ವಿಜಯಪುರ ಮೆಡಿಕಲ್ ಕಾಲೇಜ್ ಧರಣಿ ನಿರತರರು:ಸಚಿವ ಶಿವಾನಂದ ಪಾಟೀಲರಿಗೆ ಭೇಟಿ,ಸಚಿವರ ನಿರ್ಧಾರಕ್ಕೆ ಎದುರು ನೋಡುತ್ತಿದೆ ಜನ!
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ನೇತೃತ್ವದಲ್ಲಿ ನವೆಂಬರ್ 19 2025ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಹೋರಾಟಗಾರರ ನಿಯೋಗ ಭೇಟಿಯಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟಗಾರರ ಬೇಡಿಕೆಗೆ ಸ್ಪಂದಿಸದ ಹಿನ್ನಲೆ ಮಾತು -ಕಥೆ ವಿಫಲವಾಗಿದೆ.
ಹಿರಿಯ ಹೋರಾಟಗಾರರಾದ ಅರವಿಂದ ಕುಲಕರ್ಣಿ ಮತ್ತು ಮಲ್ಲಿಕಾರ್ಜುನ ಬಟಗಿ ಅವರು ಕರ್ನಾಟಕದ ಜನಪ್ರಿಯ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಜಿಲ್ಲೆಯ ಜನ ಪಕ್ಷಾತೀತವಾಗಿ ಶಿವಾನಂದ ಪಾಟೀಲ ಅವರ ಮೇಲೆ ಭರವಸೆ ಇಟ್ಟಿದ್ದಾರೆ. ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಜಿಲ್ಲೆಯ ಜನ ಎದುರು ನೋಡುತ್ತಿದ್ದಾರೆ.
ಸೆಪ್ಟೆಂಬರ್ 18 2025ಕ್ಕೆ ಪ್ರಾರಂಭವಾದ ಅನಿರ್ದಿಷ್ಟ ಧರಣಿ ಇಂದಿಗೆ (ನವೆಂಬರ್ 20ಕ್ಕೆ ) 64ದಿನ ಪೂರೈಸಿದೆ. ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ನಿರಂತರ ಧರಣಿ ನಡೆಯುತ್ತಿದೆ. ಧರಣಿಯ 4ನೇ ದಿನ ಸಚಿವರು ಬಂದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾದರಿ ನಡೆ ಅನುಸರಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿಪರವಾಗಿ ಇರುವ ಸಚಿವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

