Saturday, December 21, 2024
Homeಜಾಗೃತಿರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಜಾಗೃತಿ ಜಾಥ

ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಜಾಗೃತಿ ಜಾಥ

ದಾವಣಗೆರೆ ನವಂಬರ್ 9 ; ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ ಅಂಗವಾಗಿ ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ನಿಟ್ಟುವಳ್ಳಿ ಹಾಗೂ ಐಎನ್‌ಎ-ಕೆಆರ್ ಜೆ ಭಾರತ ಸೇವಾದಳ ಶಾಖೆ ಇವರುಗಳ ಸಂಯುಕ್ತಾಶ್ರ‍್ರಯದಲ್ಲಿ ಶನಿವಾರ ಕಾನೂನು ಅರಿವು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾದಲ್ಲಿ ನ್ಯಾಯಾಧೀಶರಾದ ಪ್ರಶಾಂತ್, ಹಾಗೂ ಗಾಯಿತ್ರಿ ಯವರು ನಿಟ್ಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಹತ್ತಿರ ನೆರೆದಿದ್ದ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಕಾನೂನಿನ ಅಗತ್ಯತೆ ತಿಳುವಳಿಕೆ ಮತ್ತು ಅದರ ಸದ್ಬಳಕೆಯ ಬಗ್ಗೆ ವಿವರಿಸಿದರು.
ಜಾಥಾದಲ್ಲಿ ಸುಮಾರು 300 ಮಕ್ಕಳು ರಾಷ್ಟ್ರಧ್ವಜ , ಕನ್ನಡ ಧ್ವಜ ಕಾನೂನು ಅರಿವಿನ ಘೋಷಫಲಕಗಳು ಮತ್ತು ಸಂವಿಧಾನ ಪೀಠಿಕೆ ಹಿಡಿದು ಬ್ಯಾಂಡ್ ವಾದ್ಯದೊಂದಿಗೆ ಗ್ರಾಮದ ಬೀದಿಗಳಲ್ಲಿ ಪಥ ಸಂಚಲನಾ ಮಾಡುತ್ತಾ ಕಾನೂನು ಅರಿವಿನ ಬಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತಾ ಅರಿವು ಮೂಡಿಸುತ್ತಾ ನಡೆದರು. ಶೌಕತ್ ಅಲಿ ವಿವಿಧ ಸಹಾಯವಾಣಿಗಳ ಬಗ್ಗೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿದರು.
ಮುಖ್ಯ ಶಿಕ್ಷಕರಾದ ಎಂ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಪಥಚಲನೆ ನಿರ್ವಹಣೆಯನ್ನು ದೈಹಿಕ ಶಿಕ್ಷಕರಾದ ದೇವರಾಜ್ ಮತ್ತು ಸೇವಾದಳ ರಾಜ್ಯ ಸಂಪನ್ಮೂಲ ಶಿಕ್ಷಕರಾದ ಕೆ.ಟಿ.ಜಯಪ್ಪನವರು ಹಾಗೂ ಸೇವಾದಳ ಜಿಲ್ಲಾ ಸಂಘಟಕರಾದ ಫಕೀರ್ ಗೌಡ ಹಳೆಮನಿ ಇವರುಗಳು ಯಶಸ್ವಿಯಾಗಿ ನಿರ್ವಹಿಸಿದರು.
ಜಾಥಾದಲ್ಲಿ ಸಂಚಾರಿ ಪೊಲೀಸರು ಮತ್ತು ಕೆ.ಟಿ.ಜೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಹಾಗೂ ಇನ್ನಿತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments