ವಿಜಯಪುರ:ಆಹಾರ ಸಾರಾಬುರಾಜು ಮಾಡುವ ಸಂಜೀವಿನಿ ಮಹಿಳಾ ವಿಕಾಸ ಸೇವಾ ಸಂಘ ಕ್ಕೆ ತಕ್ಷಣವೇ ಸರಕಾರ ದಿಂದ ಕೊಡುವ ಹಣ (ಬಿಲ್) ತಡೆ ಹಿಡಿಯುವ ಹಾಗು ಗುತ್ತಿಗೆ ರದ್ದು ಗೊಳಿಸುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ವಿಜಯಪುರದಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಅಧಿಕಾರಿಗಳಿಗೆ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂಜೀವಿನಿ ಮಹಿಳಾ ವಿಕಾಸ ಸೇವಾ ಸಂಘ (ನಂದೂರು ಊರು ಶಹಬಾದ ರಸ್ತೆ, ಕಲಬುರಗಿ ತಾಲೂಕು ಕಲಬುರಗಿ ಪಿನ್ 585 209) ಹಾಗೂ ಬೆಂಗಳೂರು ಉತ್ತರ ಕೇಂದ್ರ ರಾಜ್ಯ ಮತ್ತು ಸುಮಂಗಲಿ ಸೇವಾಶ್ರಮ ತಾಲೂಕು ಮಹಿಳಾ ಪೂರಕ ಪೌಸ್ಮಿಕ ಆಹಾರ ತಯಾರಿಕಾ ಕೇಂದ್ರ ಇವರು ಡಿಸೆಂಬರ 2023 ರಿಂದ ಇಲ್ಲಿಯ ವರೆಗೆ ಅಂಗನವಾಡಿ ಕೇಂದ್ರ ಗಳಿಗೆ ಆಹಾರ. ಸಾರಾಬುರಾಜು ಮಾಡುತ್ತಿದ್ದಾರೆ.
ಡಿಸೇಂಬರ 2023 ಕಿಂತ ಪೂರ್ವದಲ್ಲಿ ಆಹಾರದ ಮೆನು ಬೇರೆ ಇತ್ತು ಮೊಳಕೆ ಕಾಳು, ಸೇಂಗಾ ಚಿಕ್ಕಿ. ಬೆಲ್ಲ, ಉಪ್ಪಿಟ್ಟು ರವೆ, ಅವಲಕ್ಕಿ, ಮೊಟ್ಟೆ, ಹಾಗು ಕಾಯಿಪಲ್ಲೆ,ಒಳ್ಳೆಣ್ಣೆ, ಮಸಾಲೆ ಖಾರ, ಅರಿಸಿನ ಪುಡಿ,ವಿವಿಧ ಬೆಳೆ ಕಾಳುಗಳು, ಇದ್ದವು ಇವುಗಳನ್ನು ಮಕ್ಕಳು ಬಾಣಂತಿಯರು ಇಷ್ಟ ಪಟ್ಟು ತಿನ್ನುತ್ತಿದ್ದರ ಎಂದು ಅಂಗನವಾಡಿ ಕಾರ್ಯಕರ್ತರು ಗ್ರಾಮಸ್ಥರು ಮಕ್ಕಳು ಹೇಳಿದ್ದಾರೆ.
ಡಿಸೇಂಬರ 2023 ರಿಂದ ಇಲ್ಲಿಯ ವರೆಗೆ ಬರಿ ಪುಡಿ ರೂಪದ ಆಹಾರ ಇದೆ ಮಿಲಕ್ ಲಾಡು ಮೊಟ್ಟೆ ಮಾತ್ರ ಇದೆ ಮಸಾಲಿ ಪುಡಿ ಕಾಳುಗಳು ಎಲ್ಲ ಕುಡಿ ಇದೆ ಮಕ್ಕಳಿಗೆ ಸಾಂಬಾರ ತಿಳಿ ಆಗಿರುವದರಿಂದ ಇಷ್ಟ ಪಡಲ್ಲ ಮಿಲೇಕ್ ಲಾಡು ಮಕ್ಕಳು ಅರ್ಧ ತಿನ್ನುತ್ತಾರೆ ಇಲ್ಲಾ ತಿನ್ನೋದೇ ಇಲ್ಲಾ ಒಟ್ಟಾರೆ ಆಹಾರವೇ ಸರಿಯಿಲ್ಲ ಎಂದು ಕಂಡು ಬರುತ್ತದೆ…
1) (BIS) Bureau of Indian tandards ವಂಚಿಸಿದ್ದಾರೆ ಆದರೆ ಇವರು ಯಾವುದೇ ಅನುಮತಿ ಪಡೆದಿಲ್ಲ ಎಂದು ಬೆಂಗಳೂರು (BIS) branch office ದಿಂದ ಈಮೇಲ್ ಕಳಿಸಿದ್ದಾರೆ ದಾಖಲೆ ಇದೆ ಲಗತ್ತಿಸಿದೆ.
2) ಅಂಗನವಾಡಿ ಕೇಂದ್ರಗಳಲ್ಲಿ ಹಲವಾರು ಕಡೆ ಮಕ್ಕಳು ಬಾಣಂತಿಯರು ಆಹಾರ ತಿರಸ್ಕರಿಸುತ್ತಿದ್ದಾರೆ ಹೀಗಾಗಿ ಮಕ್ಕಳ ದಾಖಲಾತಿ ದಿನೇ ದಿನೇ ಕಡಿಮೆ ಯಾಗುತ್ತಿದೆ… ಇದು ಶೋಚನಿಯ ಸಂಗತಿ
3 ) ಅಂಗನವಾಡಿ ಕೇಂದ್ರಗಳ ಊರುಗಳಲ್ಲಿ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಶಿಶು ಗಳು ಕೂಡ ಆಹಾರ ಸರಿ ಇಲ್ಲಾ ತಿನ್ನಲು ಇಷ್ಟ ಆಗೋದಿಲ್ಲ ಎಂದು ಆರೋಪಿಸಿದ್ದಾರೆ
4) ಹಲವು ಕಡೆ ಆಹಾರ ಕಡಿಮೆ ಪ್ರಮಾಣ ಹಾಗೂ ಕೆಲವು ಕಡೆ ಒಳ್ಳೆಣ್ಣೆ, ಉಪ್ಪಿಟ್ಟು ರವಾ ಕಾಯಿವಲ್ಲೇ ಏನು ದೊರಕಿಸಿಲ್ಲ.
5) ಆಹಾರ ಸಾರಾಬುರಾಜು ಮಾಡುವ ಸಂಜಿವಿನಿ ಹಾಗೂ ಸುಮಂಗಲಿ ಮಹಿಳಾ ಮಂಡಳಿಗಳ ಕುರಿತು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸರಿಯಾಗಿ ಮಾಹಿತಿಯೇ ಇರುವದಿಲ್ಲ ಸಂಬಂದಿಸಿರುವ ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿರುವದು ಸೂಕ್ತ ಕಾರಣವಾಗಿದೆ. ಈ ಮೇಲಿನ ಆಧಾರಗಳನ್ನು ಪರಿಶೀಲಿಸಿ ಈ ಹಗರಣ ಕೂಡಲೇ ತಡೆಗಟ್ಟಿ ಸರಕಾರದ ಹಣ ತಡೆ ಹಿಡಿದು ಸಂಜೀವಿನಿ ಹಾಗೂ ಸುಮಂಗಲಿ ಮಹಿಳಾ ಮಾಡಳಿಗೆ ಗುತ್ತಿಗೆ ರದ್ದು ಪಡಿಸಿ ಸೂಕ್ತ ಕ್ರಮ ಜರುಗಿಸಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆಗ್ರಹಿಸುತ್ತದೆ ಇಲ್ಲದ್ದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಿಂದ ಅಗ್ರಹಿಸಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಬಿದರ್ ಕುಂದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.