Thursday, August 21, 2025
Homeಸಾಧನೆಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರು ಪೀಠಾಧಿಪತಿಗಳಿಗೆ "ಗೌರವ ಡಾಕ್ಟರೇಟ್" ವಿಶ್ವವಿದ್ಯಾಲಯ ಹಾಗೂ ಸ್ವಾಮೀಜಿಯವರಿಗೆ ಅಭಿನಂದನೆಗಳು.

ಶ್ರೀ ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರು ಪೀಠಾಧಿಪತಿಗಳಿಗೆ “ಗೌರವ ಡಾಕ್ಟರೇಟ್” ವಿಶ್ವವಿದ್ಯಾಲಯ ಹಾಗೂ ಸ್ವಾಮೀಜಿಯವರಿಗೆ ಅಭಿನಂದನೆಗಳು.

ದಾವಣಗೆರೆ:ಅಂತಿಂಥ ಸಮಾಜ ನಮ್ದಲ್ಲಾ.ನಮ್ಮಂಥ ಸಮಾಜ ಬೇರಿಲ್ಲಾ.ಈ ಸಮಾಜ ಬಹು ಮುಗ್ಧ ಮತ್ತು ವಿಶ್ವಾಸಾರ್ಹ ಸಮಜಾಜವೆಂಬ ಖಾತಿ ಜನಜನಿತವಾಗಿ ಬಂದ ಬಿರುದು.
ಈ ಸಮುದಾಯದಲ್ಲಿ ಹೆಚ್ಚು ಅಕ್ಷರಸ್ಥರಿಲ್ಲಾ,ಹೆಚ್ಚು ಉನ್ನತ ಶಿಕ್ಷಣವಂತರಿಲ್ಲಾ,ಹೆಚ್ಚು ಪ್ರಭಲರಾಜಕಾರಣಿಗಳಿಲ್ಲಾ,ಹೆಚ್ಚು ಉನ್ನತ ಹುದ್ದೆಯ ಅಲಂಕೃತರಿಲ್ಲಾ,ಹೆಚ್ಚು ದರ್ಪ,ದೌರ್ಜನ್ಯ, ಅಹಂಕಾರ ತೋರುವ ಶ್ರೀಮಂತರೂ ಇಲ್ಲಾ.ಈ ಸಮಾಜಕ್ಕೆ ಅನ್ಯಾಯವಾದಾಗ ಇದರಪರ ನಿಲ್ಲುವವರ ಸಂಖ್ಯೆಯೂ ಕಡಿಮೆಯೆಂದೆ ಹೇಳಬಹುದು.ಆದರೆ ಈ ಸಮಾಜಕ್ಕೆ ದೈವದತ್ತವಾಗಿ ಬಂದ ಉಡುಗೊರೆಗಳು ಮಾತ್ರ ವಿಶ್ವವೇ ನಿಬ್ಬೆರಗಾಗುವಂಥವು.ಅವು ಯಾರೊಬ್ಬರ ಕೃಪಾಕಟಾಕ್ಷದಿಂದ ಬಂದವುಗಳಲ್ಲಾ ಎಂಬುದು ಸತ್ಯ.ಕವಿರತ್ನ ಕಾಳಿದಾಸರ,ಕನಕದಾಸರ,ಹಕ್ಕಬುಕ್ಕರು,ರಾಣಿ ಅಹಲ್ಯದೇವಿ ಹೋಳ್ಕರ್ ರವರು,ಮಾಳಿಂಗರಾಯರು,ಯಲ್ಲಪ್ಪ ಮಹಾರಾಜರು,ಲಡ್ಡುಮುತ್ಯಾರವರು,ಸಜ್ಜಲಗುಡ್ಡಶರಣಮ್ಮನವರು,ಬಾಳುಮಾಮಾರವರು,ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರು,ಚಂದ್ರಗುಪ್ತ ಮೌರ್ಯರವರು,ಮಲೈ ಮಹಾದೇಶ್ವರದ ಅಲಂಬಾಡಿ ಜಂಜೇಗೌಡರು,ರೇವಣಸಿದ್ದರು,ಅಮೋಘಸಿದ್ದರು, ಇಂಥಾ ಅನೇಕ ದಾರ್ಷಣಿಕರು,ಕವಿಗಳು,ಆಧ್ಯಾತ್ಮಚಿಂತಕರು,ದೈವೀಪುರುಷರು,ರಾಜರು,ವೀರ ಶೂರರು,ದಾನಧರ್ಮರು ಪಶುಪಾಲಕರು ಪವಾಡಪುರುಷರು ಒಬ್ಬರಾ ಇಬ್ಬರಾ ಸರ್ವರಂಗದಲ್ಲೂ ಸಾವಿರಾರು ಮಹಾನ್ ಗೌರವಾನ್ವಿತರು ಈ ಸಮಾಜದಲ್ಲಿ ದೈವದತ್ತವಾಗಿ ಪಡೆದುಕೊಂಡು ಬಂದ ಶೌರ್ಯ,ಜ್ಞಾನ,ಸೇವೆಗಳನ್ನು ಹೆಸರಿಸಲೂ ಆಗದು ಅಂಕಿಸಂಖ್ಯೆಗಳೂ ನಿಲುಖಲಾರವು.
ಈ ಸಮಾಜದ ಪೂರ್ವಜರ ಸತ್ಯ,ನಿಷ್ಠೆ ಪ್ರಾಮಾಣಿಕತೆಗೆ ಹೆಸರುವಾಸಿ ಆದ್ದರಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಸಮಾಜ ಅದೆಷ್ಟೋ ಅನ್ಯಾಯ,ಅತ್ಯಾರ,ದೌರ್ಜನ್ಯ, ದಬ್ಬಾಳಿಕೆಗಳಿಗೆ ಒಳಗಾದರೂ ಸಹ ತನ್ನ ಆತ್ಮ ಶುದ್ಧಿಯನ್ನು ಮಾತ್ರ ಕಲುಶಿತ ಗೊಳಿಸಿಕೊಂಡಿಲ್ಲಾ.ಇನ್ನೊಬ್ಬರಿಗೆ ಅನ್ಯಾಯ ಮಾಡಿಲ್ಲಾ.ಬೇರೆಯಾರಿಗಾದರೂ ಅನ್ಯಾಯ ಕಂಡುಬಂದರೆ ತಕ್ಷಣವೇ ಅಸಹಾಯಕರ ಪರ ಧ್ವನಿ ಎತ್ತಿ ಅವರಿಗೆ ರಕ್ಷಣೆ ಕೊಡುವ ಮುಖಾಂತರ ಪರರನ್ನು ವೈರತ್ವ ಕಟ್ಟಿಕೊಂಡಿದೆ ವಿನಹ ಆದರೆ ತನಗಾದ ಅನ್ಯಾಯದಿಂದಲ್ಲಾ.ತನಗಾದಾನ್ಯಾಯವನ್ನು ತಾನೇ ಅನುಭವಿಸುವ ವಂಶವಾಹಿನಿ ಸಮಾಜವಿದು.
ಈ ಸಮಾಜದಲ್ಲಿ ಅನಕ್ಷರತೆ,ಮೂಢನಂಬಿಕೆ,ಕಾಡು ಮೇಡುಗಳವಾಸ,ಪರರಸೇವೆಗಾಗಿಯೇ ತನ್ನನ್ನು ಮುಡಿಪಾಗಿಟ್ಟು ಇನ್ನೊಬ್ಬರ ಜಮೀನು,ಹೊಲದ್ದೆ,ಕೈಗಾರಿಕೆ,ಸಂಘಸಂಸ್ಥೆಗಳಲ್ಲಿ ಪ್ರಾಮಾಣಿಕತೆಯ ಶ್ರಮವನ್ನು ವಹಿಸುತ್ತಾ ಪರರ ಏಳ್ಗೆಯನ್ನೇ ಬಯಸುವ ಈ ಸಮಾಜಕ್ಕೆ ಅನಾದಿಕಾಲದಿಂದಲೂ ಕುಲಗುರು ಪರಂಪರೆಯಿದ್ದರೂ ಸಹ ಅನಕ್ಷರತೆಯ ಹಾಗೂ ನಿಖರವಾದ ವಾಸಸ್ಥಳವಿಲ್ಲದೆ ಅಲೆಮಾರಿಯಿಂದಾಗಿ ಪರಸ್ಪರ ಸಂಪರ್ಕದ ಕೊರತೆಯಿಂದಾಗಿ ಸಂಘಟಿತರಾಗದೇ ಬಡತನ,ನೋವು,ಸಂಕಟಗಳನ್ನ ಅನುಭವಿಸುತ್ತಲೇ ನಡೆದಿತ್ತು.ಆದರೆ ಇತ್ತೀಚೆಕೆ ಅಲ್ಪ ಸ್ವಲ್ಪ ಜಾಗೃತರಾದ ಸಮಾಜದ ಕೆಲವರು ತಮಗೊಂದು ಗುರು ಮಠ ಬೇಕೆಂದುಕೊಂಡು ಸಮಾಜದ ಕುಲ ಗುರುಗಳಲ್ಲಿ ಒಮ್ಮತ ವಿಲ್ಲದ್ದರಿಂದ ಇಷ್ಟು ಹಿಂದುಳಿದ ಸಮಾಜವನ್ನು ಮೇಲೆತ್ತಲು ಏಣಿಯೊಂದರ ಅವಶ್ಯಕತೆಯಣ್ಣು ಅರಿತ ಕೆಲ ಮುಖಂಡರುಗಳು ರಾಜ್ಯದಾದ್ಯಂತ ಸಮಾಜದ ಒಗ್ಗೂಡಿಕೆಗಾಗಿ ತಮ್ಮ ಶ್ರಮ ಮತ್ತು ಬುದ್ದಿವಂತಿಕೆಯನ್ನು ಬಳಸಿ ನಾಡಿನಾದ್ಯಂತ ಸಂಚರಿಸಿ ಜನಜಾಗೃತ ಗೊಳಿಸಿ ಒಂದು ಸಮಾಜದ ಪೀಠ ಸ್ಥಾಪಿಸಲು ನಿರ್ಣಯಿಸಿ ಹಲವು ಚರ್ಚೆಗಳನಂತರ ಪರಾಮರ್ಶಿಸಿ “ಕಾಗಿನೆಲೆ ಆದಿಕೇಶವರಾಣ ಪರಮ ಭಕ್ತ,ಕೀರ್ತನಕಾರ,ಕವಿ,ದಂಡನಾಯಕ,ಆಧ್ಯಾತ್ಮಚಿಂತಕ,ಮನುಕುಲ ಉದ್ದಾರಕ,ಮಾನವರೆಲ್ಲರೂ ಸಮಾನರು ಎಂಬಸಂದೇಶವನ್ನು ವಿಶ್ವಕ್ಕೇ ಸಾರಿದ ತಿಮ್ಮಪ್ಪನಾಯಕನ ಕರ್ಮಭೂಮಿ ಕಾಗಿನೆಲೆಯನ್ನು ಕೇಂದ್ರವನ್ನಾಗಿಸಿಕೊಂಡು “ಶ್ರೀ ಕನಕ ಗುರು ಪೀಠ”ವನ್ನು ಕಾಗಿನೆಲೆಯಲ್ಲಿ ಸ್ಥಾಪಿಸಲು ಅಂದಿನ ಸಮಾಜದ ಮುಖಂಡರುಗಳು ತೀರ್ಮಾಣಿಸಿದರು.ಸಮಾಜಕ್ಕೆ ಗುರು ಪೀಠ ಸ್ಥಾಪಿಸುವ ನಿರ್ಧಾವೆನೋ ಆಯಿತು ಆದರೆ ಆ ಮಠದ ಪೀಠಾಧಿಪತಿಯ ನೇಮಕದ ವಿಚಾರಬಂದಾಗ ಸಮಾಜಕ್ಕೆ ಮತ್ತೊಂದು ಒಳ ತೊಡಕು ಉಂಟಾಯಿತು.ಆಗ ಹಲವಾರ ವಿಷಯಗಳು ಪ್ರಸ್ಥಾಪವಾದಾಗ ಸಮಾಜದ ಕುಲಗುರು ಪರಂಪರೆಯ ಹಲವರನ್ನು ಸಂಪರ್ಕಿಸಿ ಮಠದ ಪೀಠಾಧಿಪತಿಯ ಆಯ್ಕೆ ನಿರ್ಣಯಿಸಲಾಯಿತು.ಆಗ ಸಮಾಜ ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಬಹಳ ಹಿಂದಿರುವುದರಿಂದ ಈ ಮಠ ಮತ್ತು ಪೀಠಾಧಿಪತಿಯನ್ನು ನೇಮಿಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲಾ.ಆದರೂ ಸಮಾಜದ ಪ್ರಸ್ತುತ ಮತ್ತು ಹಿಂದಿನ ಅನೇಕ ನಾಯಕರ ಪರಿಶ್ರಮದಿಂದ ಕನಕ ಗುರು ಮತ್ತು ಕನಕಗುರುಪೀಠವು ಕಾಗಿನೆಲೆಯಲ್ಲಿ ಸ್ಥಾಪಣೆಯಾಯಿತು ಸಮಾಜದ ಶ್ರೀ ಕನಕ ಗುರುಪೀಠ ಕಾಗಿನೆಲೆಯ ಸ್ಥಾಪನೆ ಮತ್ತು ಪ್ರಥಮ ಜಗದ್ಗುರುಗಳ ಪಟ್ಟಾಭಿಷೇಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದಲೇ ನೆರವೇರಿತು.ಆ ಕಾರ್ಯಕ್ರಮಕ್ಕೆ ನಾನೂ ಭಾಗವಹಿಸಿದ್ದೆ ಎಂಬ ಸಂತಷ ನನಗೂ ಇದೆ.

ಶ್ರೀ ಕಾಗಿನೆಲೆ ಕನಕಗುರು ಪೀಠದ ಪ್ರಥಮ ಜಗ್ದುರುಗಳನ್ನಾಗಿ “ಶ್ರೀ ಬೀರೇಂದ್ರಕೇಶವ ತಾರಕಾನಂದಪುರಿ”ಮಹಾ ಸ್ವಾಮಿಜಿಗಳನ್ನು ಪೀಠಾಧಿಪತಿಯನ್ನಾಗಿಸಲಾಯಿತು.ಅಲ್ಲಿಂದು ಸುರುವಾದ ಜನಜಾಗೃತಿ ಕೆಲಸಕಾರ್ಯಗಳು ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ರಾಜಕೀಯ ಎಡಬಿಡದೆ ಸಾಗುತ್ತಾ ಬಂದವು
ಶ್ರೀ ಕನಕ ಗುರುಪೀಠ ಕಾಗಿನೆಲೆ ಮಹಾಸಂಸ್ಥಾನದ ಪ್ರಥಮ ಜಗದ್ಗುರುಗಳಾದ ಶ್ರೀ ಬೀರೇಂದ್ರಕೇಶವ ತಾರಕಾನಂದಪುರಿ ಯವರು ಕೈಲಾಸವಾಸಿಯಾದನಂತರದಲ್ಲಿ ನಡೆದ ಗುರು ಪೀಠಾಧಿಪತಿಯ ಅನ್ವೇಷಣೆಯಲ್ಲಿ ಶ್ರೀ ನಿರಂಜನಾನಂದ ಪುರಿ ಮಹಾ ಸ್ವಾಮಿಜಿಯವರನ್ನು ಸಮಾಜ ಗುರುತಿಸಿ ಅವರನ್ನು ಶ್ರೀ ಕನಕಗುರುಪೀಠದ ಪೀಠಾಧಿಪತಿಯನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು.
ಶ್ರೀ ಕನಕಗುರುಪೀಠದ ಪೀಠಾಧಿಪತಿಯಾಗಿದ್ದ ದಿನದಿಂದಲೇ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಮಹಾ ಗುರುಗಳು ತಾವು ವಿಶ್ರಮಿಸದೇ ಸಮಾಜದ ಒಳಿತಿಗಾಗಿ,ಅಭಿವೃದ್ದಿಗಾಗಿ, ಶೈಕ್ಷಣಿಕ,ಸಾಮಾಜಿಕ,ಆರ್ಥಿಕ,ಸುಧಾರಣೆಗಾಗಿ ಹಗಲಿರುಳು ಶ್ರಮಿಸುತ್ತಿರುವುದಂತೂ ಸತ್ಯ.ಅದರಂತೆ ಹಲವು ಏಳುಬೀಳು ನಿಂದನೆಗಳ ಮಧ್ಯವೂ ಎದೆಗುಂದದೆ ತಮ್ಮ ಸಮಾಜವನ್ನಷ್ಟೇ ಅಲ್ಲದೆ ಇತರೆ ಹಿಂದುಳುದ ದೀನದಲಿತ ಅಲ್ಪಸಂಖ್ಯಾತರನ್ನೂ ಒಗ್ಗೂಡಿಸಿಕೊಂಡು ಎಲ್ಲರ ಸಾಮಾಜಿಕ ಸುಧಾರಣೆ ಕೆಲಸದಲ್ಲಿ ಟೊಂಕಕಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಶ್ರಮಿಸುತ್ತಿರುವುದನ್ನು ಅಲ್ಲಗಳೆಯಲಾಗದು.ಹಿಂದೆ ಒಂದು ಮಾತಿತ್ತು ಒಂದು ಕುರಿಗೆ ಕೂಗಿದರೆ ಇಡೀ ಕುರಿ ಹಿಂಡೇ ಬರ್ತಿತ್ತು ಅಂತೆ ಅದು ಜವಾರಿ ಕುರಿಗಳಿದ್ದಕಾಲ!