Saturday, December 21, 2024
Homeರಾಜಕೀಯಶಾಮನೂರು ಕುಟುಂಬ ಜನಸೇವೆಗೆ ಸದಾ ಸಿದ್ದ.27,ರಂದು ಸಂಸದರ ಕೊಠಡಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ:ಸಂಸದೆ ಪ್ರಭಮಲ್ಲಿಕಾರ್ಜುನ

ಶಾಮನೂರು ಕುಟುಂಬ ಜನಸೇವೆಗೆ ಸದಾ ಸಿದ್ದ.27,ರಂದು ಸಂಸದರ ಕೊಠಡಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ:ಸಂಸದೆ ಪ್ರಭಮಲ್ಲಿಕಾರ್ಜುನ

ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಗರದ ಬಾಪೂಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪತಿಯವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬಕ್ಕೆ ಆಗಮಿಸಿ ತುಂಬು ಹೃದಯದ ಪ್ರೀತಿಯಿಂದ ಶುಭ ಹಾರೈಸಿದ ಶಾಸಕರು ಹಾಗೂ ಮಾವನವರು, ಅಪ್ಪಾಜಿಯಾಗಿರುವ ಶಾಮನೂರು ಶಿವಶಂಕರಪ್ಪ ಅವರು, ಹಾಲಿ ಹಾಗೂ ಮಾಜಿ ಶಾಸಕರುಗಳಿಗೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಜಿಲ್ಲಾ ಪಂಚಾಯತ್, ಸೋಶಿಯಲ್ ಮೀಡಿಯ ತಂಡದವರಿಗೂ, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವೆ. ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರುಗಳು, ಎಲ್ಲಾ ವಿಭಾಗದ ಮುಖಂಡರುಗಳು,ಮಹಿಳಾ ಕಾಂಗ್ರೆಸ್, ತಾಲ್ಲೂಕು,ಪಟ್ಟಣ, ಹೋಬಳಿ, ಗ್ರಾಮಾಂತರ ಕಾರ್ಯಕರ್ತರುಗಳು, ಹಾಗೂ ಅಭಿಮಾನಿಗಳು ಸಚಿವರ ಜನ್ಮದಿನದ ಹಬ್ಬದ ಶುಭ ಸಂದರ್ಭದಲ್ಲಿ ರಾಜ್ಯದ ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿ ಆಶಿರ್ವಾದಿಸಿದ ಎಲ್ಲರಿಗೂ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಗೆ ಪಕ್ಷದ ಕಾರ್ಯಕರ್ತರೇ ಜೀವಾಳ. ಶಾಮನೂರು ಕುಟುಂಬ ಜನಸೇವೆಗೆ ಸದಾ ಸಿದ್ದ. ಇದೇ ಸೆಪ್ಟೆಂಬರ್ 27 ರ ಶುಕ್ರವಾರದಂದು ಡಿಸಿ ಕಚೇರಿಯಲ್ಲಿ ಸಂಸದರ ಕೊಠಡಿಯಲ್ಲಿ ಕಾರ್ಯಾರಂಭ ಪ್ರಾರಂಭವಾಗಲಿದೆ. ಸಾರ್ವಜನಿಕರ ಅಹವಾಲು ಹಾಗೂ ಸಮಸ್ಯೆಗಳಿಗೆ ಸದಾ ನಾನು ಸ್ಪಂದಿಸುವೆ ಎಂದು ದಾವಣಗೆರೆ ಸಂಸದರಾದ ಶ್ರೀ ಮತಿ ಡಾಕ್ಟರ್ ಪ್ರಭಮಲ್ಲಿಕಾರ್ಜುನ್ ರವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments