿಯ ಸಾಮೂಹಿಕ ಮದುವೆ.

ದಾವಣಗೆರೆ:ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ (MCT) ಸುಮಾರು ಮೂರು ವರುಷಗಳಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಭಾಷಾ ನಗರದಲ್ಲಿ ಮೆಹಬೂಬ್ ಎ ಇಲಾಹಿ ಆಸ್ಪತ್ರೆಯೂ ಕೂಡ ನಡೆಸುತ್ತಿದ್ದು ಹಲವು ಸಲ ಉಚಿತವಾಗಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಆ ಭಾಗದ ಜನರಿಗೆ ಬಹಳ ಅನುಕೂಲಕರವಾಗಿದ್ದು ಇದೆ MCT ಟ್ರಸ್ಟ್ ನ ವತಿಯಿಂದ ಕಳೆದ ಸಲ ಏಳು ಸಾಮೂಹಿಕ ವಿವಾಹಗಳನ್ನು ಮಾಡಿದ್ದು,
ಈ ಬಾರಿ ದಿನಾಂಕ 30/05/2024 ರ ಗುರುವಾರ ಮದ್ಯಾಹ್ನ 12:30 ರಿಂದ
ತಾಜ್ ಪ್ಯಾಲೇಸ್ ನಲ್ಲಿ ನಮ್ಮ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಎರಡನೇ ಬಾರಿಗೆ 9 ನವ ಜೋಡಿಯ ಸಾಮೂಹಿಕ ಮದುವೆಗಳನ್ನು
ತಂಜಿಮ್ ಉಲ್ಮಯೇ ಅಹಲೇ ಸುನ್ನತ್ ದಾವಣಗೆರೆ ಇವರ ಅಧ್ಯಕ್ಷತೆಯಲ್ಲಿ ಮತ್ತು ಸಮಾಜದ ಎಲ್ಲಾ ಮುಖಂಡರ ಸಮ್ಮುಖದಲ್ಲಿ ಬಹಳ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಈ ಮದುವೆಗಳು ನಡೆದಿರುತ್ತದೆ,

ಒಂದೊಂದು ಮದುಮಗ ಹಾಗೂ ಮದುಮಗಳಿಗೆ ಚಿನ್ನ ಬೆಳ್ಳಿ ಬೀರು ಮಂಚ ಗಾದೆ ಐದು ಜೊತೆ ಬಟ್ಟೆ ಇನ್ನು ಮುಂತಾದ ಅವರಿಗೆ ಆಗುವ ಅವಶ್ಯಕತೆಯ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟಿರುತ್ತೇವೆ ಇನ್ನು ಈ ಮದುವೆಗೆ ಬಂದಂತಹ ಸುಮಾರು 3000 ಜನರಿಗೂ ಊಟದ ವ್ಯವಸ್ಥೆಯನ್ನು ಮಾಡಿರುತ್ತೇವೆ ಮತ್ತು ಈ ಒಂದು ಸುಂದರ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ 9 ನವ ಜೋಡಿಯ ಕುಟುಂಬದವರು, ಮಸೀದಿಯ ಎಲ್ಲಾ ಉಲ್ಮಗಳು, ಸಮಾಜದ ಮುಖಂಡರು, ರಾಜಕೀಯ ಮುಖಂಡರು, ತಂಜೀಮುಲ್ ಮುಸ್ಲಿಂಮುನ್ ಫಂಡ್ ಅಸೋಸಿಯೇಷನ ಸದಸ್ಯರುಗಳು,

ದಾವಣಗೆರೆ ವಖ್ಫ್ ಬೋರ್ಡ್ ಚೇರ್ಮನ್ ಮತ್ತು ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರುಗಳು, ಸಮಾಜದ ಯುವಕರುಗಳು ಹಾಗೂ ಬಹಳಷ್ಟು ಸಾಮಾನ್ಯ ಜನರು ಕೂಡ ಬಂದು ಈ ಒಂದು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೈಜೋಡಿಸಿ ಯಶಸ್ವಿ ಮಾಡಿಕೊಟ್ಟಂತ ಎಲ್ಲರಿಗೂ ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಯು ಎಂ ಮನ್ಸೂರ್ ಅಲಿ ಕಾರ್ಯದರ್ಶಿಯಾದ ಮೊಹಮ್ಮದ್ ಶರೀಫ್ ಮತ್ತು ಟ್ರಸ್ಟ್ ನ ಎಲ್ಲಾ ಟ್ರಸ್ಟಿ ಗಳು ಮತ್ತು ಸದಸ್ಯರ ಪರವಾಗಿ ಅನಂತ ಅನಂತ ಅಭಿನಂದನೆಗಳು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಈ ಟ್ರಸ್ಟ್ ವತಿಯಿಂದ ಇನ್ನೂ ಸಾಮಾಜಿಕ ಮತ್ತು ಬಡವರ ಪರವಾಗಿ ಆ ದೇವರು ಮೆಚ್ಚುವಂತ ಕೆಲಸ ಮಾಡಲಿ ಎಂದು ಆಶಿಸುತ್ತೇವೆ ಎಂದು ಮೆಹಬೂಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು ಎಂ ಮನ್ಸೂರ್ ಅಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments