ಮೊದ ಮೊದಲು ಈ ಸಂಸ್ಥೆಯ ಹಿನ್ನೆಲೆ, ಇದರ ಸಂಸ್ಥಾಪಕರು,ಈ ಸಂಸ್ಥೆಗೆ ಬಂಡವಾಳ ಹಾಕಿದವರು ಯಾರು?,ಈ ಸಂಸ್ಥೆಯ ಉದ್ದೇಶ ಏನು? ಅಂಥ ಯಾರಿಗೂ ಗೊತ್ತಿರಲಿಲ್ಲ ಮತ್ತು ಯಾರೂ ಕೂಡ ಈ ಸಂಸ್ಥೆಯ ಹಿನ್ನೆಲೆ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡು ಶೋಧನೆ ಮಾಡಿರಲಿಲ್ಲ.ಈ ಸಂಸ್ಥೆಯೂ ಕೂಡ ಆರಂಭದಲ್ಲಿ ಎಡಪಂಥೀಯರ ವೇದಿಕೆಯೇನೋ ಎನ್ನುವಷ್ಟರ ಮಟ್ಟಿಗೆ ಎಡಪಂಥೀಯರನ್ನೇ ಹೆಚ್ಚು ಒಳಗೊಳ್ಳುತ್ತಾ ನಿಧಾನವಾಗಿ ಬಲಪಂಥೀಯರನ್ನು ಒಳಗೊಳ್ಳುತ್ತಾ ಆಗ ಬಂದ ಟೀಕೆಗೆ ನಮ್ಮದು ವ್ಯಾಪಾರ ಸಂಸ್ಥೆ ಬಲಪಂಥೀಯರೇ ಇರಲಿ ಎಡಪಂಥೀಯರೇ ಇರಲಿ ಅಥವಾ ಇನ್ಯಾರೇ ಇದ್ದರೂ ಎಲ್ಲರನ್ನೂ ಒಳಗೊಳ್ಳುವ ಸಾಹಿತ್ಯದ ವೇದಿಕೆ ಎಂದು ಆಗಲೇ ಘೋಷಿಸಿಕೊಂಡು ಆಗಿದೆ.
ಈಗೇನಿದ್ದರೂ ನಮ್ಮ ನಿಲುವು ಪ್ರಕಟಪಡಿಸುವ ಸಮಯ ಆಳ್ವಾಸ್ ನುಡಿಸಿರಿಗೆ ಹೇಗೆ ಎಡಪಂಥೀಯರು ಯಾರೂ ಭಾಗವಹಿಸಬಾರದೆನ್ನುವ ನಿರ್ದಾರಕ್ಕೆ ಬಂದೆವೋ ಅದೇ ರೀತಿಯಲ್ಲಿ ನಿರ್ಧರಿಸಬೇಕಾದ ಸಮಯ ಬಂದಿದೆ.
ಬುಕ್ ಬ್ರಹ್ಮ ಒಂದು ಸಾಹಿತ್ಯದ ವೇದಿಕೆ ಎಂಬ ಬ್ರಮೆಯಿಂದ ಆ ವೇದಿಕೆ ಮೇಲೆ ಮೊಟ್ಟ ಮೊದಲ ಬಾರಿಗೆ ಆರ್ ಎಸ್ ಎಸ್ ವ್ಯಕ್ತಿ ಕಾಣಿಸಿಕೊಂಡಾಗಲೇ ನಾನು,ಟಿ ಎನ್ ಷಣ್ಮುಖ,ಕೆ ನಂದಕುಮಾರ ನಾವೆಲ್ಲ ಪರಸ್ಪರ ಮಾತಾಡಿಕೊಂಡು ಸಂಶಯದಿಂದ ನೋಡುತ್ತಿರುವಾಗಲೇ
ಶ್ರೀ ವಸಂತ ಬನ್ನಾಡಿಯವರು ಬುಕ್ ಬ್ರಹ್ಮದ ಕುರಿತು ತಮ್ಮ ಕಟುಟೀಕೆಯಿಂದ
ಸಾಹಿತ್ಯಲೋಕವನ್ನು ಎಚ್ಚರಿಸುತ್ತಾ ಬರತೊಡಗಿದ್ದಾರೆ.
ಈಗ ಸಾಹಿತ್ಯ ಲೋಕದ ಸರದಿ
ನಿಮ್ಮ ನಿಲುವೇನು?
ಬುಕ್ ಬ್ರಹ್ಮದಲ್ಲಿ ಭಾಗವಹಿಸುತ್ತೀರಾ?ದೂರ ಉಳಿಯುತ್ತೀರಾ? ಮೇಲೆ ಹೆಸರಿಸಿದ ನಾವುಗಳು ಬುಕ್ ಬ್ರಹ್ಮದಿಂದ ಪ್ರಸಾರವಾದ ಸಂದರ್ಶನದ ಪಠ್ಯ ವಿಡಿಯೋ ಕಾರ್ಯಕ್ರಮಗಳ ವರದಿ ವಿಡಿಯೋ ನೋಡುವುದನ್ನು ತುಂಬಾ ದೀರ್ಘ ಸಮಯದ ಹಿಂದೆಯೇ ಬಿಟ್ಟು ಬಿಟ್ಟಿದ್ದೇವೆ