Saturday, December 21, 2024
Homeಜಾಗೃತಿನವೆಂಬರ್ 12,ರಂದು ಹೊನ್ನಾಳಿ ತಾಲೂಕು ಪ್ರವೇಶಿಸಲಿರುವ "ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ - ಜನಜಾಗೃತಿ...

ನವೆಂಬರ್ 12,ರಂದು ಹೊನ್ನಾಳಿ ತಾಲೂಕು ಪ್ರವೇಶಿಸಲಿರುವ “ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ”

ದಾವಣಗೆರೆ:ದಿನಾಂಕ :-06/11/2024 ರಂದು ಶೃಂಗೇರಿಯಿಂದ ಮಠದ ಶ್ರೀಗಳಿಂದ ಉದ್ಘಾಟನೆಯಾದ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಹರಿಹರಪುರದ ಮೂಲಕ ಮುನ್ನಡೆಯುತ್ತಿದೆ ಈ ಪಾದಯಾತ್ರೆ ಶಿವಮೊಗ್ಗಕ್ಕೆ ದಿನಾಂಕ :- 10/11/2024 ರಂದು ತಲುಪಲಿದೆ, ಅಲ್ಲಿಂದ ದಿನಾಂಕ:-11/11/2024 ರಂದು ಸಂಜೆ ಹೊಳಲೂರ್ ನಲ್ಲಿ ರಾತ್ರಿ ವಿಶ್ರಾಂತಿಯ ನಂತರ ಬೆಳಗ್ಗೆ 12/11//2024 ರಂದು ಹೊನ್ನಾಳಿ ತಾಲ್ಲೂಕಿನ ಚೀಲೂರ್ ಗ್ರಾಮವನ್ನು ತಲುಪುವುದು, ಊಟದ ನಂತರ ಮದ್ಯಾಹ್ನ 3:30 ಗಂಟೆಯ ನಂತರ ಗೋಪಾನಹಳ್ಳಿಯ ಮೂಲಕ ಗೋವಿನಕೋವಿಯಲ್ಲಿ ಟೀ ಕಾಫಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ನದಿಯ ನೀರಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ನಂತರ ಹರಳಹಳ್ಳಿ ದಿಡಗೂರು ಮೂಲಕ ಸಂಜೆ 6:00 ಗಂಟ್ಟೆಗೆ ದೇವನಾಯ್ಕನಹಳ್ಳಿ/ಟಿಬಿ ಸರ್ಕಲ್ ನ ಕನಕದಾಸರ ವೃತ್ತ ತಲುಪಲಿದೆ, ಟಿಬಿ ವೃತ್ತದಲ್ಲಿ ಬಹಿರಂಗ ಸಭೆಯನ್ನು ಮಾಡಲಾಗುವುದು , ಅಲ್ಲಿಂದ ಮುಂದೆಸಾಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಸಾರ್ವಜನಿಕರಲ್ಲಿ ನದಿಯ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳು ನಡೆಯಲಿವೆ, ಅದಾದ ನಂತರ ನೇರವಾಗಿ ಹಿರೇಕಲ್ಮಠಕ್ಕೆ ಹೋಗಿ ಸ್ವಲ್ಪ ವಿಶ್ರಾಂತಿಯ ನಂತರ ಅಲ್ಲಿ1/ 2 ತಾಸು ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳು ನಡೆಯಲಿವೆ ನಂತರ ರಾತ್ರಿ ಭೋಜನದ ನಂತರ ವಿಶ್ರಾಂತಿ ಮಾಡಲಾಗುವುದು , ಅಲ್ಲಿಂದ ಬೆಳಗ್ಗೆ ತಿಂಡಿ ಟೀ ಕಾಫಿಯ ನಂತರ ದಿನಾಂಕ :-13/11/2024 ರಂದು ಅದೇ ರಸ್ತೆಯ ಮೂಲಕ ತುಂಗಭದ್ರಾ ನದಿಯ ಸೇತುವೆಯ ಮೂಲಕ ಗೊಲ್ಲರಹಳ್ಳಿ ಗೆ ಪಾದಯಾತ್ರೆಯ ಪ್ರಯಾಣ ಮುಂದುವರಿಯುವುದು, ಅಲ್ಲಿಂದ ಬೇಲಿ ಮಲ್ಲೂರಿನಲ್ಲಿ ಟೀ/ಕಾಫಿ ಅಲ್ಪಹಾರದ ವ್ಯವಸ್ಥೆಯ ನಂತರ ಸಾರ್ವಜನಿಕರಿಗೆ ಅರಿವು ಮೂಡಿಸುವುದು , ನಂತರ ಪಾದಯಾತ್ರೆ ಕೋಟೆ ಮಲ್ಲೂರು , ಚಿಕ್ಕಗೊಣಗೇರಿ , ಹಿರೇಗೊಣಗೇರಿ , ಹರಗನಹಳ್ಳಿ ನಂತರ ಕೋಣನತಲೆಯ ಶ್ರೀ ಗುರುದೇವ ಮುಪ್ಪಿನಾರ್ಯ ಆಶ್ರಮ – ಕೋಣನ ತಲೆ , ಶ್ರೀ ಗುರು ಬಸವರಾಜ ದೇಶಿಕೇಂದ್ರ , ಶ್ರೀ ಶ್ರೀ ಶ್ರೀ ತಿಪ್ಪೇಸ್ವಾಮಿ ಜೀ ಅವರ ಮಠದಲ್ಲಿ ಮದ್ಯಾಹ್ನದ ಪ್ರಸಾದ/ಉಪಹಾರದ ನಂತರ ಮುಂದೆ ಸಾಗುವುದು. ಅಲ್ಲಿಯವರೆಗೂ ಹೊನ್ನಾಳಿ & ನ್ಯಾಮತಿ ತಾಲ್ಲೂಕಿನ ಈ ಪಾದಯಾತ್ರೆಯ ಕಾರ್ಯಕರ್ತರು ಜೊತೆಯಾಗಿ ಇರಬೇಕು ಎಂಬುದು ನಮ್ಮ ವಿನಂತಿ , ಆದ್ದರಿಂದ ಎಲ್ಲರಲ್ಲಿಯೂ ಈ ಮೂಲಕ ವಿನಂತಿಸುತ್ತಿದ್ದೇವೆ, ಜೊತೆಗೆ ತಿಳಿಸುವುದೇನೆಂದರೆ , ಎಲ್ಲಾರೂ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಎಲ್ಲರಲ್ಲಿಯೂ ಈ ಮೂಲಕ ಮತ್ತೊಮ್ಮೆ ವಿನಂತಿಸುತ್ತಿದ್ದೇವೆ, ಸಮಯಕ್ಕೆ ಸರಿಯಾಗಿ ನಾವೆಲ್ಲರೂ ಸೇರಿಕೊಂಡು ಪಾದಯಾತ್ರೆಯನ್ನು ನಮ್ಮ ತಾಲ್ಲೂಕಿನಿಂದ ಹರಿಹರ ತಾಲ್ಲೂಕಿನ ವರೆಗೆ ಮುಂದುವರಿಸುವುದು ಎಂದು ನಿವೃತ್ತ ಸೈನಿಕರಾದ ವಾಸಪ್ಪ ಎಂ, ಜಿಲ್ಲಾ ಸಂಚಾಲಕರು ರಾಷ್ಟ್ರೀಯ ಸ್ವಾಭಿಮಾನ ಆಧೋಲನ ಹಾಗೂ ಕಾರ್ಯದರ್ಶಿಗಳು – ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಕರ್ನಾಟಕ ರಾಜ್ಯ, ಹೊನ್ನಾಳಿ ತಾ, ದಾವಣಗೆರೆ ಜಿಲ್ಲೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments