Thursday, August 21, 2025
Homeಸಾರ್ವಜನಿಕ ಧ್ವನಿಲೋಕಿಕೆರೆಯಲ್ಲಿ ಜಾತಿ ಬಿಡಿ ಮತ ಬಿಡಿ ಮಾನವತೆಗೆ ಜೀವ ಕೊಡಿ.. ಬೀದಿ ನಾಟಕ ಪ್ರದರ್ಶನ

ಲೋಕಿಕೆರೆಯಲ್ಲಿ ಜಾತಿ ಬಿಡಿ ಮತ ಬಿಡಿ ಮಾನವತೆಗೆ ಜೀವ ಕೊಡಿ.. ಬೀದಿ ನಾಟಕ ಪ್ರದರ್ಶನ


ದಾವಣಗೆರೆ ಫೆ. 11
ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ದಾವಣಗೆರೆ ಪೀಪಲ್ ಸಂಸ್ಥೆ
ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಜಾತಿ ಬಿಡಿ ಮತ ಬಿಡಿ ಮಾನವತೆಗೆ ಜೀವ ಕೊಡಿ ಸಂದೇಶ ಸಾರುವ ಅದ್ಭುತ ಬೀದಿ ನಾಟಕ ಹಾಡುಗಳ ಪ್ರದರ್ಶನ ನಡೆಯಿತು,
ಸಮಾಜದಲ್ಲಿರುವ ಮೇಲು ಕೀಳು, ತಾರತಮ್ಯ ಹೋಗಲಾಡಿಸುವ, ಸಂವಿಧಾನದ ಅಡಿಯಲ್ಲಿ
ಎಲ್ಲರೂ ಒಂದೇ, ಯಾವುದೇ ಜಾತಿ ಮತ ಭೇದವಿಲ್ಲದೆ ಹಳ್ಳಿ, ಗ್ರಾಮಗಳಲ್ಲಿ ಬಡವ ಬಲ್ಲಿದ ಅನ್ನದೆ ಪ್ರೀತಿ ಸೌಹಾರ್ದತೆಯಿಂದ ಬದುಕ ಬೇಕಾಗುವ ಅಗತ್ಯವಿದೆ ಎಂದು
ಸಂದೇಶ ಬೀರುವ ಬೀದಿ ನಾಟಕ,… ಜಾಗೃತಿ ಹಾಡುಗಳು
ನೋಡುಗರ ಗಮನ ಸೆಳೆದವು.
ಲೋಕಿಕೆರೆ ಗ್ರಾಮದ ಸರ್ಕಾರಿ ಮಾರುತಿ ಪದವಿಪೂರ್ವ ಕಾಲೇಜ್, ಹೈ ಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು, ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗ, ಪಂಚಾಯತಿ , ಅಧ್ಯಕ್ಷರು ಶ್ರೀಮತಿ ಶಿಲ್ಪಾ ಶಿವಮೂರ್ತಿ, ಉಪಾಧ್ಯಕ್ಷೆ ಶ್ರೀಮತಿ ಗೀತಾ ಜಗದೀಶ್,ಸದಸ್ಯರಾದ ಉಮೇಶ್, ಗ್ರಾಮದ ಮುಖಂಡರುಗಳು ಹಿರಿಯರು
ಮಹಿಳಾ ಸಂಘದ ಸದಸ್ಯರು,
ಲೋಕಿಕೆರೆ ಸೊಸೈಟಿ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಪೀಪಲ್ ಸಂಸ್ಥೆ ಕಾರ್ಯದರ್ಶಿ ಎಲ್ ಮಂಜುನಾಥ್, ನಾಡಿನ ಖ್ಯಾತ ಕಲಾವಿದ ಗಾಯಕ ಮುರಾರ್ಜಿ ಡಿ ಓ, ಚೌಳೂರ್ ನಾಗರಾಜ್, ಬಿ ಗುರುಮೂರ್ತಿ, ಚನ್ನಬಸಪ್ಪ, ಶ್ರೀನಿವಾಸ್ ಭಟ್ರಹಳ್ಳಿ ಧನಂಜಯ್, ದೇವಿರಮ್ಮ ಆಶಾ ಹೊನ್ನಾಳಿ ಅದ್ಭುತ ಅಭಿನಯ ಹಾಡುಗಾರಿಕೆ ನೆರದ ಸಮಸ್ತ ಗ್ರಾಮಸ್ಥರ ಗಮನ ಸೆಳೆಯಿತು,

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments