Homeಪ್ರವಾಸಶಾಸಕ ಸಮರ್ಥ ಶಾಮನೂರ ಕಾರು ಅಪಘಾತ.ಬಳ್ಳಾರಿಯ ಸಂದೀಪ್‌ (47) ತಲೆಗೆ ಗಂಭೀರ ಗಾಯ

ಶಾಸಕ ಸಮರ್ಥ ಶಾಮನೂರ ಕಾರು ಅಪಘಾತ.ಬಳ್ಳಾರಿಯ ಸಂದೀಪ್‌ (47) ತಲೆಗೆ ಗಂಭೀರ ಗಾಯ

ಚಿತ್ರದುರ್ಗ:ಹಿರಿಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಸೋಮವಾರ ದಾವಣಗೆರೆ ಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಶಾಸಕ ಸಮರ್ಥ್‌ ಅಪಾಯದಿಂದ ಪಾರಾಗಿದ್ದಾರೆ.

ಮುಂದೆ ಹೋಗುತ್ತಿದ್ದ ಕಾರನ್ನು ಹಿಂದಿಕ್ಕಲು ಹೋದಾಗ ಕಸ್ತೂರಿ ರಂಗಪ್ಪನಹಳ್ಳಿ ಗೇಟ್ ಸಮೀಪ ಅಪಘಾತ ನಡೆದಿದೆ. ಮುಂದೆ ಹೋಗುತ್ತಿದ್ದ ಆ ಕಾರಿಗೆ ಡಿಕ್ಕಿಯಾಗಿದೆ.

ಮುಂದಿನ ಕಾರು ಪಲ್ಟಿಯಾಗಿದ್ದು ಕಾರ್‌ನಲ್ಲಿದ್ದ ಬಳ್ಳಾರಿಯ ಸಂದೀಪ್‌ (47) ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಮರ್ಥ್‌ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ನಾಲ್ವರು ಇದ್ದರು, ಯಾರಿಗೂ ತೊಂದರೆಯಾಗಿಲ್ಲ. ಎಂದು ಮಾಹಿತಿ ಇದೆ.ಶಾಸಕರನ್ನು ಇನ್ನೊಂದು ಕಾರ್‌ನಲ್ಲಿ ದಾವಣಗೆರೆಗೆ ಕಳುಹಿಸಲಾಯಿತು. ಈ ಸಂಬಂಧ ಹಿರಿಯೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments