ಚನ್ನಗಿರಿ:
ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ, ಚನ್ನಗಿರಿ–ಬೀರೂರು ಹೆದ್ದಾರಿಯ ಮಸಣಿಕೆರೆ ಕ್ರಾಸ್ ಬಳಿ ನಡೆದ ಭಯಾನಕ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚನ್ನಗಿರಿ ಮಾರ್ಗದಿಂದ ಬರುತ್ತಿದ್ದ ಆಲ್ಟೊ ಕಾರು 800, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಭೀಕರವಾಗಿ ಢಿಕ್ಕಿ ಹೊಡೆದ ಪರಿಣಾಮ, ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿರುವ ದೃಶ್ಯಗಳು ಕಂಡುಬಂದಿರುತ್ತದಡ
ಅಪಘಾತದಲ್ಲಿ ಸ್ಥಳದಲ್ಲೇ ವಾಹನ ಚಲಾಯಿಸುತ್ತಿದ್ದ
ಉಮೇಶ್ 38 ವರ್ಷ, ಅಬಕಾರಿ ಇಲಾಖೆಯ ಸಿಬ್ಬಂದಿ ದುರ್ಮರಣ ಹೊಂದಿದವರು.
ಇನ್ನು ಉಳಿದ ನಾಲ್ಕು ಜನ ಗಂಭೀರ ಗಾಯಗೊಂಡವರು
ಮಲ್ಲಿಕಾರ್ಜುನ 38ವರ್ಷ– ಅಬಕಾರಿ ಇಲಾಖೆ
ಅವಿನಾಶ್ 25 ವರ್ಷ– ನ್ಯಾಯಾಂಗ ಇಲಾಖೆ
ಯಾಸಿನ್ ಖಾನ್ 30 ವರ್ಷ – ನ್ಯಾಯಾಂಗ ಇಲಾಖೆ ಮಹಾಂತೇಶ್ 36 ವರ್ಷ ಘಟನೆಯ ತೀವ್ರತೆ ಕಾರಣವಾಗಿ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ತಕ್ಷಣ 108 ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯ ನಡೆಸಿದರು.
108 ಸಿಬ್ಬಂದಿಗಳಾದ ಪುನೀತ್ ಮತ್ತು ಜಯಪ್ಪ, ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರ ಪ್ರಾಥಮಿಕ ಪರಿಶೀಲನೆಯಲ್ಲಿ, ಅಪಘಾತಕ್ಕೊಳಗಾದವರು ಹಾಸನ ಜಿಲ್ಲೆಯ ಬೇಲೂರಿನ ಮೂಲದವರು ಆಗಿದ್ದು, ದಾವಣಗೆರೆಗೆ ವಿವಾಹ ಸಮಾರಂಭಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಅಪಘಾತದ ನಂತರ ಬೇಲೂರು ನ್ಯಾಯಾಧೀಶರು ಹಾಗೂ ಶಿವಮೊಗ್ಗ ಶಾಸಕ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಮುಂದಿನ ತನಿಖೆ ಕೈಗೊಂಡಿದ್ದಾರೆ.
( ವರದಿ ಕುಳೇನೂರು ಅರುಣ್ ಕುಮಾರ್ ಎ. ಚನ್ನಗಿರಿ)
ಚನ್ನಗಿರಿ–ಬೀರೂರು ಹೆದ್ದಾರಿಯಲ್ಲಿ ಭೀಕರ ಅಪಘಾತ — ಒಬ್ಬರು ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ ಗಾಯ
RELATED ARTICLES

