ದಾವಣಗೆರೆ:ದಾವಣಗೆರೆ ಹೊರವಲಯದ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಎಸ್.ಓ.ಜಿ.ಕಾಲೋನಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟ ಗೊಂಡು ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಐವರಲ್ಲಿ ಪಾರ್ವತಮ್ಮ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆಂದು ತಿಳಿದು ಬಂದಿದೆ ಮತ್ತು ಇನ್ನಿಬ್ಬರ ಸ್ಥಿತಿಯೂ ಬಹಳ ಚಿಂತಾಜನಕವಾಗಿದ್ದಾರೆ.
ದಾವಣಗೆರೆಯ ಆಶ್ರಯ(ಎಸ್.ಓ.ಜಿ)ಕಾಲೋನಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು ಆ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗಿದ್ದಾರೆ.ಸಾಯಂಕಾಲ ಮನೆಗೆ ಬಂದಾಗ ಅಡುಗೆ ಅನಿಲ ವಾಸನೆ ಬರ್ತಿದೆ ಎಂದು ಮಾತಾಡುತ್ತಾ ಮನೆಯ ಬೀಗ ತಗೆದು ಮನೆ ಒಳಗೆ ಹೋಗಿದ್ದಾರೆ.ಅದೆ ವೇಳೆಗೆ ಪಕ್ಕದ ಮನೆಯಲ್ಲಿರುವ ಬಿಜೆಪಿಯ ಕಾರ್ಯಕರ್ತೆ ಶ್ರೀ ಮತಿ ಪಾರ್ವತಮ್ಮ,ಅವರಮಗ ಮತ್ತು ಸೊಸೆ ಮೂವರು ಸಹಾಯಕ್ಕೆ ಒಳಹೋಗುವಷ್ಟರಲ್ಲಿ ಮನೆಯವರು ಅಡುಗೆ ಮನೆಗೆ ಹೋಗಿ ಲೈಟ್ ಆನ್ ಮಾಡಿದ್ದಾರೆ.ಮನೆಯರು ಇಬ್ಬರು ಮತ್ತು ಪಕ್ಕದ ಮನೆಯ ಪಾರ್ವತಮ್ಮ ಮತ್ತು ಅವರ ಸೊಸೆ,ಮಗ ಸೇರೆ ಒಟ್ಟು ಆರು ಜನಕ್ಕೆ ಸಿಲಿಂಡರ್ ಸ್ಪೋಟದ ರಭಸಕ್ಕೆ ಐವರೂ ತೀವ್ರ ಗಾಯಗೊಂಡಿದ್ದಾರೆ.
ಸ್ಪೋಟದ ಶಬ್ದ ಕೇಳಿ ಜನರು ಓಡಿಬಂದು ನೋಡಿ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರಾದರೂ ಪಾರ್ವತಮ್ಮ ಬದುಕುಳಿಯಲಿಲ್ಲವೆಂದು ಮಾಹಿತಿ ಬಂದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಶ್ರೀ ಮತಿ ಪಾರ್ವತಮ್ಮ ಅಸುನೀಗಿದ್ದು ನೋವಿನ ಸಂಗತಿಯಾಗಿದೆ.ಬಿಜೆಪಿಯ ಸಕ್ರೀಯ ಕಾರ್ಯಕರ್ತೆ ಪಾರ್ವತಮ್ಮ ಸ್ಥಳಿಯ ಜನರ ಕಷ್ಟ ಕಾರ್ಪಣ್ಯಗಳು ಎದುರಾದಾಗ ಅವಸ ಸಹಾಯಕ್ಕೆ ಹೋಗುವ ಮನೋಭಾವ ಹೊಂದಿರುವ ಪಾರ್ವತಮ್ಮ ತನ್ನ ಕೊನೆಯ ದಿನವನ್ನೂ ಪರರಿಗೆ ಸಹಕರಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿದ್ದಾರೆ ಅಲ್ಲದೆ ಅವರ ಮಗ ಸೊಸೆ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆಂದು ಬಿಜೆಪಿಯ ಮುಖಂಡರಾದ ಶಿವುಕುಮಾರ್ ಬಾತಿಯವರು ಮಾಹಿತಿ ನೀಡಿದ್ದಾರೆ.