ದಾವಣಗೆರೆ:ಜನತಾಪರಿವಾರದ ಹಿರಿಯ ನಾಯಕರು,ಮಾಜಿ ಶಾಸಕ ದಿವಂಗತ ಕೆ.ಮಲ್ಲಪ್ಪನವರ ಒಡನಾಡಿಯೂ ಆಗಿದ್ದ ಕುಸ್ತಿಪಟು ಟಿ.ದಾಸಕರಿಯಪ್ಪನವರು ನಿಧನರಾದ ಸುದ್ದಿಯು ಅವರ ಕುಟುಂಬವರ್ಗಕ್ಕೆ ಅಷ್ಟೇ ಅಲ್ಲದೆ ಅವರ ಬಹುತೇಕ ಅಭಿಮಾನಿಗಳಿಗೂ ದುಃಖ ವಾಯಿತು.ಟಿ.ದಾಸಕರಿಯಪ್ಪನವರು ಶ್ರಮಿಕರ ಪರ,ದುಡಿಯುವ ವರ್ಗದ ಪರ ಅದರಲ್ಲೂ ವಿಶೇಷವಾಗಿ ಎಪಿಎಂಸಿ ಹಮಾಲರ ಪರ ಸದಾ ಹೋರಾಟದ ಮುಂಚೂಣಿಯಾಗಿರುತಿದ್ದರು.ಅವರು ಎಪಿಎಂಸಿ ಹಮಾಲರ ಸಂಘದ ಅದ್ಯಕ್ಷರಾಗಿದ್ದ ಕೆ.ಮಲ್ಲಪ್ಪನವರ ಅವದಿಯಲ್ಲಿ ಸಂಘಟನೆಯ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.ಇವರ ಇನ್ನೊಬ್ಬ ಒಡನಾಡಿ ನಗರಸಭೆಯ ಮಾಜಿ ಅಧ್ಯಕ್ಷರಾದ ದಿವಂಗತ ಎಸ್.ಹನುಮಂತಗೌಡರು ಕೋಶಾಧ್ಯಕ್ಷರಾಗಿದ್ದರು.
ಟಿ.ದಾಸಕರಿಯಪ್ಪನವರು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡುಬಾರಿ ಕಾರ್ಯನಿರ್ವಹಿಸಿದ್ದಾರೆ.ಮೃತರಿಗೆ ವಯೋಸಹಜ ಸಾವಾಗಿದ್ದರೂ ಸಹ ಅವರು ಇನ್ನೂ ಹತ್ತಾರು ವರ್ಷ ಬದುಕಿರಬೇಕಾಗಿತ್ತು.ಅವರ ಮಾರ್ಗದರ್ಶನ ಇವತ್ತನ ಯುವ ಪೀಳಿಗೆಗೆ ಅಗತ್ಯವಾಗಿತ್ತು.