Sunday, January 12, 2025
Homeಕೃಷಿಸಾವಯುವ ಗೊಬ್ಬರದಿಂದ ಆರೋಗ್ಯ ಉತ್ತಮ: ಲಕ್ಕಣ್ಣ ಸವಸುದ್ದಿ

ಸಾವಯುವ ಗೊಬ್ಬರದಿಂದ ಆರೋಗ್ಯ ಉತ್ತಮ: ಲಕ್ಕಣ್ಣ ಸವಸುದ್ದಿ

ಮೂಡಲಗಿ:ಅ,08-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಮೂರುದಿನಗಳವರೆಗೆ ನಡೆದ ಕೃಷಿ ಮೇಳ. ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ರೈತನೇ ಬೆನ್ನೆಲಬು, ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಉತ್ತಮ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ರೈತರು ಉತ್ತಮ ಇಳುವರಿ ಪಡೆಯಲು ಸಾದ್ಯ,ಸಾವಯವ ಗೊಬ್ಬರದ ಬೆಳೆಯಿಂದ ಉತ್ತಮವಾದ ಆಹಾರ ಸಿಗುವುದು ಮತ್ತು ಉತ್ತಮ/ಸದೃಢ ಆರೋಗ್ಯದಿಂದ ಇರಲು ಸಾಧ್ಯ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಸೋಮವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ವಿಜ್ಞಾನ ಕೇಂದ್ರ ಬರ್ಡ್ಸ ತುಕ್ಕಾನಟ್ಟಿ, ಶ್ರೀ ಶಿವಬೋಧರಂಗ ಪಿಕೆಪಿಎಸ್ ಮೂಡಲಗಿ ಹಾಗೂ ನಿಸರ್ಗ ಫೌಂಡೇಶನ್ ಮೂಡಲಗಿ, ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ ಕೃಷಿ ಮೇಳದಲ್ಲಿ ಯಂತ್ರೋಪಕರಣಗಳ ಪ್ರದರ್ಶನ, ಸಾವಯವ ಕೃಷಿ, ಸಿರಿಧಾನ್ಯಗಳ ಉತ್ಪಾದನೆ. ಜೈವಿಕ ಗೊಬ್ಬರ ಹಾಗೂ ಪೀಡೆನಾಶಕ, ಜೇನು ಕೃಷಿ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಾದ ಆವಿಷ್ಕಾರಗಳು ಹಾಗೂ ಸಾವಯವ ಬೆಲ್ಲದಿಂದ ತಯಾರಿಸಿದ ಹೋಳಿಗೆ ಸ್ಪರ್ಧೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರನ್ನು ಕುರಿತು ಮಾತನಾಡಿದ ಅವರು, ಆಯೋಜಕರಿಗೆ ಅಭಿನಂದನೆಗಳನ್ನು ತಿಳಿಸುತ್ತ, ಕೃಷಿ ಮೇಳವನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿ, ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸುವ ಸಕಲ ಪ್ರಯತ್ನವನ್ನು ಮಾಡಲಾಗಿದೆ ಎಂದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕೃಷಿಮೇಳಗಳಿಗೆ ಭೇಟಿ ನೀಡಿ ಪ್ರಯೋಜನ ಪಡೆಯುತ್ತಾ, ಕೃಷಿ ಕ್ಷೇತ್ರದಲ್ಲಾದ ವಿನೂತನ ಆವಿಷ್ಕಾರಗಳ ಮಾಹಿತಿ ಪಡೆದು, ಜೈವಿಕ ರಸಗೊಬ್ಬರಗಳನ್ನು ಬಳಸುತ್ತಾ ಮಿಶ್ರ ಬೆಳೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು. ಕೃಷಿಯ ಜೊತೆಗೆ ಆಡು, ಕುರಿ, ಕೋಳಿ, ಜೇನು ಹಾಗೂ ಉತ್ತಮ ರಾಸುಗಳ ಜಾನುವಾರುಗಳ ಸಾಕಾಣಿಕೆಯಿಂದ ರೈತರು ಉತ್ತಮ ಬೆಳೆಗಳ ಇಳುವರಿಯೊಂದಿಗೆ ಒಳ್ಳೆಯ ಲಾಭವನ್ನು ಪಡೆಯಬಹುದು ಎಂದು ಕಿವಿಮಾತು ಹೇಳಿದರು.ಕೃಷಿಮೇಳದ ವೇದಿಕೆಯಲ್ಲಿ ಸಾವಯವ ಬೆಲ್ಲದಿಂದ ತಯಾರಿಸಿದ ಹೋಳಿಗೆ ಸ್ಪರ್ಧೆಯಲ್ಲಿ ಪಥಮರಾಗಿ ವಿಜೇತರಾದ ಭಾರತಿ ಚಾನಗಿ, ದ್ವಿತೀಯ ಜಯಶ್ರೀ ಹಡಪದ, ತೃತೀಯ ಗೀತಾ ಹಲಕರಣಿ, ಚತುರ್ಥರಾಗಿ ಆಯ್ಕೆಯಾದ ಸುನಂದಾ ತೇಲಗ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ನವರಾತ್ರಿ ಉತ್ಸವ ಸಮಿತಿಯಿಂದ ಲಕ್ಕಣ್ಣ ಸವಸುದ್ದಿಯವರನ್ನು ಸತ್ಕರಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಮಹಾಲಿಂಗಯ್ಯ ನಂದಗಾಂವಮಠ, ಸುಭಾಸ ಲೋಕಣ್ಣವರ್, ಗುರುನಾಥ ಗಂಗಣ್ಣವರ,ಈರಪ್ಪ ಢವಳೇಶ್ವರ, ಚೇತನ ನಿಶಾನಿಮಠ, ವಾದಿರಾಜ ದೇಸಾಯಿ ಮತ್ತು ನವರಾತ್ರಿ ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments