ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿರುವ ಆಟೋ ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ, ಧಾರವಾಡ ಆಟೋ ರಿಕ್ಷಾ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಮಹಾನಗರದಲ್ಲಿ ಸುಮಾರು 25 – ಸಾವಿರ ಆಟೋ ರಿಕ್ಷಾ ಇದ್ದು ಪ್ರತಿ ದಿನ ಚಾಲಕರು ತಮ್ಮ ದುಡಿಮೆಯನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಇವರು ಮಳೆ, ಚಳಿ, ಬಿಸಿಲು,ಹಗಲು,ರಾತ್ರಿ ಎನ್ನದೆ ದಿನಪ್ರತಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಕಳೆದ 4 ತಿಂಗಳಿಂದ ಎಲ್.ಪಿ.ಜಿ ಗ್ಯಾಸ ಸಿಗದೆ ಆಟೋ ರಿಕ್ಷಾ ಚಾಲಕರು ಕಷ್ಟ ಪಡುತ್ತಿದ್ದಾರೆ. ರಾಜ್ಯ ಸರ್ಕಾರವು ಆಟೋ ರಿಕ್ಷಾ ಚಾಲಕರ ನೆರವಿಗೆ ಬಂದಿರುವುದಿಲ್ಲಾ.
ಮಾನ್ಯ ಜಿಲ್ಲಾಧಿಕಾರಿಗಳು ಆಟೋ ರಿಕ್ಷಾ ಚಾಲಕರ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಅಲ್ಪಸ್ವಲ್ಪ ಆಟೋಗಳಿಗೆ ಎಲ್.ಪಿ.ಜಿ. ಗ್ಯಾಸ ಹುಬ್ಬಳ್ಳಿ-ಧಾರವಾಡ ನೀಡುತ್ತಾ ಬಂದಿವೆ. ಆದರೆ ಬಂಕ್ ನವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾ ಬಂದಿರುತ್ತಾರೆ ಇದು ಆಟೋ ಚಾಲಕರಿಗೆ ನುಂಗಲಾರದ ತುತ್ತಾಗಿದೆ. ಮನೆ ಬಾಡಿಗೆ ಮನೆಯ ಖರ್ಚುವೆಚ್ಚ ಆಸ್ಪತ್ರೆಯ ಖರ್ಚುವೆಚ್ಚ ಹಾಗೂ ಮಕ್ಕಳ ಶಾಲಾ ಪ್ರವೇಶ ಫೀ ತುಂಬುವುದು ತುಂಬಾ ದುಬಾರಿಯಾಗಿದ್ದು, ಈ ಸಂದರ್ಭದಲ್ಲಿ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರವು ಮಾಡುತ್ತಾ ಬಂದಿವೆ. ಆದ ಕಾರಣ ತಾವುಗಳು ಆಟೋ ರಿಕ್ಷಾ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ತಮ್ಮಲ್ಲಿ ಈ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.
1) ಎಲ್.ಪಿ.ಜಿ ಗ್ಯಾಸ ದರ ಹೆಚ್ಚಳವಾಗಿದ್ದು ಜಿಲ್ಲಾಡಳಿತ ಈ ಹಿಂದೆ 30 ರೂಗಳ ಮೀಟರ್ ದರ ಮಾಡಿದ್ದು ಈಗ ಮೀಟರ್ ದರ ಹೆಚ್ಚಳ ಮಾಡಬೇಕು.
2) ಹುಬ್ಬಳ್ಳಿ-ಧಾರವಾಡ ನಗರದಲ್ಲಿ ದಿನೆ ದಿನೆ ಹೆಚ್ಚಾಗುತ್ತಿರುವ ನಮ್ಮ ಯಾತ್ರೆ ಓಲಾ, ಓಬರ್, ಖಾಸಗಿ ಕಂಪನಿಯ ವಾಹನಗಳನ್ನು ನಗರದಿಂದ ಹೊರಗಿಡಬೇಕು.ಟ್ರೈಲ್ ತೆಗೆದುಕೊಳ್ಳಬೇಕು. 3) ಆಟೋ ರಿಕ್ಷಾ ಚಾಲಕರಿಗೆ ಟೈಲ್ ನೀಡುವ ಸಂದರ್ಭದಲ್ಲಿ ಕಾರು ಬದಲು ಆಟೋ ರಿಕ್ಷಾ
4) ఆటిఐ రి భరమిటో అవధి ముగిదనంకర బెత్ తింగళగి 50 రూగళ దండ ವಿಧಿಸುತ್ತಿದ್ದೀರಿ ಇದನ್ನು ಕೈ ಬಿಡಬೇಕು.
ಕೈ ಬಿಡಬೇಕು. 5) ಎಫ್.ಸಿ ಮುಗಿದ ಬಳಿಕ ಪ್ರತಿ ತಿಂಗಳಿಗೆ 40 ರೂ ಸಿ.ಎಫ್. ದಂಡ ತೆಗೆದುಕೊಳ್ಳುತ್ತಿದ್ದೀರಿ ಇದನ್ನುಧಾರವಾಡ ಪ್ರಾದೇಶಿಕ ಕಛೇರಿಯ ಮುಂಭಾಗದಲ್ಲಿ ಕೌಂಟರ್ ಓಪನ್ ಮಾಡಿದ್ದು ಮಳೆಗಾಲದಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುವುದಿಲ್ಲ. ಕಾರಣ ಏನೆಂದರೆ ಕೌಂಟರ್‌ಗೆ ಮೇಲ್ಟಾವಣಿ ಇರುವುದಿಲ್ಲ. ಅದನ್ನು ಸರಿ ಮಾಡಬೇಕು.
7) ಎಫ್.ಸಿ ಮಾಡುವ ಗೌಂಡನಲ್ಲಿ ಸಾರ್ವಜನಿಕ ಕುಡಿಯುವ ನೀರು, ಶೌಚಾಲಯ, ಈ ಕೂಡಲೇ ಮೂಲಭೂತ ಸೌಕರ್ಯ ಒದಗಿಸಬೇಕು.
8) ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಛೇರಿಯ ಮುಂಭಾಗದಲ್ಲಿ ಮೂಲಭೂತ ಸೌಕರ್ಯ (ಬಸ್ ಸೌಕರ್ಯ) ಇರುವುದಿಲ್ಲ. ಕೆ.ಎಮ್.ಸಿ ಯಿಂದ ಗಟ್ಟೂರ ಬೈಪಾಸ್ ವರೆಗೆ ಇದ್ದು ಈ ಬಸ್‌ನ್ನು ಪ್ರಾದೇಶಿಕ ಸಾರಿಗೆ ಕಛೇರಿಯ ವರೆಗೆ ಬಿಡಬೇಕು.
9) ಹುಬ್ಬಳ್ಳಿ -ಧಾರವಾಡ ಪ್ರಾದೇಶಿಕ ಕಛೇರಿಯಲ್ಲಿ ಕ್ಯಾಂಟೀನ್ ವ್ಯವಸ್ಥೆ ಇರುವುದಿಲ್ಲ. ಈ ಕೂಡಲೇ ವ್ಯವಸ್ಥೆಯನ್ನು ಮಾಡಬೇಕು.
10) ಅವಲಿ ನಗರದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಚಾಲನಾ ಪತ್ರ ಸರ್ಕಾರಿ ಫೀನಲ್ಲಿ ನೀಡಬೇಕು. 11) ಜಿಲ್ಲಾ ತಾಲೂಕಿನಲ್ಲಿರುವಂತ ಆಟೋ ರಿಕ್ಷಾಗಳು ಅವಳಿ ನಗರದಲ್ಲಿ ಹೆಚ್ಚು ಓಡಾಟವುದು. ಆಟೋ ರಿಕ್ಷಾಗಳನ್ನು ಆಯಾ ತಾಲೂಕಿನ ಪರಮೀಟ್‌ನ್ನು ನೀಡಿದ್ದು ಈ ಆಟೋಗಳನ್ನು ತಪಾಸನೆ ಮಾಡಿ ಆ ತಾಲೂಕುಗಳಿಗೆ ಕಳುಹಿಸಬೇಕು.ಈ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಅರ್ಪಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ
ಶ್ರೀ ಶೇಖರಯ್ಯ ಮಠಪತಿ ರಾಜ್ಯಾಧ್ಯಕ್ಷರು
ಶ್ರೀ ಜೀವನ ಹುತ್ತುರಿ ಪ್ರಧಾನ ಕಾರ್ಯದರ್ಶಿ
ಶ್ರೀ ಮುರಳಿ ಇಂಗಳ್ಳಿ ಕಾರ್ಯದರ್ಶಿ, ಹುಬ್ಬಳ್ಳಿ
ಶ್ರೀ ಪ್ರಕಾಶ ಗಡಾದ ಉಪಾಧ್ಯಕ್ಷರು, ಧಾರವಾಡ
ಶ್ರೀ ಲಕ್ಷ್ಮಣ ಜಮನಾಳ ಸಹಕಾರ್ಯದರ್ಶಿ
ಶ್ರೀ ದಾವಲಸಾಬ ಕುರಹಟ್ಟಿ
ಗೌರವಾಧ್ಯಕ್ಷರು ಶ್ರೀ ರಾಜೇಶ ಬಿಜವಾಡ
ಶ್ರೀ ಸುರೇಶ ರಾಠೋಡ ಮುಂತಾದ ಅನೇಕ ಮುಖಂಡರು ಉಪಸ್ಥಿತರಿದ್ದರು.
.

