ವಿಜಯಪುರ:ಶ್ರೀ ಬಸವೇಶ್ವರ ಶಾಲೆಯಲ್ಲಿ 80 ನೇಯ ಸ್ವಾತಂತ್ರ್ಯ ದಿನಾಚರಣೆ ದಿನಾಂಕ 15-08-2026 ರಂದು ಚಡಚಣ ತಾಲೂಕಿನ ಬರಡೋಲ ಗ್ರಾಮದ ತೋಟದ ಶಾಲೆಯಾದ ಶ್ರೀ ಬಸವೇಶ್ವರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ದಾ, ಬಿ, ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಮತ್ತು ದ್ವಜಾರೋಹಣ ನೆರವೇರಿಸುವ ಮುಖಾಂತರ ಕಾರ್ಯಕ್ರಮ ಪ್ರಾರಂಭಿಸಲಾಯಿತು ಈ ಸಂದರ್ಭಲ್ಲಿ ದಿವ್ಯ ಸಾನಿಧ್ಯವನ್ನು ಶಾಂತಯ್ಯ ಮಠಪತಿರವರು ಹಾಗೂ ಶಾಲೆಯ ಅಧ್ಯಕ್ಷರಾದ ಅರವಿಂದ ಎಸ್ ಬಿರಾದಾರವರು ಮುಖ್ಯ ಅಥಿತಿಗಳಾಗಿ ಬಸವರಾಜ ನಂ ಬಾಗೇವಾಡಿರವರು ಸಾ ಉತ್ನಾಳ, ಶಾಲೆಯ ನಿರ್ದೇಶಕರಾದ ಸಿದ್ಧರಾಮ ಎಸ್ ಬಿರಾದಾರವರು, ಹಾಗೂ ರವಿ ಅರ್ಜುಣಗಿರವರು,ಧನಸಿಂಗ ಪವಾರರವರು, ಲಕ್ಷ್ಮೀಬಾಯಿ ಕುಂಬಾರವರು ಮಲ್ಲಿಕಾರ್ಜುನ ನಂದರಗಿರವರು ಮುಖ್ಯ ಗುರುಗಳಾದ ಎಸ್ ಎಸ್ ಆಲಗುರರವರು ಹಾಗೂ ಶಾಲೆಯ ಯಲ್ಲ ಸಿಬ್ಬಂದಿವರ್ಗದವರು ,ಪಾಲಕರು ಮಕ್ಕಳೊಂದಿಗೆ ಭಾಗವಹಿಸಿದ್ದರು , ಶಾಲೆಯ ಮಕ್ಕಳು ದೇಶ ಭಕ್ತಿಗೀತೆ, ನೃತ್ಯ ಹಾಡು ಸ್ವಾತಂತ್ರ್ಯ ಹೋರಾಟಗಾರರ ವೇಷ ಬೂಷಣ, ನಾಟಕ ಪ್ರದರ್ಶನ ಮಾಡಿದರು ಎಂದು ಕಾರ್ಯಕ್ರಮ ನಿರೂಪರಾದ ಕುಮಾರಿ,ವಿಜಯಲಕ್ಷ್ಮೀ ಎ ಬಿರಾದಾರವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ

