ದಾವಣಗೆರೆ- 12-9-25 ರಂದು ನಗರದ ಪಿಬಿ ರಸ್ತೆಯ ಡಿಸಿಎಂ ಟೌನ್ ಶಿಪ್ ಅಂಡರ್ ಪಾಸ್ ಹತ್ತಿರದ ಬೆಂಗಳೂರು ಕಡೆ ಸಾಗುವ (ಚೈತನ್ಯ ಟೆಕ್ನೋ ಸ್ಕೂಲ್ ಮುಂಭಾಗದ) ರಸ್ತೆ ಗುಂಡಿ ಬಿದ್ದಿದ್ದು ಕಳೆದ ನಾಲ್ಕಾರು ತಿಂಗಳಿನಿಂದ ಮೌಖಿಕವಾಗಿ ಸಂಬಂಧಿಸಿದವರಿಗೆ ಹೇಳಿದರೂ ಅವರು ನಿರ್ಲಕ್ಷೆ ವಹಿಸಿದ್ದರ ಮೇರೆಗೆ ಕೂಡಲೇ ರಸ್ತೆ ರಿಪೇರಿ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಆವರಗೆರೆ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಿ ನಂತರ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ತೆರಳಿ ನಗರ ಪಾಲಿಕೆ ಆಯುಕ್ತರಿಗೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಂ.3 ಉಪ ವಿಭಾಗ ರವರ ಕಚೇರಿಗೆ ತೆರಳಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ರಸ್ತೆ ರಿಪೇರಿಗಾಗಿ ಒತ್ತಾಯಿಸಿ ರಸ್ತೆ ತಡೆ ನಡೆಸಿದ ನೇತೃತ್ವವನ್ನು ಭಾರತ ಕಮ್ಯುನಿಸ್ಟ್ ಪಕ್ಷದ ಆವರಗೆರೆ ಶಾಖೆಯ ಪದಾಧಿಕಾರಿಗಳಾದ ಎ ತಿಪ್ಪೇಶ್, ಕೆರನಹಳ್ಳಿ ರಾಜು, ಈ ಎಸ್ ಉಮೇಶ್, ಕೆ ಬಾನಪ್ಪ, ನರೇಗಾ ರಂಗನಾಥ, ಶಿರನಹಳ್ಳಿ ಹನುಮಂತಪ್ಪ, ಕೆ ಮಹೇಶ, ಪರಶುರಾಮ, ಮಂಜುನಾಥ, ಸುರೇಶ್ ತತ್ವ ,ರಂಗಸ್ವಾಮಿ ರೈಡರ್ ,ಮೋಹನ ಕಾಮತ್, ಶಾರದಮ್ಮ ಸಾಧು ಹೋಟೆಲ್, ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ರಸ್ತೆ ರಿಪೇರಿ ಮಾಡುವಂತೆ ಒತ್ತಾಯಿಸಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ರಸ್ತೆ ತಡೆ.
RELATED ARTICLES