ವಿಜಯಪುರ:ಉತ್ತರ ಕರ್ನಾಟಕ ಜನ ಎಂದು ಹೇಳುವಕಿಂತ ಹೆಚ್ಚಾಗಿ ಬಸವನಾಡಿನ ಜನರೆಂದು ಹೇಳುವುದೇ ಸೂಕ್ತವೆನಿಸುತ್ತದೆ.ಕಾರಣ ಉತ್ತರ ಕರ್ನಾಟಕದ ಜನರು ಹಿಂದು,ಮುಸ್ಲಿಮ್ ಮತ್ತು ಭಾಷೆವಿಷಯದಲ್ಲೂ ಮರಾಠಿ,ಉರ್ದು,ಕನ್ನಡ ಇತರ ತಾರತಮ್ಯವಿಲ್ಲದೆ ವಿಶೇಷವಾಗಿ ಜಾತಿವ್ಯವಸ್ಥೆಯವಿರುದ್ಧ ಮತ್ತು ಗೊಡ್ಡು ಸಂಪ್ರದಾಯಗಳವಿರುದ್ಧ ಕಠಿಣ ನಿರ್ಣಯಮಾಡಿ ಮನೆತೊರೆದು ಸರ್ವರೂ ಸಮಾನರೆಂಬ ಘೋಷಣೆಯೊಂದಿಗೆ ಶೋಷಿತ ದೀನ ದಲಿತ ಹಿಂದುಳಿದ ಸಮುದಾಯಗಳಿಗೆ ಗೌರವಯುತವಾದ ಸ್ಥಾನಮಾನಗಳು ಸಿಗಬೇಕು.
ಮೇಲುವರ್ಗಗಳಿಂದ ಆಗುತ್ತಿರುವ ಅನ್ಯಾಯ,ಅಪಮಾನ,ಅವಮಾನ,ಗುಲಾಮಗಿಯಿಂದ ನರಳುತ್ತಿರುವವರಿಗೆ ಸ್ವಾಭಿಮಾನದ ಬದುಕಿಗಾಗಿ ಸರ್ವರೂ ಸಮಾನರೆಂಬ ಕೂಗಿನೊಂದಿಗೆ ಎಲ್ಲಾ ಶೋಷಿತ ಸಮುದಾಯಗಳಿಗಾಗಿ ಲಿಂಗಾಯತ ಎಂಬ ಧರ್ಮ ಸ್ಥಾಪಿಸಿ ಅದರಲ್ಲಿ ಕಾಯಕವೇ ಕೈಲಾಸ ಎಂದು ಉಪದೇಶನೀಡಿ ಶರಣರನಾಡನ್ನಾಗಿಸಿದ ಅಣ್ಣ ಬಸವಣ್ಣನವರ ಫಲದಿಂದಾಗಿ ಇಂದಿಗೂ ಕೂಡಾ ಈ ಬಸವನಾಡಿನಲ್ಲಿ ಜಾತಿ,ಧರ್ಮ, ಭಾಷೆಗಳ ಗೊಡವೆಗೆಹೋಗದೆ ಮನುಕುಲವೆಲ್ಲಾ ಒಂದೇ ಎಂದು ಇವತ್ತಿನವರೆಗೂ ಮುಸ್ಲಿಮರ ಬಕರೀದ್,ರಮಜಾನ್,ಮೋಹಮ್ ನಂಥಹ ಹಿಂದುಗಳ ಪ್ರತಿಯೊಂದು ಹಬ್ಬ ಹರಿದಿನಗಳಾಗಿರಬಹುದು ಸಿದ್ಧಿಪುರುಷರ ಮಹಾನ್ ನಾಯಕರ ದಿನಾಚರಣೆಗಳಾಗಿರಬಹುದು ಎಲ್ಲಾ ಜಾತಿ ಧರ್ಮಿಯರೂ ಒಟ್ಟಾಗಿ ಹಿಂದೆಯೂ ಆಚರಿಸಿಕೊಂಡು ಬಂದಿರುವುದು ಅದು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿರುವುದು ಉತ್ತಮ ಚರಿತ್ರೆಯಾಗಿಮುಂದುವರಿದಿದೆ.
ವಿಜಯಪುರ ಜಿಲ್ಲೆಯ ಹಾಗೂ ತಾಲೂಕಿನ ಹೊನಗನಹಳ್ಳಿಯು ಮೊದಲು ಅಣ್ಣಬಸವಣ್ಣನ ಜನ್ಮ ಸ್ಥಳ ಬಸವನ ಬಾಗೇವಾಡಿ ವಿಧಾನಸಭೆ ಮತಕ್ಷೇತ್ರಕ್ಕೆ ಒಳಪಟ್ಟಿದ್ದು ಇತ್ತೀಚೆಗೆ ಕ್ಷೇತ್ರವಿಂಗಡನೆನಂತರ ಬಬಲೇಶ್ವರ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿದೆ ಇಲ್ಲಿಯ ರಾಜಕಾರಣಿಗಳು ಪಕ್ಷಬೇಧವಿಲ್ಲದೆ ಎಲ್ಲಾ ರಾಜಕೀಯಪಕ್ಷಗಳ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಅಭಿವೃದ್ಧಿ ಶೂನ್ಯನೆಂದರೂ ತಪ್ಪಾಗಲಾರದು.ಆದರೂ ಇಲ್ಲಿ ರಾಜಕೀಯಮುಖಂಡರಿಗೆ ಬಹುಪರಾಗ್ ಹೇಳುವ ಲೋಕಲ್ ಲೀಡರ್ಗಳಿಗೇನೂ ಕೊರತೆ ಇಲ್ಲಾ.
ಈ ರಾಜಕೀಯ ಲೀಡರಗಳ ಪರವಿರೋಧಗಳೇನೇ ಇದ್ದರೂ ಸಹ ಈ ಗ್ರಾಮದ ಪ್ರತಿಯೊಬ್ಬರ ಮನೆಯ ಕಾರ್ಯಕ್ರಮಗಳಿರಬಹುದು,ಗ್ರಾಮದ ಯಾವುದೇ ಸಮುದಾಯದಲ್ಲಿ ಗುರುತಿಸಿಕೊಂಡ ಧಾರ್ಮಿಕ ಜಾತ್ರಾ ಮಹೋತ್ಸಗಳಿರಬಹುದು ಯಾವುದೇ ತಾರತಮ್ಯ ವಿಲ್ಲದೆ ಒಟ್ಟಾಗಿ ನಡೆಸಿಕೊಂಡು ಹೋಗುವ ಪರಂಪರೆಯನ್ನು ಈ ಗ್ರಾಮದ ಪೂರ್ವಿಕರು ಹಾಕಿಕೊಟ್ಟಿರುವುದು ಹೆಮಮೆಯ ವಿಷಯ ಅದನ್ನು ಪರಿಪಾಲಿಸಿಕೊಂಡು ಹೋಗುತ್ತಿರುವ ಇಂದಿನ ಪೀಳಿಗಳ ಕಾರ್ಯವೈಖರಿಸ್ಲಾಘನೀಯ.
ಈ ಗ್ರಾಮದಲ್ಲಿ ಬೀರೇಶ್ವರ,ಬಕ್ಕೇಶ್ವರ,ಹನುಮಂತ,ಸಂಗಮೇಶ್ವರ,ಅಂಬಾಭವಾಣಿ,ದುರುಗಮ್ಮಾ,ಗೌಡರದ್ಯಾಮವ್ವ,ಬಡಿಗೇರ್ ದ್ಯಾಮವ್ವ,ತಾಯವ್ವ,ಮಂಗವ್ವ,ಕೊರವೆವ್ವ,ತುಳಜಾಬಾಯಿ, ಮಲ್ಲಿಕಾರ್ಜುನ,ಮಾತಂಗಿ ಅಷ್ಟೆ ಅಲ್ಲದೆ ಅನೇಕ ಸಿದ್ದಿಪುರುಷರ ಆಶ್ರಮಗಳೂ ಸಹ ಈ ಗ್ರಾಮದಲ್ಲಿವೆ ಎಲ್ಲಾ ಜಾತ್ರೆ ದಿನಾಚರಣೆಗಳು ನಡೆದರೂ ಶ್ರೀ ಶೈಲಮಲ್ಲಿಕಾರ್ಜುನ ಜಾತ್ರೆ ಸ್ವಲ್ಪ ವಿಶೇಷವೆನಿಸುತ್ತದೆ.ಕಾರಣ ಈ ಗ್ರಾಮದ ಪ್ರತಿಯೊಂದು ಮನೆಯವರು ಆಂದ್ರಪ್ರದೇಶದ ಶ್ರೀ ಶೈಲಂ ನಲ್ಲಿರುವ ಶ್ರೀ ಮಲ್ಲಿಕಾರ್ಜನನ ದರ್ಶನಕ್ಕೆ ಪ್ರತಿವರ್ಷ ಪಾದಯಾತ್ರೆ,ಬಸ್,ಕಾರು,ರೈಲುಗಳ ಮುಖಾಂತರ ಹೋಗಿರುತ್ತಾರೆ ಇದೊಂದು ವಿಶೇಷ ವಾಗಿ ಈ ಗ್ರಾಮದಲ್ಲಿ ಕಂಬೀ ಐದೇಶಿಯೆಂದು ಆಚರಿಸುತ್ತಾರೆ.
ಅದೇ ಕಂಬೀ ಐದೇಶಿ ಎಂಬ ಶ್ರೀ ಶೈಲಮಲ್ಲಿಕಾರ್ಜುನ ಜಾತ್ರೆ ನಡೆಯಿತು.ಸ್ಥಳಿಯ ಯುವಕರಿಂದ ನಾಟಕ,ಮನೋರಂಜನೆ ಕಾರ್ಯಕ್ರಮಗಳೂ ನಡೆದವು ಗ್ರಾಮದ ಹೆಣ್ಣುಮಕ್ಕಳನ್ನು ಅಕ್ಕ ತಂಗಿ ಬಂಧು ಬಂಧುಬಾಂಧವರನ್ನು ಕರೆದು ಅತ್ಯುತ್ಸಾಹದಿಂದ ಆಚರಿಸುವ ಈ ಜಾತ್ರಾ ಮಹೊತ್ಸವವು ವಿಜೃಂಭಣೆಯಿಂದ ಜರುಗಿತು.