ಆದರೆ ಈಗ ಹಾಗಿಲ್ಲಾ ಏ ಅವನು ಹೋಗುವದಾರಿ ನಮಗೆ ಬೇಡ ಆತನ ಹಿಂದೆ ನಾವೇಕೆ ಹೋಗಬೇಕು ಎಂದು ಒಡೆದು ಎಂಟೂದಿಕ್ಕಗೆ ಮುಖಮಾಡಿಕೊಂಡು ಹೋಗುವ ಕೆಲವು ಬೇರೆ ಇತ್ತೀಚಿನ ಹೊಸ ತಳಿಗಳ ಕುರಿಯಂತಿರುವವರನ್ನು ಒಗ್ಗೂಡಿಸಿ ಕರೆದುಕೊಂಡುಹೋಗುವ ಬಹುದೊಡ್ಡ ಸವಾಲು ಇದೆಯಲ್ಲಾ ಅದನ್ನು ಅನುಭವಿಸುವವರಿಗೇಗೊತ್ತು ಅದರ ಸಂಕಟ ಏನೆಂದು.ಅದು ಈ ನಮ್ಮ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಶ್ರೀ ಗಳಿಗೆ ಹೆಚ್ಚು ಅನುಭವವಾಗಿದೆ ಎಂಬ ಅನಿಸಿಕೆ ನನ್ನದು.
ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಮತ್ತು ಮೂಢ ನಂಬಿಕೆಗಳನ್ನು ಪರಿಪಾಲಿಸುವ ಸಮುದಾಯಗಳನ್ನು ಜಾಗೃತ ಗೊಳಿಸಿ ಜೊತೆಜೊತೆಯಾಗಿ ಕರೆದು ಒಟ್ಟೂಗೂಡಿಸುವ ಶ್ರಮ ಮತ್ತು ಅವರ ನಿರಂತರ ಸಮಾಜಪರ ಚಿಂತನೆಗಳಿಗೆ ದಾವಣಗೆರೆ ವಿಶ್ವವಿದ್ಯಾಲಯವು ಅತ್ಯಂತ ಸೂಕ್ತ ತೀರ್ಮಾನ ತಗೆದುಕೊಂಡು ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರುಪೀಠ ಕಾಗಿನೆಲೆಯ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮಿಜಿಗಳಿಗೆ ನೀಡುತ್ತಿರುವ ಗೌರವ ಎಲ್ಲಾ ಅಹಿಂದ ವರ್ಗಕ್ಕೆ ನೀಡಿದ ಗೌರವವಾಗಿದೆ ಈ ನಿರ್ಣಯವನ್ನು ಸ್ವಾಗತಿಸುತ್ತಾ ದಾವಣಗೆರೆ ವಿಶ್ವವಿದ್ಯಾನಲಯದ ಎಲ್ಲಾ ಆಡಳಿತ ಮಂಡಳಿಗೆ ಹಾಗೂ ಈ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಶ್ರೀ ಶ್ರೀ ಪರಮಪೂಜ್ಯ ಜಗದ್ಗುರು ನಿರಂಜನಾನಂದ ಮಹಾಸ್ವಾಮಿಜಿಗಳಿಗೂ ತುಂಬು ಹೃದಯದಿಂದ ಭಕ್ತಿಪೂರ್ವಕವಾಗಿ ಅಭಿನಂದನೆಯನ್ನು ಎಲ್ಲಾ ಅಹಿಂದ ವರ್ಗದ ಪರವಾಗಿ ಅಭಿನಂನೆಗಳನ್ನು ಅರ್ಪಿಸುತ್ತೇನೆ.(ಎಸ್.ಕೆ.ಒಡೆಯರ್ ದಾವಣಗೆರೆ)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments