ದಾವಣಗೆರೆ:
ದಿನಾಂಕ 16-8-24 ಶುಕ್ರವಾರ ಬೆಳಿಗ್ಗೆ 6-30 ಕ್ಕೆ ಹಿರಿಯ ಕಾರ್ಮಿಕ ನಾಯಕರು ಹೋರಾಟಗಾರರು ಹಾಗೂ ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿ ಖಜಾಂಚಿಗಳಾಗಿದ್ದ ಕಾಮ್ರೆಡ್ ಆನಂದರಾಜ್ ಅವರ ನಿಧನಕ್ಕೆ ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ದಾವಣಗೆರೆ ಅಶೋಕ ರಸ್ತೆಯಲ್ಲಿನ ಕಾಂ. ಪಂಪಾಪತಿ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಎಲ್ ಎಚ್ ಅರುಣಕುಮಾರ್ ರವರು ಮಾತನಾಡಿ ಜೀವನದುದ್ದಕ್ಕೂ ಸಿದ್ಧಾಂತದಿಂದ ವಿಮುಖರಾಗದೆ ಕಮ್ಯುನಿಸ್ಟ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದ ಆನಂದರಾಜರವರು ಅವರ ಅಕಾಲಿಕ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ನೇರ ಮತ್ತು ನಿಷ್ಠರ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಅವರ ಬದುಕಿನ ಆದರ್ಶಗಳು ಎಲ್ಲಾ ಕಾರ್ಯಕರ್ತರಿಗೂ ಮಾರ್ಗದರ್ಶನವಾಗಲಿ ಎಂದು ಅಭಿಪ್ರಾಯಪಟ್ಟರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ ಕೆ ರಾಘವೇಂದ್ರ ನಾಯರಿ ಮಾತನಾಡಿ ಆನಂದ ರಾಜ್ ರವರು ಅವರ ಬದುಕಿನ ಉದ್ದಕ್ಕೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಡೆದುಕೊಂಡವರು. ಅವರ ಅಗಲಿಕೆ ನಮಗೆ ಅಭದ್ರತೆ ತಂದಿದೆ ಕೊನೆ ದಿನಗಳಲ್ಲಿ ಚಿಕಿತ್ಸೆಗೆ ಮನಸ್ಸು ಮತ್ತು ದೇಹ ಎರಡು ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ, ಅವರ ಬದುಕಿದ ರೀತಿ ನಮಗೆ ಮಾರ್ಗದರ್ಶನವಾಗಲಿ ಎಂದರು.
ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ವಹಿಸಿದ್ದರು ಸಭೆಯಲ್ಲಿ ಭಾಗವಹಿಸಿದ್ದ ಪಿ ಷಣ್ಮುಖ ಸ್ವಾಮಿ, ಟಿ ಎಸ್ ನಾಗರಾಜ್, ಸತೀಶ್, ಹೆಗ್ಗೆರೆ ರಂಗಪ್ಪ, ಅವರಗೆರೆ ವಾಸು, ವಿ ಲಕ್ಷ್ಮಣ, ಐರಣಿ ಚಂದ್ರು, ಯಲ್ಲಪ್ಪ ಜಯಪ್ಪ, ಕೆ ಬಾನಪ್ಪ, ಶಿವಕುಮಾರ್ ಡಿ ಶೆಟ್ಟರ್, ನಿಟುವಳ್ಳಿ ಬಸವರಾಜ್, ಕೆ ಎಸ್ ಆರ್ ಟಿ ಸಿ ಹನುಮಂತಪ್ಪ, ಮೊಹಮ್ಮದ್ ರಫೀಕ್, ಸಿದ್ದೇಶ್, ಪರಶುರಾಮ್, ಚಿನ್ನಪ್ಪ, ಸಿ ರಮೇಶ್, ಹೆಚ್ ಜಿ ಉಮೇಶ್, ಎಂ ಬಿ ಶಾರದಮ್ಮ ಸೇರಿದಂತೆ ಎಲ್ಲರೂ ಮೃತರಿಗೆ ಸಂತಾಪ ಸೂಚಿಸಿ ಮಾತನಾಡಿದರು.
ಕಾಂ ಆನಂದರಾಜ್ ರವರಿಗೆ 75 ವರ್ಷ ವಯಸ್ಸಾಗಿತ್ತು ಮೃತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ಮೃತರು ಒಬ್ಬ ಮಗ ಮೂರು ಜನ ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಎಂದು ಭಾರತ್ ಕಮ್ಯೂನಿಸ್ಟ್ ಪಕ್ಷ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಆವರಗೆರೆ ಚಂದ್ರು ತಿಳಿಸಿದ್ದಾರೆ.