ದಾವಣಗೆರೆ:ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿಯ ಕೊಮಾರನ ಹಳ್ಳಿಯ ಬೀರೇಶ್ವರ ದೇವರಿಗೆವ ಇಂದು ಗುರುವಾರ ವಿಜಯದಶಮಿ ಹಬ್ಬದ ಅಂಗವಾಗಿ ಪ್ರತಿವರ್ಷದಂತೆ ದೊಡ್ಡ ಎಡೆ ಹಾಗೂ ಮರಿಬನ್ನಿ ಪೂಜಾ ಕಾರ್ಯಕ್ರಮದಲ್ಲಿ ಇನ್ ಸೈಟ್ಸ್ ಐ.ಎ.ಎಸ್.ಸಂಸ್ಥೆಯ ನೀರ್ದೆಶಕರೂ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ಜಿ.ಬಿ.ಇವರು ಪಾಲ್ಗೊಂಡು ದೇವರ ದರ್ಶನ ಪಡೆದು ಗ್ರಾಮೀಣ ಪ್ರದೇಶಗಳಲ್ಲಿ ಆಚಾರ, ವಿಚಾರ,ದೈವ ಭಕ್ತಿ,ಸಂಪ್ರದಾಯಗಳು ಉಳಿದಿವೆ

.ನಮ್ಮಮುಂದಿನ ಪೀಳಿಗೆಯವರಿಗೆ ನಮ್ಮ ಸಂಪ್ರದಾಯಗಳು ಉಳಿದಿವೆ ಎಂದರು.ಇದೇ ರೀತಿಯಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದಾಗ ಸಮಾಜದಲ್ಲಿ ಸಮಾನತೆಯ ಸಮಾಜ ಕಾಣಲು ಸಾದ್ಯವಿದೆ. ಶಿಕ್ಷಣದಿಂದಲೇ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು. ಈ ಸಂಧರ್ಭದಲ್ಲಿ .ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಬನ್ನಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ ಸೈಟ್ಸ್ ಐ.ಎ.ಎಸ್ ಸಂಸ್ಥೆಯ ವ್ಯವಸ್ಥಾಪಕರಾದ ಹೆಚ್.ಎಸ್. ಶರತ್ ಕುಮಾರ್, ಬೀರೇಶ್ವರ ಟ್ರಸ್ಟ್ ಅಧ್ಯಕ್ಷರಾದ ನಿಂಗರಾಜ್.ಖಜಾಂಚಿ..ಮಂಜುನಾಥ.ಎಸ್.ಎಂ.ಹನುಮಂತಪ್ಪ. ಗದಿಗೇಶ್.ಹಾಲೇಶಪ್ಪ.ಹರಿಹರ ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ಹಾಲೇಶ್.ಪಿ., ಮಲೇಬೆನ್ನೂರು ದಿ.ಸಿದ್ದಬಸಪ್ಪ ಅವರ ಪುತ್ರ ಕೆ.ಬಿ.ಗಂಗಾಧರ್ . ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು. ಯುವಕರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.