Homeಸಾರ್ವಜನಿಕ ಧ್ವನಿಬಿಸಿಊಟ ತಯಾರಿಕರ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ

ಬಿಸಿಊಟ ತಯಾರಿಕರ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ

ದಾವಣಗೆರೆ – ಕಳೆದ ಮೂರು ತಿಂಗಳ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಬಿಸಿಊಟ ತಯಾರಕರು ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ ಸಂಯೋಜಿತ ಬಿಸಿಊಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ಕರೆ ಮೇರೆಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೇರಿದ್ದ ಬಿಸಿಊಟ ತಯಾರಕರನ್ನುರದ್ದೇಶಿಸಿ ಮಾತನಾಡಿದ ಬಿಸಿಊಟ ತಯಾರಕರ ಫಡರೇಶನ್ ನ ರಾಜ್ಯ ಅಧ್ಯಕ್ಷರಾದ ಕಾಂ ಆವರಗೆರೆ ಚಂದ್ರು ಮಾತನಾಡಿ ರಾಜ್ಯಾದ್ಯಂತ ಬಿಸಿಊಟ ತಯಾರಕರನ್ನು ಸರ್ಕಾರ ಕಡೆಗಣಿಸಿದ್ದು, ಬಿಸಿಊಟ ತಯಾರಕರಿಗೆ ಮೂರು ತಿಂಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಬಿಸಿಊಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು, ಬಿಸಿಊಟ ತಯಾರಕರನ್ನು ಕಾರ್ಮಿಕರೆಂದು ಘೋಷಿಸಬೇಕು, ಮೊಟ್ಟೆ ಸುಲಿಯುವ ಭತ್ಯೆಯನ್ನು ಪ್ರತಿ ಮೊಟ್ಟೆಗೆ ಒಂದು ರೂಪಾಯಿಗೆ ಏರಿಸಬೇಕು ನಿವೃತ್ತಿಯಾಗುವ ಬಿಸಿಊಟ ತಯಾರಕರಿಗೆ ಇಡುಗಂಟು ಹಣವನ್ನು 40,000 ಕ್ಕೆ ಬದಲಾಗಿ ಎರಡು ಲಕ್ಷ ರೂಪಾಯಿಗಳಿಗೆ ಏರಿಸಬೇಕು ಮತ್ತಿತರೆ ಸೌಲತ್ತುಗಳನ್ನು ಜಾರಿಗೆ ತರಬೇಕು, ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳಲು ಶಿಕ್ಷಣ ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಸಂಘಟನೆ ಪದಾಧಿಕಾರಿಗಳ ಜೊತೆ ಕೂಡಲೇ ಸಭೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಂಘಟನೆಯ ಮುಖಂಡರುಗಳಾದ ಭಾರತಿ, ಪದ್ಮಾ, ಕರೂರ್ ಮಂಜುಳಾ, ಸುವರ್ಣಮ್ಮ, ವಿನೋದಮ್ಮ, ರಮೇಶ್ ಸಿ ದಾಸರ್,ಎ ತಿಪ್ಪೇಶ್ ಮಾತನಾಡಿದರು.
ಇದಕ್ಕೂ ಮೊದಲು ಮುಖ್ಯರಸ್ತೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕಚೇರಿಯ ಅಧಿಕಾರಿಗಳಾದ ಪ್ರಭಾಕರ ಗೌಡ್ರು ರವರಿಗೆ ಮನವಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments