ಗದಗ : ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಹಾಗೂ ಗುರುವಿನ ಪಾತ್ರ ಮಹತ್ತರವಾದದ್ದು ಗದಗ ಮುಕ್ಕಣ್ಣೆಶ್ವರ ಮಠದ ಶಂಕರಾ ನಂದ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ
ಗಾನ ಗಂಧರ್ವ ಕಲಾ ಟ್ರಸ್ಟ್ ನಾದಶ್ರೀ ಸಂಗೀತ ಪಾಠಶಾಲೆ ಆವರಣದಲ್ಲಿ ಆಚರಿಸಿದ ಪರಮ ಪೂಜ್ಯ ಲಿಂಗಕೈ ಪಂಡಿತ್ ಪುಟ್ಟರಾಜ ಗವಾಯಿಗಳವರ 16ನೇ ಪುಣ್ಯ ಸ್ಮರಣೋತ್ಸವ ನಾದಶ್ರೀ ಸಂಗೀತ ಪಾಠಶಾಲೆ ಮೂರನೇ ವಾರ್ಷಿಕೋತ್ಸವ ಹಾಗೂ ಪುಟ್ಟರಾಜ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಪೂಜ್ಯ ಪುಟ್ಟರಾಜ ಗವಾಯಿಗಳು ನಾಡಿಗೆ ಅನೇಕ ಕಲಾವಿದರನ್ನು ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಬಸವರಾಜ್ ಬಳ್ಳಾರಿ ಯವರು ಮಕ್ಕಳಲ್ಲಿ ಸದಾಭಿರುಚಿ ಬೆಳೆಯಲು ಕಾರಣವಾಗುವ ಸಂಗೀತ ಶಿಕ್ಷಣವನ್ನು ನೀಡುತ್ತಿರುವ ಗಾನಗಂಧರ್ವ ಕಲಾ ಟ್ರಸ್ಟ್ ಕಾರ್ಯ ಶ್ಲಾಘನಿಯ ಎಂದು ಹೇಳಿದರು.
ಶ್ರೀ ಗುರು ಪುಟ್ಟರಾಜ ಪುರಸ್ಕಾರ ಶಿಕ್ಷಣ ಗೌರವ ಪ್ರಶಸ್ತಿಗೆ ಭಾಜನರಾದ ಜಯದೇವಿ ಏಕವಲ್ಲೂರ್ ತಮ್ಮ ನುಡಿ ನಮನದಲ್ಲಿ ಮಕ್ಕಳ ಸಕಾರಾತ್ಮಕ ವ್ಯಕ್ತಿತ್ವಕ್ಕೆ ಪೋಷಕರ ನಡವಳಿಕೆ ಅತ್ಯಂತ ಪ್ರಭಾವಶಾಲಿಯಾಗಿದ್ದು ಪೋಷಕರು ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಮಕ್ಕಳ ಜೊತೆ ಬೆರೆಯಬೇಕು ಮಕ್ಕಳ ಎದುರಲ್ಲೇ ಜಗಳವಾಡಬಾರದು ಶಿಕ್ಷಕರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಮೂತ್ರ ರೋಗ ತಜ್ಞ ಡಾ ಪ್ರವೀಣ ಡಂಬಳ ರವರು ದೇಹ ದಾನಂ ಮಹತ್ವವನ್ನು ತಿಳಿಸಿದರು.
ಭಾರತೀಯ ಕೌಶಲ್ಯ ಕಲೆ ಮೆಚ್ಚಿ ಮಲೇಷಿಯಾದ ಉಗಾಂಡ ವಿಶ್ವವಿದ್ಯಾಲಯ ಡಾ” ಪದವಿ ಪೂರ್ವ ಪ್ರಸಾದ ಸೇವೆಯ ಸಿದ್ದರಾಮಯ್ಯ ಬಸವರಾಜ್ ಅಂಗಡಿ ಟ್ರಸ್ಟಿಗೆ ಹಾರ್ಮೋನಿಯಂ ಕಾಣಿಕೆ ಗಂಗಣ್ಣ ಬಿ ಮಲ್ಲಾಡದವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭಾಗ್ಯ ಶೇಖರಯ್ಯ ವಿಭೂತಿಯವರು ಮನಮೋಹಕ ಬಾನ್ಸೂರೀ
ವಾದನ, ಡಾ.ಹನುಮಂತ ಬಿ ಹೂಗಾರ್ ತಬಲಾ ಸಾತ್ ಹಾಗೂ ನಾದಶ್ರೀ ಸಂಗೀತ ಪಾಠಶಾಲೆಯ ಮಕ್ಕಳ ವಚನ ಗಾಯನವನ್ನು ಅಕ್ಷಯ್ ಹೂಗಾರ್ ತಬಲ ಸಾತ್ ಮತ್ತು ಭರತನಾಟ್ಯ ಮೆಚ್ಚುಗೆ ಪಡೆದವು.
ಸಿದ್ದಲಿಂಗಯ್ಯ ಶಾಸ್ತ್ರಿ ಗಡ್ಡದ ಮಠ ಸ್ವಾಗತಿಸಿದರು. ಶಿವಯೋಗಿ ಗಡ್ಡದಮಠ ನಿರೂಪಿಸಿದರರು. ಶಿವಬಸಯ್ಯ ಗಡ್ಡದಮಠ ವಂದಿಸಿದರು.
(ವರದಿ ಮಹೇಶ ಮೇಟಿ)

