Thursday, August 21, 2025
Homeಕ್ರೈಂರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ವಶಪಡಿಸಿಕೊಂಡ ಅಕ್ರಮ ಮಾದಕ ವಸ್ತುಗಳು

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ವಶಪಡಿಸಿಕೊಂಡ ಅಕ್ರಮ ಮಾದಕ ವಸ್ತುಗಳು


ದಾವಣಗೆರೆ: “ಆಪರೇಷನ್ ನಾರ್ಕೋಸ್” ಎಂಬ ವಿಶೇಷ ಕಾರ್ಯಚರಣೆಯ ಅಡಿಯಲ್ಲಿ, ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ವಿಶೇಷ ತಂಡವು, ರೈಲು ಸಂಖ್ಯೆ 18111 ಟಾಟಾ – ಯಶವಂತಪುರ ಎಕ್ಸ್‌ಪ್ರೆಸ್‌ ನಲ್ಲಿ ಬೀರೂರು ಮತ್ತು ಕಡೂರು ನಿಲ್ದಾಣಗಳ ನಡುವೆ ಅಚ್ಚರಿ ತಪಾಸಣೆಯನ್ನು ನಡೆಸಿತು.
ಈ ಕಾರ್ಯಚರಣೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತರಾದ ಸ್ಯಾಮ್ ಪ್ರಸಾಂತ್ ಜೆ.ಆರ್. ಅವರ ನೇತೃತ್ವದಲ್ಲಿ ನಡೆಯಿತು. ಈ ತಂಡದಲ್ಲಿ ಆನಂದ ಬಿ. (ASI/CIB/MYS, ಕ್ರೈಮ್ ಪ್ರಿವೆನ್ಷನ್ ಡಿಟೆಕ್ಷನ್ ತಂಡದ ಉಸ್ತುವಾರಿ), ಶಿವನಂದ ಟಿ., ಹೆಡ್ ಕಾನ್ಸ್ಟೇಬಲ್, ದಾವಣಗೆರೆ ಮತ್ತು ಸಿ. ವೆಂಕಟೇಶ (ASI/RPF/RRB) ಇದ್ದರು.
ಪರಿಶೀಲನೆಯ ಸಂದರ್ಭದಲ್ಲಿ, ತಂಡವು ಜನರಲ್ ಕೋಚ್ ಸಂಖ್ಯೆ SWR 247321 ರಲ್ಲಿ ಪ್ರಾಥಮಿಕ ತನಿಖೆಯಿಂದ ನಿಖರವಾದ ಬ್ಯಾಗ್ ಅನ್ನು ಪತ್ತೆಹಚ್ಚಿತು. ಹತ್ತಿರದ ಪ್ರಯಾಣಿಕರಿಂದ ಮಾಹಿತಿ ಪಡೆದುಕೊಂಡರೂ ಯಾರೂ ಇದನ್ನು ತಮ್ಮದು ಎಂದು ಹೇಳಲಿಲ್ಲ. ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಬ್ಯಾಗ್ ತೆರೆಯಲಾಗಿದ್ದು, ಅದರಲ್ಲಿ ಸುಮಾರು ₹1,25,000 ಮೌಲ್ಯದ 25 ಗ್ರಾಂ ಎಂಡಿಎಂಎ (ಕೃತಕ ಮಾದಕ ವಸ್ತು), ₹90,000 ಮೌಲ್ಯದ 1.522 ಕೆ.ಜಿ ಗಾಂಜಾ ಮತ್ತು ₹1,850 ಮೌಲ್ಯದ 210 ಗ್ರಾಂ ತೂಕದ 37 ಭಾಂಗ್ ಚಾಕೊಲೇಟ್‌ಗಳನ್ನು ಪತ್ತೆಹಚ್ಚಲಾಯಿತು. ವಶಪಡಿಸಿಕೊಂಡ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹2,16,850.
ಈ ಬ್ಯಾಗ್ ಅನ್ನು ಆರ್‌ಪಿಎಫ್ ತಂಡವು ಮಧ್ಯಾಹ್ನ 1:55 ಗಂಟೆಗೆ ಕಡೂರು ನಿಲ್ದಾಣದಲ್ಲಿ ಭದ್ರಪಡಿಸಿದ್ದು, ವಸ್ತುಗಳ ಚಿತ್ರ ದಾಖಲೆಗಳೊಂದಿಗೆ ಕಡೂರು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಂದಿನ ಕಾನೂನು ಕ್ರಮವನ್ನು ಅವರು ಕೈಗೊಳ್ಳಲಿದ್ದಾರೆ.
ಸ್ಯಾಮ್ ಪ್ರಸಾಂತ್ ಜೆ.ಆರ್., ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತರು, ಮಾದಕ ದ್ರವ್ಯಗಳ ಸಾಗಣೆಯನ್ನು ತಡೆಗಟ್ಟಲು ಮತ್ತು ರೈಲ್ವೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಆರ್ ಪಿ ಎಫ್ ಬದ್ಧವಾಗಿದೆ. ಈ ಯಶಸ್ವಿ ಕಾರ್ಯಾಚರಣೆ ನಮ್ಮ ಪೂರ್ವಭಾವಿ ಮತ್ತು ರಕ್ಷಣೆ ಕ್ರಮಗಳ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments