Saturday, December 21, 2024
Homeಕ್ರೀಡೆದಾವಣಗೆರೆಯ ಪುಟಾಣಿ ಸ್ತುತಿಸ್ಪರ್ಧೆಯಲ್ಲಿ ವಿಶ್ವದಾಖಲೆ

ದಾವಣಗೆರೆಯ ಪುಟಾಣಿ ಸ್ತುತಿಸ್ಪರ್ಧೆಯಲ್ಲಿ ವಿಶ್ವದಾಖಲೆ

ದಾವಣಗೆರೆ: ಪಿರಾಮಿಂಕ್ಸ್ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತ್ಯಂತ ವೇಗವಾಗಿ ( 26.95 ಸೆಕೆಂಡ್ ಗಳಲ್ಲಿ) ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ ಕ್ಯೂಬಿಕ್ ನ್ನು ಒಂದೆಡೆ ಸೇರಿಸುವ ಮೂಲಕ ನಗರದ ಸ್ತುತಿ ಎಸ್. ವಿಶ್ವ ದಾಖಲೆ ಮಾಡಿದ್ದಾಳೆ.
ಏಳು ವರ್ಷದ ಸ್ತುತಿ ಮಕ್ಕಳ ವಿಭಾಗದಲ್ಲಿ ಈ ದಾಖಲೆ ಮಾಡಿದ್ದಾಳೆ.
1ನೇ ತರಗತಿ ಓದುತ್ತಿರುವ ಸ್ತುತಿ ನಗರದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು, ಎಸ್.ಕೆ.ಪಿ.ಬ್ಯಾಂಕ್ ನಿರ್ದೇಶಕರಾದ ವೈ.ಬಿ.ಸತೀಶ್ , ಶ್ರೀಮತಿ ಲಕ್ಷ್ಮೀ ಅವರ ಮೊಮ್ಮಗಳು ಹಾಗೂ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷರು, ದಾವಣಗೆರೆ ಎಸ್.ಕೆ.ಪಿ. ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಸುನಿಲ್ ಎಸ್ ಮತ್ತು ಶ್ರೀಮತಿ ಚಂದ್ರಿಕಾ ದಂಪತಿಗಳ ಪುತ್ರಿ.
ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನ ವರ್ಲ್ಡ್ ರೆಕಾರ್ಡ್ಸ್ ಆಫ್ ಎಕ್ಸಲೆನ್ಸ್ ನಲ್ಲಿ ಸ್ತುತಿ ಹೆಸರು ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments