Monday, January 13, 2025
Homeರಾಜಕೀಯಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವೆ: ಗಡಿಗುಡಾಳ್ ಮಂಜುನಾಥ್

ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವೆ: ಗಡಿಗುಡಾಳ್ ಮಂಜುನಾಥ್

ದಾವಣಗೆರೆ: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿನೂತನ ಪ್ರಯತ್ನವಾಗಿ ಮನೆ ಬಾಗಿಲಿಗೆ ನಿಮ್ಮ ಸೇವಕ ಕಾರ್ಯಕ್ರಮ ಆರಂಭಿಸಿದ್ದ ಮಹಾನಗರ ಪಾಲಿಕೆಯ 38ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್ ನ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರ ಅಭಿಯಾನವು ಐದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ವಾರ್ಡ್ ನ ಪ್ರಮುಖರ ಮನೆಗೆ ತೆರಳಿ ಐದು ವರ್ಷಗಳ ಸಾಧನೆಯ ಕಿರುಹೊತ್ತಿಗೆ ನೀಡಿ ಸನ್ಮಾನಿಸಿದರು. ಇದಕ್ಕೆ ವಾರ್ಡ್ ನವರು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ನಾನು ಕಳೆದ ಐದು ವರ್ಷಗಳ ಹಿಂದೆ ಮನೆ ಬಾಗಿಲಿಗೆ ನಿಮ್ಮ ಸೇವಕ ಕಾರ್ಯಕ್ರಮ ಆರಂಭಿಸುವಾಗ ಆತಂಕ ಇತ್ತು. ಆದ್ರೆ, ದಿನಕಳೆದಂತೆ ವಾರ್ಡ್ ನ ಜನರು ತೋರಿದ ಪ್ರೀತಿ, ಸಹಕರಿಸಿದ ರೀತಿ ಮನಸ್ಸು ತುಂಬಿ ಬಂತು. ಕಾರ್ಯಕ್ರಮವೂ ಯಶಸ್ವಿಯಾಯಿತು. ವಾರಕ್ಕೊಮ್ಮೆ ಜನರ ಮನೆ ಬಾಗಿಲಿಗೆ ಹೋಗಿ ನೂರಾರು ಸಂಕಷ್ಟಗಳನ್ನು ಅರಿತು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇದು ಜನರ ಮನಸ್ಸು ಗೆದ್ದಿದೆ ಎಂಬ ಭಾವನೆ ನನ್ನದು ಎಂದು ಹೇಳಿದರು.

ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಜನರ ಸಂಕಷ್ಟಗಳಿಗೆ ಯಾವಾಗಲೂ ಸ್ಪಂದಿಸುವೆ. ಅವರ ಜೊತೆ ನಾನು ಇರುವೆ. ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ವಾರ್ಡ್ ಜನರು ನೀಡಿರುವ ಪ್ರೀತಿ, ಕೊಟ್ಟಿರುವ ಗೌರವ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು ಎಂಬುದು ನನ್ನ ಧ್ಯೇಯ ವಾಕ್ಯ. ಪ್ರತಿಯೊಂದು ರಸ್ತೆಗೂ ಭೇಟಿ ನೀಡಿದ್ದೇನೆ. ಬಿದ್ದಿದ್ದ ಕಸದ ರಾಶಿ, ಸತ್ತಿರುವ ಪ್ರಾಣಿ, ಮರದ ಕಸದ ಫೋಟೋಗಳನ್ನು ಆರೋಗ್ಯಾಧಿಕಾರಿ ಹಾಗೂ ದಫೇದಾರ ಅವರ ಮೊಬೈಲ್ ಗೆ ಕಳಿಸುವ ವ್ಯವಸ್ಥೆ ಮಾಡಿದ್ದೆ. ಪ್ರತಿಯೊಂದು ರಸ್ತೆಯ ಚರಂಡಿಯ ಸ್ವಚ್ಛಗೊಳಿಸಿ ಸೊಳ್ಳೆಗಳು, ಕ್ರಿಮಿಕೀಟಗಳು ಬರದಂತೆ ಎಚ್ಚರ ವಹಿಸಿದ್ದೇನೆ. ವಾರಕ್ಕೆ ಎರಡು ಬಾರಿ ಫಾಗಿಂಗ್ ನಡೆಸಿ ಸೊಳ್ಳೆಗಳ ಕಾಟಕ್ಕೆ ಮುಕ್ತಿ ನೀಡಲಾಗಿದೆ. ದೀಪಗಳನ್ನು ಎಲ್ಲಾ ಕಡೆಗಳಲ್ಲಿಯೂ ಅಳವಡಿಸಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಂತೆ ಅಭಿವೃದ್ಧಿಯ ಮಹಾಪೂರವೇ ಹರಿದು ಬಂದಿದೆ. ವಾರ್ಡ್ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಮುಂದೆಯೂ ಕಷ್ಟಪಟ್ಟು ಶ್ರಮ ವಹಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ, ಪ್ರೀತಿ ತೋರುತ್ತೀರಾ ಎಂಬ ವಿಶ್ವಾಸ ನನಗಿದೆ ಎಂದು ಗಡಿಗುಡಾಳ್ ಮಂಜುನಾಥ್ ಹೇಳಿದರು.

ಪಾಲಿಕೆ ಸದಸ್ಯನಾಗಿ ಗೆದ್ದ ಬಳಿಕ ಅನೇಕ ರಸ್ತೆಗಳು ಹಾಳಾಗಿದ್ದವು. ಈ ಸಮಸ್ಯೆ ಮನಗಂಡು ಅನೇಕ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿಸಿರುವೆ. ಉದ್ಯಾನವನಗಳು ಹಾಗೂ ಈಜುಕೊಳದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಕೆಲಸ ಮಾಡಿದ್ದೇನೆ. ಆರೋಗ್ಯ ಶಿಬಿರ ಏರ್ಪಡಿಸಿ ವಯೋವೃದ್ಧರು, ಮಕ್ಕಳು, ಹಿರಿಯರು, ಪುರುಷರು, ಮಹಿಳೆಯರು, ಯುವಕ ಯುವತಿಯರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಒಟ್ಟಾರೆ ಕಳೆದ ಐದು ವರ್ಷಗಳಲ್ಲಿ ಇಷ್ಟೊಂದು ಕೆಲಸ ಮಾಡಲು ನೀವೂ ಕೊಟ್ಟ ಸಹಕಾರ ಕಾರಣ ಎಂದು ಹೇಳಿದರು.

ವಾರ್ಡ್ ನ ಪ್ರಮುಖರು ಮಾತನಾಡಿ, ಅಧಿಕಾರ ಮುಗಿಯುತ್ತಾ ಬಂದಿದ್ದರೂ ನಮ್ಮನ್ನೆಲ್ಲಾ ಗುರುತಿಸಿ ಮನೆಗೆ ಬಾಗಿಲಿಗೆ ಬಂದು ಸನ್ಮಾನಿಸುತ್ತಿರುವ ಗಡಿಗುಡಾಳ್ ಮಂಜುನಾಥ್ ಅವರನ್ನು ನೋಡಿದರೆ ಇದ್ದರೆ ಜನಪ್ರತಿನಿಧಿ ನಿಮ್ಮಂತೆ ಇರಬೇಕು ಎಂದು ಹಾರೈಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments