ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಎಲ್ಲರ ಪ್ರೀತಿಯ ಆಯಿ ಗುರುತಾಯಿ ಶತಾಯುಷಿ ಶ್ರೀ ಗೌರವ್ವ ಅಡವಯ್ಯ ಬರಗಿ ಯವರು ಇಂದು ಬೆಳಗಿನಜಾವ ಸ್ವಗ್ರಾಮ ಹೊನಗನಹಳ್ಳಿಯಲ್ಲಿ ದಿನಾಂಕ02-08-2024ರಂದು ಶುಕ್ರವಾರ ಅಂದಾಜು ವಯಸ್ಸು ನೂರಾ ಆರುವರ್ಷದ ಶತಾಯುಷಿಯ ನಿಧನದ ವಿಷಯ ಗ್ರಾಮಸ್ಥರ ದುಃಖ ತರಿಸಿತು.
ಶ್ರೀಯುತ ಗೌರವ್ವ ಅಡಿವಯ್ಯ ಬರಗಿಯವರು ಹೊನಗನಹಳ್ಳಿಯ ಗುರುಪರಂಪರೆಯ ಮನೆತನದವರಾಗಿದ್ದರೂ ಇವರ ಕುಟುಂಬಕ್ಕಿ ಒಂರ್ಧಗುಂಟೆ ಜಮೀಣುಕೂಡಾ ಇಲ್ಲಾ.ಇವರದು ಕಾಯಕ ಕುಟುಂಬ ನನಗೆ ಗೊತ್ತಿರುವ ಹಾಗೆ ಹೊನಗನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಇವರ ಪತಿಯವರು ಶೆಡ್ಡು ಹಾಕಿ ಅಲ್ಲಿ ಚಹದ ಅಂಗಡಿಯೊಂದನ್ನು ಇಟ್ಟಿದ್ದರು.ಅದರ ಹೆಸರು ಜೈಶಂಕರ್ ಟೀ ಕ್ಲಬ್ ಎಂದು ನಾವು ಚಿಕ್ಕವರಿದ್ದಾಗ ನೋಡುತಿದ್ದೆವು.ಆ ಗ್ರಾಮದಲ್ಲಿ ಅದೊಂದೆ ಚಹಾ ಹೊಟೆಲು ಇತ್ತು ಅನಿಸುತ್ತದೆ ನಂತರದ ದಿನಗಳಲ್ಲಿ ಹೆಚ್ಚಾದವು.ಆ ಒಂದೇ ಒಂದು ಟೀ ಹೊಟೆಲು ಅದು ಕಮರ್ಶಿಯಲ್ ಆಗಿರದೆ ಒಂದುಬಗೆಯಲ್ಲಿ ಧರ್ಮಛತ್ರದಂತೇ ಇತ್ತು.ಅಲ್ಲಿ ಪರಸ್ಥಳದಿಂದ ಬಂದ ಅನೇಕರಿಗೆ ತಮ್ಮ ಊರುತಲುಪಲು ಬಸ್ ಗಳು ಇಲ್ದೆ ಇದ್ದಾಗ ಅವರ ಸೆಡ್ ನಲ್ಲೇ ತಂಗುತಿದ್ದರು.ಅವರಿಗೆ ಊಟೋಪಚಾರವನ್ನು ಸಹ ಈ ತಾಯಿ ತನ್ನ ಬಂಧುಗಳಂತೆ ಕಂಡು ಅವರಿಗೆ ಉಪಚರಿಸುತಿದ್ದರು.ಕಡು ಬಡತನ ಕಾಡುತಿದ್ದರೂ ಒಂದೇ ಒಂದು ದಿವಸ ಈ ತಾಯಿಯ ಬೇಸರದ ದಿನಗಳನ್ನು ನಾವು ನೋಡಿಲ್ಲಾ.
ಅವರ ಪತಿಯ ನಿಧನದ ನಂತರ ಇವರೇ ಆ ಚಹದ ಅಂಗಡಿಯನ್ನು ನಡೆಸಿದರೂ ಸಹ ಪರಸ್ಥಳದವರು ಬಂದು ಆ ಅಂಗಡಿಯಲ್ಲಿ ಊಟಮಾಡಿದರೆ ಅವರನ್ನು ಹೊಟ್ಟೆ ತುಂಬಿಸಿ ಊಟಮಾಡಿಸಿ ಕಳಿಸುತಿದ್ದರು.ಮನೆಯ ಊಟದಂತೆ ಅವರು ಸಾಕೆಂದರೂ ಕೇಳದೆ ಹೊಟ್ಟೆತುಂಬ ಊಟ ಹಾಕಿಕಳಿಸಿದ ಈ ಮಹಾತಾಯಿ ತನ್ನ ನೂರುವರ್ಷಗಳನಂತರವೂ ಕಾಯಕ ಬಿಡದೆ ಬಿಸಿ ಬಿಸಿ ಬಜಿ ಮಾಡಿಕೊಂಡು ಗ್ರಾಮದಲ್ಲಿ ತಿರುಗುತ್ತಾ ಬಜಿ ವ್ಯಾಪಾರಮಾಡಿ ಬದುಕು ಸಾಗಿಸಿದ ಇವರು ಎಂದೂ ವ್ಯಾಪಾರಮನೋಭಾವ ಹೊಂದಿ ಜನರಿಂದ ಹೆಚ್ಚು ಲಾಭ ನಿರೀಕ್ಷಿಸಿದ್ದು ಇಲ್ಲಾ.
ನಾನು ಅವರನ್ನು ಅತ್ತೆ ಎಂದೆ ಕರೆಯುತಿದ್ದೆ ಅತ್ತೆ ವ್ಯಾಪಾರ ಸಾಕು ಬಿಡ್ರಿ ಮನೆಯಲ್ಲಿ ಇರಿ ಎಂದು ಹೇಳಿದಾಗ ತಮ್ಮಾ ಮನೆಯಲ್ಲಿ ಕುಂತು ಏನು ಮಾಡುದು ಊರಲ್ಲಿ ಎಲ್ಲರನ್ನೂ ಮಾತಾಡಿಸಿದಂತಾಗುತ್ತದೆ ತಿರುಗಾಡಿದರೂ ಕಾಲು ನರ ಸಡಿಲಾಗುತ್ತವೆ.ಎಂದು ಹೇಳುತಿದ್ದರು. ಈಗಿನ ಜಮಾನ ಮೂವತ್ತುವರ್ಷಕ್ಕೇ ಕೈಕಾಲು ನೋವೆಂದು ಮೂಲೆಸೇರುವವರು ಇರುವದಿನಗಳಲ್ಲಿ ನೂರಾ ಐದು ವರ್ಷ ಕಳೆದರೂ ಊರಲ್ಲಿ ಎಲ್ಲಾ ಓಣಿಗಳಿಗೆ ಹೋಗಿ ವ್ಯಾಪಾರದ ಜೊತೆ ಯಾವುದೇ ಜಾತಿ,ಧರ್ಮದ ಸೋಂಕು ತಗಲಿಸಿಕೊಳ್ಳದೆ ಎಲ್ಲಾರೂ ಒಂದೇ ಕುಟುಂಬಸ್ಥರು ಎನ್ನುವ ಏಕ ಮನೋಭಾವದ ಈ ಹಿಯಜ್ಜಿ ಗುರುಮಾತಾ ಶ್ರೀ ಗೌರವ್ವ ಬರಗಿಯವರು ತೀರಿಹೋಗಿದ್ದು ಬೇಸರದ ವಿಷಯ.ಸಾವಿರ ವರುಷ ವಿದ್ದರೂ ಸಾವು ತಪ್ಪದು ಆದರೆ ಈ ತಾಯಿಯು ಯಾರಿಗೂ ನೋವುಂಟುಮಾಡದೆ ತನ್ನ ಇಹ ಲೋಕ ತ್ಯಜಿದ್ದಾರೆ.ನಾನೂ ಕೂಡಾ ಇದೇ ದಿವಸ ಈ ಗ್ರಾಮಕ್ಕೆ ಬಂದಿದ್ದೇನೆ.ಈ ಗುರು ಮಾತಾ ನ ಕೊನೆಯ ದರ್ಶನ ಭಾಗ್ಯಪಡೆದ ನಾನೂ ತುಂಬು ಹೃದಯದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತಿದ್ದೇನೆ ಓಂ ಶಾಂತಿ.