Saturday, December 21, 2024
Homeಸಂಸ್ಕೃತಿಐತಿಹಾಸಿಕ ಶ್ರೀ ವಿಜಯದುರ್ಗಿ ಪರಮೇಶ್ವರಿ ಅಮ್ಮನವರ ಉತ್ಸವದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಯುಗ ಧರ್ಮ ರಾಮಣ್ಣನವರ...

ಐತಿಹಾಸಿಕ ಶ್ರೀ ವಿಜಯದುರ್ಗಿ ಪರಮೇಶ್ವರಿ ಅಮ್ಮನವರ ಉತ್ಸವದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಯುಗ ಧರ್ಮ ರಾಮಣ್ಣನವರ ಜಾನಪದ ಲಹರಿ…


ದಾವಣಗೆರೆ ಅ.6ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ, ಒಂದು ಬಾರಿ ಜಾನಪದ ಅಕಾಡೆಮಿ ಪ್ರಶಸ್ತಿ, ಖ್ಯಾತ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಎದೆ ತುಂಬಿ ಹಾಡುವೆನು, ಸೇರಿದಂತೆ ಹಲವಾರು ದೂರದರ್ಶವಾಹಿನಿಗಳಲ್ಲಿ
ಪ್ರಖ್ಯಾತಿಗೊಂಡಿರುವ ನಡೆದಾಡುವ ಜಾನಪದ
ಅನಕ್ಷರಸ್ಥರಾದರೂ ಐದು ಕೃತಿಗಳನ್ನು ರಚಿಸಿದ ಖ್ಯಾತ ಜನಪದ ಸಾಹಿತಿ, ಹಲವು ವೇದಿಕೆಗಳಲ್ಲಿ 15000 ಹೆಚ್ಚು ವೇದಿಕೆಗಳಲ್ಲಿ ಸ್ವಹಾರ್ಜಿತ ತತ್ವಪದಗಳು, ನಾಡು ನುಡಿ, ಭಕ್ತಿ ಭಾವ ಜನಪದ ಲಹರಿಗಳನ್ನು ರಾಜ್ಯಹೊರಗೂ ಉಣಬಡಿಸುತ್ತಿರುವ ಸಿದ್ದನ ಮಠದ ಯುಗ ದರ್ಮ ರಾಮಣ್ಣ ನಮ್ಮ ಹೆಮ್ಮೆ
ಇಂಥ ಅದ್ಭುತ ಕಲಾವಿದ ಇಂದು ಲೋಕಿಕೆರೆ ಕೋಡಿಹಳ್ಳಿ ನಡುವಿನ ಪುಣ್ಯದ ನೆಲ
ಶಕ್ತಿಯ ಭೂಮಿ ಶ್ರೀ ವಿಜ ಯದುರ್ಗಿ ಪರಮೇಶ್ವರಿ ಅಮ್ಮನವರ ನೆಲೆಯ ಸನ್ನಿಧಿಯಲ್ಲಿ ಮುಂಜಾನೆ
ಜಿಲ್ಲೆಯ ಹೊರಗಿನ ಭಾಗದ ಭಕ್ತರು ಸೇರಿದಂತೆ ಲೋಕಿಕೆರೆ ಯ ಸುತ್ತ ಮುತ್ತಲ ಭಕ್ತಾದಿಗಳಿಗೆ ಮಹಿಳೆಯರಿಗೆ
ಜಾನಪದ ಭವ, ಅಮ್ಮನ ದುರ್ಗಾಪರಮೇಶ್ವರಿ ಮೇಲೆ ಎದೆ ತುಂಬಿ ಜನಪದ ಲಹರಿಯ ಗಂಗೆಯ ಹರಸಿದರು.
ಪ್ರಸ್ತುತ ಸಂದರ್ಭದಲ್ಲಿ ನಮ್ಮ ಬದುಕು, ಭಕ್ತಿ ಭರವಸೆಗಳಿಲ್ಲದ ಈಗಿನ ಕಂಪ್ಯೂಟರ್ ಯುಗದಲ್ಲಿ ನಾಗಲೋಟದಿಂದ ಗುರಿ ಇಲ್ಲದೆ
ನಮ್ಮ ಮನಸ್ಸು ಸoಕುಂಚಿತ ಗೊಂಡು ಸಾಗುತ್ತಿದೆ,
ಬದುಕಿನಲ್ಲಿ ಗುರಿ ಮತ್ತು ಭರವಸೆಗಳು ಬೇಕು ಎಂದು
ಈಗಿನ ಯುವ ಪೀಳಿಗೆಗೆ ಕಿವಿಮಾತು ಹೇಳಿದರು.
