ದಾವಣಗೆರೆ:ಅವರಗೆರೆ ಗ್ರಾಮ ಪಂಚಾಯಿತಿಯನ್ನು 1997 ರಲ್ಲಿ ನಗರಸಭಾ ವ್ಯಾಪ್ತಿಗೆ ಸೇರಿಸಿಕೊಂಡಾಗ ಪ್ರಥಮ ಬಾರಿಗೆ ಅವರಗೆರೆ ಗ್ರಾಮ ವಾರ್ಡ್ ನಂಬರ್ ಮೂರು( 3) ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾಗಿತ್ತು ಆ ಸಂದರ್ಭದಲ್ಲಿ ಶ್ರೀಮತಿ ಶಿವಗಂಗಮ್ಮ ಇವರನ್ನು (ಸಿಪಿಐ) ಭಾರತ್ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಹಣವಂತರ ಎದುರಿಗೆ ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಿದ ಕಾರ್ಯಕರ್ತರು ಮತ್ತು ಮತಬಾಂಧವರು ಆಗ ಪಕ್ಷದ ಧೀಮಂತ ನಾಯಕರಾದ ಕಾಮ್ರೆಡ್ ಪಂಪಾಪತಿ ಮತ್ತು ಇತರೆ ನಾಯಕರುಗಳು ಸೇರಿ ಇತರೆ ಪಕ್ಷದೊಂದಿಗೆ ನಗರಸಭೆಯ ಉಪಾಧ್ಯಕ್ಷರನ್ನಾಗಿ ಕೂಡ ಆಯ್ಕೆ ಮಾಡಲಾಗಿತ್ತು. ಅವರು ೨೬-೦೧-೨೦೨೫,ರಂದು ಮರಣ ಹೊಂದಿದ್ದಾರೆ.ದಿವಂಗತರ ಅಂತ್ಯಸಂಸ್ಕಾರ ವನ್ನು
ಭಾರತ್ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ
ಜಿಲ್ಲಾ ಮಂಡಳಿ ದಾವಣಗೆರೆ ದಿನಾಂಕ 27/01/2025/ ಸ್ಥಳ ಅವರಗೆರೆ ಆಂಜನೇಯ ದೇವಸ್ಥಾನ ರಸ್ತೆ ದಾವಣಗೆರೆ ತಾಲೂಕು ದಾವಣಗೆರೆ ಜಿಲ್ಲೆ, ಯಲ್ಲಿ ಮೂರು ಗಂಟೆ ನಂತರ ಶವ ಸಂಸ್ಕಾರ ನೆರವೇರಿಸಲಾಗುವುದು.ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.