ಜಗಳೂರು: ಜುಲೈ 13 ರಂದು ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ನಮ್ಮ ಕರ್ನಾಟಕ ಸೇನೆ ಪದಗ್ರಹಾಣ ಮತ್ತು ವಿಶೇಷ ಚೇತನರಿಗೆ ಸಾಧನ ಸಲಕರಣಿಗಳ ವಿತರಣೆ , ವಿಕಲ ಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯ ಕೃತಿ ಮರು ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯ ಉಪಾಧ್ಯಕ್ಷೆ ಪದವೀಧರ ಘಟಕದ ಜಯಲಕ್ಷ್ಮಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ಮೂಲಕ ತಿಳಿಸಿದ್ದರೆ.
ಇದೇ ಮಾತನಾಡಿದ ಅವರು ನಮ್ಮ ಕರ್ನಾಟಕ ಸೇನೆ ಕನ್ನಡದ ಪರವಾಗಿ ನೊಂದವರ ಧ್ವನಿಯಾಗಿ ಹೋರಾಟದ ಮೂಲಕ ನ್ಯಾಯದ ಪರ ಉದ್ದೇಶದಿಂದ ಈ ಸಂಘಟನೆ ಲೋಕಾರ್ಪಣೆ ಗೊಳ್ಳಲಿದ್ದು ಕಾರ್ಯಕ್ರಮಕ್ಕೆ ಬಸವರಾಜ್ ಪಡುಕೋಟೆ , ಶಾಸಕ ಬಿ. ದೇವೇದ್ರಪ್ಪ , ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಹೆಚ್.ಪಿ ರಾಜೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು. ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆ ಮುಖಂಡರು ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಸುಜಾತ , ಜಿಲ್ಲಾಧ್ಯಕ್ಷೆ ಮಂಜುಳಾ, ಅಬ್ದುಲ್ ಷಾ ಖಾದ್ರ ಸೇರಿದಂತೆ ಮತ್ತಿತರರಿದ್ದರು..