ಮೂಡಲಗಿ:ಜೂ,24-ತಾಲೂಕಿನ ಗುರ್ಲಾಪುರದಲ್ಲಿ ಗ್ರಾಮದಲ್ಲಿ ‘ಕಾರ
ಹುಣ್ಣಿಮೆ’ ವಿಜ್ರಂಭಣೆಯಿಂದ ಆಚರಣೆ ಎತ್ತುಗಳಿಗೆ ಬಣ್ಣ ಹಚ್ಚಿ
ಶೃಂಗರಿಸಿ ವಾದ್ಯ ಮೇಳದೊಂದಿಗೆ ಮೆರವಣಿಗೆಯ
ಮುಖಾಂತರ ಗ್ರಾಮದ ಮುಖ್ಯದ್ವಾರದಲ್ಲಿ ಎರಡು ಎತ್ತುಗಳಿಗೆ
ಮುಂಗಾರಿ ಮತ್ತು ಹಿಂಗಾರಿ ಅಂತ ಹೆಸರಿಟ್ಟು ಪೂಜೆ ಸಲ್ಲಿಸಿ ಕರಿ ಹರಿಸಲಾಯಿತು.
ಈ ವೇಳೆಯಲ್ಲಿ ಮುಂಗಾರಿ ಎತ್ತು ಮೊದಲು ಬಂದಿದ್ದರಿಂದ ಮುಂಗಾರಿ
ಪಸಲು ಚೆನ್ನಾಗಿ ಬರುವುದು ಎಂದು ಗ್ರಾಮದ ಮುಖಂಡರು
ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಗುರು
ಹಿರಿಯರು ಹಾಜರಿದ್ದರು.
ಕಾರ ಹುಣ್ಣಿಮೆ ಇಲ್ಲಿಂದ ಆರಂಭವಾಗುವುದು ಮಣ್ಣು ಪೂಜೆ.ನಮ್ಮ ಪುರ್ವಜರು ಮಣ್ಣಿಗೆ ಎಷ್ಟು ಬೆಲೆ,ಗೌರವ ಅಥವಾ ಭಕ್ತಿ ಇಟ್ಟುಕೊಂಡಿದರು ಅನ್ನುವುದು ಗೊತ್ತಾಗುತ್ತದೆ.ಎತ್ತುಗಳನ್ನು ಮಣ್ಣಿನಿಂದ ತಯಾರಿಸಿ ಪೂಜೆ ಮಾಡುವುದು ಮೊದಲಿಂದು ಆಚರಣೆಯ ನಡೆದುಕೊಂಡು ಬಂದಿರುತ್ತದೆ.ಗ್ರಾಮದಲ್ಲಿ ಸ್ಥಳೀಯ ಕಟ್ಟೆ ಪುರಾಣದ ಪ್ರಕಾರ ಜೋಡೆತ್ತು ಷರತ್ತುಗಳಿಗೆ ನಿಲ್ಲಿಸುವುದು ಹಿಂಗಾರಿ ಮತ್ತು ಮುಂಗಾರಿ ಅಂತ ಹೆಸರಿಟ್ಟು ಓಡಿಸುವುದು, ಅದರಲ್ಲಿ ಯಾವುದು ಮುಂದೆ ಬರುತ್ತದೆ ಅದರ ಮೇಲೆ ಆ ವರ್ಷದ ಬೆಳೆ/ಮಳೆ ಬಗ್ಗೆ ತಿಳಿದುಕೊಳ್ಳುವ ವಾಡಿಕೆ.ಕಾರ ಹುಣ್ಣುಮೆ ಮಜವಾಗಿರುತ್ತದೆ,ಬಿಸಿಲಿನ ತಾಪಮಾನ ಮುಗಿದು ಮೋಡ ಮುಸಕಿನ ವಾತಾವರಣ ಉಲ್ಲಾಸಕರ.ರೈತರ ಮನೆಯಲ್ಲಿ ಹಬ್ಬದ ಸಡಗರ ಎತ್ತುಗಳು ಶೃಂಗರಿಸುವುದು ಬಹಳ ಖುಷಿಯಿಂದ ಆಚರಣೆ ಮತ್ತು ಮನೆಯಲ್ಲಿ ಸಿಹಿ ತಿಂಡಿ ಮಾಡುತ್ತಾರೆ.