ದಾವಣಗೆರೆ:ಪೊಳ್ಳು ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತನ್ನ ಬರಿದಾಗಿರುವ ಖಜಾನೆ ತುಂಬಿಸಿಕೊಳ್ಳಲು ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಾ, ಮತಬ್ಯಾಂಕ್ ಕೇಂದ್ರೀಕರಿಸಿ ರಾಜಕಾರಣ ಮಾಡುತ್ತಾ, ಅಲ್ಪಸಂಖ್ಯಾತರ ಹೆಸರಿನಲ್ಲಿ ಕೇವಲ ಮುಸಲ್ಮಾನರಿಗೆ ಮಾತ್ರ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲಾತಿ ನೀಡಿ ಹಿಂದೂ ಸಮುದಾಯಕ್ಕೆ ದ್ರೋಹ ಬಗೆಯುತ್ತಿರುವ ಜನವಿರೋಧಿ ಭ್ರಷ್ಟ ಕಾಂಗ್ರೇಸ್ ಸರ್ಕಾರದ ವಿರುದ್ದ ದಿನಾಂಕ 21/4/2025 ರಂದು
ಬಿ ಜೆ ಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ವೈ.ವಿಜಯೇಂದ್ರ ರವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜನಕ್ರೋಶ ಪ್ರತಿಭಟನೆ ಕಾರ್ಯಕ್ರಮದಲ್ಲಿ ಜಗಳೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು,ತಾಲೂಕಿನ 57 ಕೆರೆಗಳ ಸರದಾರರಾದ ಸನ್ಮಾನ್ಯ ಶ್ರೀ ಹೆಚ್.ಪಿ.ರಾಜೇಶ್ ರವರು ಭಾಗವಹಿಸಿದ್ದರು….
ಈ ಸಂದರ್ಭದಲ್ಲಿ ರಾಜ್ಯ
ಬಿ ಜೆ ಪಿ ಘಟಕದ ಎಲ್ಲಾ ಮುಖ್ಯಸ್ಥರು,ಮಹಿಳಾ ಪದಾಧಿಕಾರಿಗಳು ಹಾಗೂ ದಾವಣಗೆರೆ ಜಿಲ್ಲೆಯ ಬಿ ಜೆ ಪಿ ಘಟಕದ ಅಧ್ಯಕ್ಷರು,ಮಾಜಿ ಸಚಿವರು,ಪ್ರಧಾನ ಕಾರ್ಯದರ್ಶಿಗಳು,ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.