ಹಿರಿಯರಲ್ಲಿ ಗುರುಹಿರಿಯಲಿ ಭಕ್ತಿ ಭಾವ ಇರಲೆಂದು ಆಶಿಸಿದರು.
ಸುಮಾರು ಒಂದುವರೆ ತಾಸು ಹೆಚ್ಚು ಕಾಲ ಈ ದಿನದ ಪರಮೇಶ್ವರಿ ಅಮ್ಮನವರ
ಚೌತಿ ಭಾನುವಾರ ದಿನದ ಹೂವಿನ ಅಲಂಕಾರ,
ಹೀಗೆ ಸತತ 9 ದಿನಗಳ ನವರಾತ್ರಿ ಉತ್ಸವದಲ್ಲಿ ದೇವಿಗೆ ವಿವಿಧ ಪೂಜೆ ಅಲಂಕಾರ ಕ್ಷೀರಾಭಿಷೇಕ ಕುಂಕುಮಾರ್ಚನೆ ವಿವಿಧ ಅಲಂಕಾರ ಗಳಿಂದ ಶೃಂಗಾರಗೊಳಿಸಿ ಭಕ್ತಿ ಭಾವ
ವಿಶೇಷ ಪೂಜೆ ಗಡಿಯಲಾಗುತ್ತಿದೆ.
ತ್ರಿಕುಟಚಲ ಸೇವಾ ಟ್ರಸ್ಟ್ ಇಂದ ಈ ಬಾರಿ ವಿಶೇಷವಾಗಿ ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದ್ದು ಪ್ರತಿನಿತ್ಯವೂ ನಾಡಿನ ಹೆಸರಂತ ಭಜನಾ ತಂಡಗಳು, ಭಕ್ತಿ ಗಾಯನ ರಸಾ ಗಾಯಕರಿಂದ
ದೇವಿಯ ಮುಂದೆ ದೇವಿ ಸನ್ನಿಧಾನದಲ್ಲಿ ಸಂಗೀತರಾದನೆ ನಡೆಯುತ್ತಿವೆ.
ತ್ರಿಕುಟಚಲ ಸೇವಾ ಟ್ರಸ್ಟ್ ಧರ್ಮದರ್ಶಿಗಳು,
ಈ ಉತ್ಸವದಲ್ಲಿ ಅತ್ಯಂತ ಭಕ್ತಿಪೂರಕವಾಗಿ ಪ್ರತಿ ನಿತ್ಯ ನೂರಾರು ಭಕ್ತರು ಪಾಲ್ಗೊಂಳ್ಳು ತ್ತಿದ್ದಾರೆ.
ಐ ಸಂದರ್ಭದಲ್ಲಿ ನಡೆದಾಡುವ ಜನಪದ ಯುಗ ಧರ್ಮ ರಾಮಣ್ಣ ರವರನ್ನು
ಕತ್ತಲಗೆರೆ ಹಿರಿಯ ಮುಖಂಡ ಶೇಖರಪ್ಪ, ಟ್ರಸ್ಟ್ ಸೇವಾ ಕರ್ತರು,
ಸಮಾಜ ಸೇವಕರಾದ ಶಿವಮೂರ್ತಿ, ಹಲವು ಭಕ್ತರ ಸಮ್ಮುಖದಲ್ಲಿ
ಭಕ್ತಿ ಗೌರವ ಪುವರ್ಕವಾಗಿ ಸನ್ಮಾನಿಸಿ ಸತ್ಕರಿಸಿ ಗೌರವಿಸಲಾಯಿತು.
ನವ ರಾತ್ರಿ ಉಸ್ತವ ದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೂ ಅನ್ನಪ್ರಸಾದವನ್ನು ಹಮ್ಮಿಕೊಳ್ಳಲಾಗಿತ್ತು.
ನಾಳೆ ಷ್ಟಷ್ಟಿ ಪಂಚಮಿ ಅಂಗವಾಗಿ ಅರ್ಧನಾರೀಶ್ವರ,
ಕುಂಕುಮ ಅಲಂಕಾರ ವಿವಿಧ ಅಲಂಕಾರಗಳು ದುರ್ಗಾಷ್ಟಮಿ ದಿನದವರೆಗೂ ನಡೆಯಲಿದೆ ಎಂದು ತ್ರಿಕುಟಾಚಲ ಸೇವಾ ಟ್ರಸ್ಟ್ ನ ಧರ್ಮದರ್ಶಿಗಳು
ತಿಳಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಬೇಕಾಗಿ
ಮನವಿ ಮಾಡಿಕೊಂಡಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments