ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಕೆಟ್ಟು ನಿಂತಿರುವ ಲಿಫ್ಟನ್ನು ಸರಿಪಡಿಸಿ ಅಥವಾ ಗುಣಾತ್ಮಕವಾದ,
ನೂರರಷ್ಟು ಸುರಕ್ಷಿತವಾದ ಹೊಸ ಲಿಫ್ಟನ್ನು ಅಳವಡಿಸಿ ವಿಶೇಷ ಚೇತನರಿಗೆ,ವೃದ್ಧರಿಗೆ ಕಚೇರಿಗೆ ಬಂದು ಹೋಗಲು ಅನುಕೂಲಕರ ಮಾಡಿಕೊಡಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್.
ಸ್ವಾಮಿಯವರು ಜಿಲ್ಲಾಡಳಿತಕ್ಕೆ ವಿನಂತಿಸಿಕೊ0ಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಕೆಲಸ ಮಾಡುತ್ತಿರುವ ಒಬ್ಬ ವಿಶೇಷ ಚೇತನ
ಮಹಿಳೆಯು, ದಿನನಿತ್ಯ ೨೭ ಕಡಿದಾದ ಲೋಹದ ಮೆಟ್ಟಲುಗಳನ್ನು ಕೈ ಉರಿಕೊಂಡು, ತೆವಳುತ್ತಾ ಮೊದಲನೆ ಮಹಡಿಗೆ ದಿನನಿತ್ಯ ಕೆಲಸಕ್ಕೆ ಹೋಗಿ ಬರುವ ದೃಶ್ಯ ಎಲ್ಲರ ಮನ ಕರಗಿಸುವಂತಿದೆ. ಇAಥವರ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ವಿನAತಿಸಿಕೊAಡಿದ್ದಾರೆ.
ಸದ್ಯ ಡಿಸಿ ಕಚೇರಿಯಲ್ಲಿ ಮೊದಲನೇ ಮಹಡಿ ತಲುಪಲು ವಿಶೇಷ ಚೇತನರಿಗೆ, ವೃದ್ಧರಿಗೆ, ಅಸಹಾಯಕ ಜನರಿಗೆ ಮೆಟ್ಟಲು ಹತ್ತುವ
ವ್ಯವಸ್ಥೆ ಶಿಕ್ಷೆಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಯಾರಾದರೂ ವಿಶೇಷ ಚೇತನರು, ವಯಸ್ಸಾದವರು, ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದಾಗ ರ‍್ಯಾಂಪ್ ವ್ಯವಸ್ಥೆ ಅಥವಾ ಲಿಫ್ಟ್ ವ್ಯವಸ್ತೆ ಕಲ್ಪಿಸಬೇಕಾದ್ದು ಮಾನವೀಯತೆಯ ದೃಷ್ಟಿಯಿಂದ ಅವಶ್ಯಕವಾಗಿದೆ. ಕಟ್ಟಡ
ಹಳೆಯದಾಗಿರುವುದರಿಂದ, ಅದಕ್ಕೆ ರ‍್ಯಾಂಪ್ವ್ಯ ವಸ್ಥೆ ಕಲ್ಪಿಸಲು ಸಾಧ್ಯವೇ ಇಲ್ಲ ಹಾಗಾಗಿ ಲಿಫ್ಟನ್ನೆ ಉತ್ತಮ ರೀತಿಯಲ್ಲಿ ಸರಿಪಡಿಸಿ,
ಬಳಸಬೇಕಾಗಿದೆ ಎಂದರು.
ಬಹಳಷ್ಟು ವರ್ಷಗಳ ಹಿಂದೆಯೇ ಡಿಸಿ ಕಚೇರಿಯಲ್ಲಿ ಅಂಗವಿಕಲರಿಗೆ ಮಹಡಿ ಹತ್ತಲು ಅನುಕೂಲಕರವಾಗಲೆಂದೇ
ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಆ ಲಿಫ್ಟ್ ಬಹಳ ದಿವಸದಿಂದ ಕೆಲಸ ಮಾಡದೆ ಪೂರ್ತಿಯಾಗಿ ಕೆಟ್ಟು ನಿಂತಿರುವುದರಿAದ
ವಿಶೇಷ ಚೇತನರಿಗೆ ಮತ್ತು ವೃದ್ಧರಿಗೆ ಡಿಸಿ ಕಚೇರಿಗೆ ಮಹಡಿ ಹತ್ತುವುದುಕಷ್ಟಕರವಾಗಿ ಪರಿಣಮಿಸಿದೆ ಎಂದು ಜನರು
ಮಾತನಾಡುತ್ತಿದ್ದಾರೆ ಎಂದರು.
ಇAದು ಸಾಮಾನ್ಯವಾಗಿ ಯಾವುದಾದರೂಂದು ಕಚೇರಿಯಲ್ಲಿ ಒಂದು ವ್ಯವಸ್ಥೆ ಕೆಟ್ಟು ನಿಂತರೆ, ಅದನ್ನ ರಿಪೇರಿ ಮಾಡಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ, ವಯಸ್ಸಾದ ಸಾರ್ವಜನಿಕರಿಗೆ, ವಿಶೇಷ ಚೇತನರಿಗೆ
ಬದುಕನ್ನ ಎದುರಿಸುವುದು ಕಷ್ಟಕರವಾಗುತ್ತಿದೆ. ಮಧ್ಯೆ ಮಧ್ಯೆ ಕೆಟ್ಟ ನಿಲ್ಲುವ, ಬಾಗಿಲು ತೆಗೆದುಕೊಳ್ಳಲಾರದ ಲಿಫ್ಟ್ನಲ್ಲಿ
ಬಹಳಷ್ಟು ಜನ ಸಿಕ್ಕಿಹಾಕಿಕೊಂಡು, ಭಯಭೀತರಾಗಿ, ಈಗ ಯಾರೂ ಸಹ ಆ ಲಿಫ್ಟನ್ನು ಬಳಕೆ ಮಾಡದೆ ಹಾಗೆ ನಿಲ್ಲಿಸಿದ್ದಾರೆ
ಎಂದರು.
ಅಲ್ಲಿಯೇ ಕೆಲಸ ಮಾಡುವ ಸಿಬ್ಬಂದಿಯವರೇ ಸಾರ್ವಜನಿಕರನ್ನು ಬಳಕೆ ಮಾಡದಿರುವಂತೆ ಎಚ್ಚರಿಸುತ್ತಾರೆ. ಬಹಳಷ್ಟು ಸಾರಿ ರಿಪೇರಿ
ಮಾಡಿಸಿದರು ಸಹ ಅದು ಮತ್ತೆ ಮತ್ತೆ ಕೆಟ್ಟ ನಿಲ್ಲುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ವಾಸಿ ಮಾಡಲಾರದ
ಕಾಯಿಲೆಯಂತೆ, ಲಿಫ್ಟ್ ರಿಪೇರಿ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿದೆ ಎಂದರೆ ಅದನ್ನು ಪೂರ್ಣವಾಗಿ ಬದಲಾಯಿಸುವುದೇ
ಉತ್ತಮ ಎನ್ನುತ್ತಿದ್ದಾರೆ.ಹಾಗಾಗಿ ಅಧಿಕಾರಿಗಳು ಆ ಲಿಫ್ಟನ್ನು ಪೂರ್ಣ ಪ್ರಮಾಣದಲ್ಲಿ ಬದಲಾಯಿಸಿ, ರೈಲ್ವೆ
ಇಲಾಖೆಯವರು ಬಳಕೆ ಮಾಡುತ್ತಿರುವಂತಹ ಗುಣಾತ್ಮಕವಾದAತ ಹಾಗೂ ನೂರರಷ್ಟು ಸುರಕ್ಷಿತವಾದ ಲಿಫ್ಟ್ನ್ನು
ಅಳವಡಿಸಿ, ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ, ವೃದ್ಧರಿಗು ಸಹ ಆದ್ಯತೆ, ಗೌರವ, ಬದುಕುವ ಅವಕಾಶಗಳನ್ನು
ಕಲ್ಪಿಸಿಕೊಡಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ ಎಂಬ ಸಂದೇಶವನ್ನ ಸಮಾಜಕ್ಕೆ ರವಾನಿಸಲಿ
ಎಂದು ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊAಡಿದ್ದಾರೆ.
೨೭ ಕಡಿದಾದ ಲೋಹದ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಾದರೆ ಅಂಗವಿಕಲರಿಗೆ, ವೃದ್ಧರಿಗೆ ಗಟ್ಟಿ ಹೃದಯ ಬೇಕು. ಸ್ವಲ್ಪ
ಹೆಚ್ಚು ಕಮ್ಮಿಯಾದರೂ ಸಹ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವಂತಹ ಸAದರ್ಭಗಳಿವೆ. ಚಿತ್ರದುರ್ಗದ ಡಿಸಿ ಕಚೇರಿ
ಒಂದೇ ಮಹಡಿಯನ್ನ ಹೊಂದಿರುವುದರಿAದ, ಬಹಳಷ್ಟು ಗಟ್ಟಿ ಜನ ಲಿಫ್ಟ್ ಇಲ್ಲದೆ ಹತ್ತಿ ಇಳಿದು ಕಾರ್ಯನಿರ್ವಹಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆ ಲಿಫ್ಟಿನ ಅವಶ್ಯಕತೆ ಯಾರಿಗೂ ಅಷ್ಟಾಗಿ ಕಾಣುತ್ತಿಲ್ಲ. ಆದರೆ ವಿಶೇಷ ಚೇತನರಿಗೆ ಮತ್ತು ವೃದ್ಧರಿಗೆ ಇದು ಬಹಳ ಅವಶ್ಯಕವಾಗಿದೆ. ಅರ‍್ಯಾರು ಈಗ ಸದ್ಯ ಮಹಡಿ ಮೇಲಿರುವ ಜಿಲ್ಲಾಧಿಕಾರಿಗಳನ್ನು, ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂದರು.
ವಿಶೇಷ ಚೇತನರಿಗೆ ಮತ್ತು ವೃದ್ಧರ ಪರವಾಗಿ ಚಿಂತಿಸಲು ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ವಿನಂತಿ ಪತ್ರ ನೀಡಿ, ಆದಷ್ಟು ಶೀಘ್ರವಾಗಿ ಕಚೇರಿಗೆ ಲಿಫ್ಟ್ ಅನ್ನು ಸರಿಪಡಿಸಿ,
ಅವರ ಕಷ್ಟಗಳನ್ನ ಪರಿಹರಿಸಿಕೊಡಬೇಕೆಂದು ಹಾಗೂ ಕಛೇರಿಯ ಆವರಣದ ಬಳಿ ಒಂದು ಗಾಲಿ ಕುರ್ಚಿಸಹ ಒದಗಿಸಬೇಕೆಂದು ಡಾ. ಎಚ್ ಕೆ ಎಸ್.ಸ್ವಾಮಿಯವರು ವಿನಂತಿಸಿಕೊAಡಿದ್ದಾರೆ.
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ಲಿಫ್ಟನ್ನು ಸರಿಪಡಿಸಿ ವಿಶೇಷ ಚೇತನರಿಗೆ, ವೃದ್ಧರಿಗೆ ಸಹಾಯ ಮಾಡಿ ಎಂದು ಮನವಿ.
RELATED ARTICLES