Tuesday, December 24, 2024
Homeಸ್ಮರಣೆಅಪರೂಪದ ಪ್ರತಿಭೆ ಅಪರ್ಣ ನಡುಗಾಲ ದಲ್ಲೇ..ಕರುನಾಡಿಗೆ ವಿದಾಯ ಹೇಳಿರುವುದು ದುಃಖಕರ:ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ

ಅಪರೂಪದ ಪ್ರತಿಭೆ ಅಪರ್ಣ ನಡುಗಾಲ ದಲ್ಲೇ..ಕರುನಾಡಿಗೆ ವಿದಾಯ ಹೇಳಿರುವುದು ದುಃಖಕರ:ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ

ಅಪರ್ಣ:ಅಂದರೆ,ನಿರೂಪಣೆ!!ನಿರೂಪಣೆ ಅಂದರೆ
ಅಪರ್ಣ!!ಒಂದು ಕಾರ್ಯಕ್ರಮವನ್ನ ಅರ್ಥಪೂರ್ಣ ವಾಗಿ,ಅಷ್ಟೇಸೊಗಸಾಗಿ,ಕುಶಲಿಯಾಗಿ ನಗು-ನಗುತ್ತಾ
ನಿರೂಪಣೆ ಮಾಡುತ್ತಿದ್ದವರು Aparna ಮಾತ್ರ.ಅವರ
ಮಾಧುರ್ಯದ ದನಿಯೂ..ಅವರಿಗೆ ವರವಾಗಿತ್ತು!!
ಹೀಗಾಗಿಯೇ ಅವರು ರಾಜಧಾನಿಯಲ್ಲಿ ನಡೆಯವ
ಬಹುತೇಕ ಸಂಸ್ಕೃತಿಕ ಕಾರ್ಯಕ್ರಮಗಳು ನಿರೂಪಕಿ
ಯಾಗಿ ನಿಯುಕ್ತಿಯಾಗುತ್ತಿದ್ದರು.ಅಪರ್ಣ ನಿರೂಪಕಿ
ಸಂಘಟಕರಿಂದ ಹಿಡಿದು ನೆರೆದ ಪ್ರೇಕ್ಷಕರವರೆಗೆ.. ಒಂದು ರೀತಿಯ ಸಂತಸ ಮತ್ತು ನಿರಾಳ.ಆಕೆಯ
ಎಲ್ಲರಿಗೂ ಅಪ್ಯಾಯಮಾನ್ಯತೆ ಹೇಗಿರುತ್ತಿತ್ತಂದರೆ
ನಮ್ಮ ಮನೆಯ ಹೆಣ್ಣುಮಗಳೇನೋ..ಎನ್ನುವಂತೆ!!
ಹೀಗೇ..ಕನ್ನಡಿಗರ ಮನ ಗೆದ್ದಿದ್ದ ಅಪರೂಪ ಅಪರ್ಣ
ಲೋಕಕ್ಕೆ ವಿದಾಯ ಹೇಳಿದ್ದಾರೆ.ಕಾಲದ ಜಾತ್ರೆಯನ್ನು
ಅರ್ಧಕ್ಕೆ ಬಿಟ್ಟು ಹೋಗಿದ್ದರೂ..ಅವರು ಕನ್ನಡಿಗರ
ಮನದಲ್ಲಿ ಅಜರಾಮರ.
“ಲಂಕೇಶ್ ಪತ್ರಿಕೆ” ಮತ್ತು ನಮ್ಮದೇ ಪತ್ರಿಕೆಯ ವಿವಿಧ ಕಾರ್ಯಕ್ರಮಗಳಲ್ಲಿ ಪ್ರೀತಿಯಿಂದ ಭಾಗವಹಿಸಿ ಇಡೀ
ವಾತಾವರಣವನ್ನು ಸಂಭ್ರಮದಲ್ಲಿಡುತ್ತಿದ್ದ,ಅಪಾರ
ಆತ್ಮೀಯ ಸಂತಸ ಹಂಚುತ್ತಿದ್ದ Aparna ಕೇವಲ
ನಿರೂಪಕಿ ಮಾತ್ರವಲ್ಲ, ಸಿನಿಮಾ ನಟಿಯಾಗಿದ್ದರು,
ಹೆಸರಾಂತ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲ್ ಅವರ
ನಿರ್ದೇಶನದ,ತರಾಸು ಅವರ “ಮಸಣದ ಹೂ”
ಕಾದಂಬರಿಯ ಚಲನ ಚಿತ್ರದ ನಾಯಕಿಯಾಗಿ ಉತ್ತಮ
ಅಭಿನಯದಿಂದ ಖ್ಯಾತರಾಗಿದ್ದರು.TN Seetaaram
ಧಾರಾವಾಹಿಗಳಲ್ಲಿ ನಟಿಸಿದ್ದರು.ಅನೇಕ TV Show
ಗಳಲ್ಲಿ ಕ್ರಿಯಾಶೀಲರಾಗಿದ್ದರು. ಗಮನಾರ್ಹ ಸಂಗತಿ
ಎಂದರೆ ಗಂಭೀರ ಓದುಗರಾಗಿದ್ದರು.Aparna ಅವರು ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಆ
ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಸಾಹಿತ್ಯ ಓದಿಕೊಂಡು
ಬಂದಿರುತ್ತಿದ್ದರು.ಬೇಕಿದ್ದರೆ.,ಸಂಘಟಕರೊಂದಿಗೆ ವಿಷಯ ಪಡೆದುಕೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸುತ್ತಿದ್ದರು.
ಇಂತಹ ಅಪರೂಪದ ಪ್ರತಿಭೆ ಅಪರ್ಣ ನಡುಗಾಲ ದಲ್ಲೇ..ಕರುನಾಡಿಗೆ ವಿದಾಯ ಹೇಳಿರುವುದು ನಿಜಕ್ಕೂ
ದುಃಖಕರ.ಹೀಗಾಗಿ,ನೋವಿನ,ಗೌರವದ
ನಮನಗಳು

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments