ಗದಗ:
ಗದಗ ಜೆಲ್ಲೆಯ ಅಶ್ವಿನಿ ಪ್ರಕಾಶನ ಪ್ರಕಾಶಕರಾದ ಶ್ರೀಮತಿ. ಡಾ. ವ್ಹಿ. ವ್ಹಿ. ಹಿರೇಮಠರಿಗೆ ಇವರ ಸಾಹಿತ್ಯ ಮತ್ತು ಸಂಘಟನೆ ಸೇವೆಗಾಗಿ
” ಚಿತ್ರ ಸಂತೆ “ನೀಡುವ ವರ್ಷದ ಕನ್ನಡಿಗ ಪ್ರಶಸ್ತಿ ಲಭಿಸಿದೆ.
ಜುಲೈ 30/7/2025ರಂದು ಬೆಂಗಳೂರಿನ ರಾಜಮಹಲ್ ಅರಮನೆ ನಗರದ ಹೈಡ್ ಪಾರ್ಕ್ ಹೋಟಲನಲ್ಲಿ ನಡೆಯುವ ಚಿತ್ರ ಸಂತೆ ಎಡಿಷನ್ 12 ರ ಕಾರ್ಯಕ್ರಮದಲ್ಲಿ ಚಿಲನ ಚಿತ್ರ ನಟರಾದ ಶ್ರೀಯುತ ಶಶಿಕುಮಾರ ಅವರು ಈ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುವುದು ಎಂದು ಚಿತ್ರ ಸಂತೆ ಸಂಘಟಕರಾದ ಶ್ರೀ ಗಿರೀಶ ಗೌಡ ಪತ್ರಿಕೆಯಲ್ಲಿ ತಿಳಿಸಿದ್ದಾರೆ. ಮೂವತ್ತು ವರ್ಷಗಳ ಕಾಲ ಪ್ರಕಾಶಕರಾಗಿ ವಿವಿಧ ಕೃತಿಗಳನ್ನು ರಚಿಸಿ ಕನ್ನಡ ಮನಸುಗಳ ಕೈಗೆ ನೀಡಿರುವ ಮತ್ತು ಸಾಹಿತ್ಯ ಸೇವೆ ಸಮಾಜಸೇವೆ ಸಂಘಟನೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶ್ರೀಮತಿ. ಡಾ. ವ್ಹಿ. ವ್ಹಿ. ಹಿರೇಮಠರಿಗೆ ಈ ವರ್ಷದ ಕನ್ನಡಿಗ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಇವರು ಕನ್ನಡ ಭುವನೇಶ್ವರಿಯ ಸೇವೆ ಮಾಡುತ್ತಿರುವುದು ಸಂತೋಷ ವಾಗುತ್ತದೆ. ಇವರಿಗೆ ಮುಂದಿನ ದಿನಮಾನಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರ ಮಡಲಗಿ ಬರಲೆಂದು ಶುಭ ಹಾರೈಸುತ್ತೇವೆ ಶ್ರೀಮತಿ. ಡಾ. ವ್ಹಿ. ವ್ಹಿ. ಹಿರೇಮಠರು ಸಾಹಿತ್ಯ ಸೇವೆ ಸಮಾಜಸೇವೆ. ಅಲ್ಲದೆ ಯುವ ಕವಿಗಳಿಗೆ ತಮ್ಮದೇ ಆದ ಅಶ್ವಿನಿ ಪ್ರಕಾಶನ ಗದಗ ಹಾಗೂ ಡಾ. ವ್ಹಿ. ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಇವರಿಗೆ ಈ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ. ಎಂದು ಚಿತ್ರ ಸಂತೆ ಸಂಘಟಕರಾದ ಶ್ರೀ. ಗಿರೀಶ ಗೌಡ ಬೆಂಗಳೂರು ಇವರು ಪತ್ರಿಕೆ ಪ್ರಕಟಣೆ ನೀಡಿದ್ದಾರೆ..