Saturday, December 21, 2024
Homeಸಾರ್ವಜನಿಕ ಧ್ವನಿಹೊನಗನಹಳ್ಳಿ-ಸವನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಲಿವರ್ ಡ್ಯಾಮೇಜ್ ನಿಂದ ಸತ್ತವರ ಸಂಖ್ಯೆ ಎಷ್ಟು...

ಹೊನಗನಹಳ್ಳಿ-ಸವನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ಲಿವರ್ ಡ್ಯಾಮೇಜ್ ನಿಂದ ಸತ್ತವರ ಸಂಖ್ಯೆ ಎಷ್ಟು ಮತ್ತು ಅದಕ್ಕೆ ಕಾರಣಗಳೇನು?ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಸಾರ್ವಜನಿಕರ ಒತ್ತಾಯ.

ವಿಜಯಪುರ: ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಬಬಲೇಶ್ವರ ವಿಧಾನಸಭೆವ್ಯಾಪ್ತಿಯ ಹೊನಗನಹಳ್ಳಿ ಮತ್ತು ಸವನಹಳ್ಳಿಗ್ರಾಮಗಳಲ್ಲಿ ಸುಮಾರು ಎರಡು ಮೂರುವರ್ಷಗಳಿಂದ ಗ್ರಾಮದ ಬಹುತೇಕ ಯುವಕರೂ ಸೇರಿತೆ ಬಹಳಷ್ಟು ಜನರ ಸಾವುಗಳು ಸಂಬವಿಸಿದಾಗಲೆಲ್ಲಾ ಏನಾಗಿ ಸತ್ತ ಎಂದು ಕೇಳಿದರೆ ಆ ಗ್ರಾಮದ ಜನರಿಂದ ಬರುವ ಉತ್ತರ ಒಂದೇ.ಅದೇನ್ರಿ ಕುಡಿದು ಕುಡಿದು ಲಿವರ್ ಡ್ಯಾಮೇಜ್ ಆಗಿಸತ್ತ ಎಂಬ ಉತ್ತರ ತಟ್ಟನೆ ಸಿಗುತ್ತದೆ.ಇದು ಸರಿ ಎಷ್ಟು,ತಪ್ಪು ಎಷ್ಟು ಎಂಬುದು ಗೊತ್ತಿಲ್ಲಾ ಆದರೆ ಆ ಗ್ರಾಮಗಳ ಬಹುತೇಕ ಜನರು ಲಿವರ್ ಡ್ಯಾಮೇಜಿನಿಂದ ಸತ್ತರು ಎಂದು ಹೇಳಲು ಬಹುದೊಡ್ಡ ಕಾರಣ ಅಂದರೆ ಈ ಗ್ರಾಮಗಳಲ್ಲಿ ಕುಡುಕರ ಸಂಖ್ಯೆ ಮಿತಿಮೀರಿದೆ ಎಂದೇ ಅರ್ಥ ಕಲ್ಪಿಸಿಕೊಳ್ಳಬೇಕಾದ ವಾತಾವರಣ ಇದೆ.ಒಟ್ಟಾರೆ ಈ ಗ್ರಾಮಗಳಲ್ಲಿ ಓಸಿ(ಮಟಗಾ)ಕಳ್ಳಬಟ್ಟಿ ವ್ಯವಹಾರ ಜೂಜಾಟಗಳು ಎಗ್ಗಿಲ್ಲದೇ ಸಾರಾಗವಾಗಿ ನಡೆಯುತ್ತವೆ ಎಂದು ಮೌಖಿಕವಾಗಿ ಸಾರ್ವಜನಿಕರೆಲ್ಲರೂ ಮಾತಾಡ್ತಾರೆ.ಆದರೆ ನೇರವಾಗಿ ಹೇಳಲು ಮತ್ತು ಲಿಖಿತ ದೂರುನೀಡಲು ಇಲ್ಲಿಯ ಯಾರೊಬ್ಬರಿಗೂ ಮುಂದೆ ಬರಲು ಧೈರ್ಯವಿಲ್ಲಾ.ಯಾಕೆ ನೀವು ದೂರು ಕೊಡಲ್ಲವೆಂದು ಕೇಳಿದರೆ ಸರ್ ಈ ಅ ವ್ಯವಹಾರಗಳೆಲ್ಲವೂ ಪರೋಕ್ಷವಾಗಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುತ್ತವೆ.ನಾವುಯಾರಾದರೂ ದೂರುಕೊಟ್ಟರೆ ಅದರಿಂದ ಸಮಸ್ಯೆ ಪರಿಹಾರವಂತೂ ಆಗುವುದಿಲ್ಲಾ.ಅದರದ ನಮ್ಮ ಸಂಸಾರ ಬದುಕು ಬೀದಿಗೆ ಬರುತ್ತದೆ.ಅಧಿಕಾರಿಗಳು,ಜನಪ್ರತಿನಿಧಿಗಳು ಸಾಕಿರುವ ಎಂಜಲು ನಾಯಿಗಳು ನಮಗೆ ಹಾದಿಬೀದಿಯಲ್ಲಿ ತಿರುಗಾಡದಂತೆ ಓಡಾದಿಸಿ ಕಚ್ಚುತ್ತವೆ ಅವುಗಳಿಂದ ನಮ್ಮ ಕುಟುಂಬ ಸಮಸ್ಯೆ ಎದುರಿಸಬೇಕಾಗುತ್ತದೆಯೆ ಹೊರತು ನಮಗೆ ರಕ್ಷಣೆಯು ಕನಸಿನಮಾತು ಅದಕ್ಕಾಗಿ ಊರು ಉಸಾಬರಿ ನಮಗೆಯಾಕೆಂದು ಕಣ್ಣಿದ್ದೂ ಕುರುಡರಾಗಿ ಬಾಯಿ ಇದ್ದೂ ಮೂಕರಾಗಿ,ಕಿವಿ ಇದ್ದರೂ ಕಿವುಡರಾಗಿ ಇರುತ್ತೇವೆ ಸರ್ ಎಂದು ಮನನೊಂದು ಹೇಳುತ್ತಾರೆ.
ಒಟ್ಟಾರೆ ಈ ಗ್ರಾಮಗಳಲ್ಲಿ ರಾಜಕೀಯಪಕ್ಷಗಳ ಚೇಲಾಗಳ ಅಟ್ಟಹಾಸ ಮಿತಿಮೀರಿದೆ.ಅಧಿಕಾರಿಗಳ ಭ್ರಷ್ಟಾಚಾರ ಗಗಣತಲುಪಿದೆ.ಜನಪರ,ಅಭಿವೃದ್ಧಿ ಪರ,ಪ್ರಗತಿಪರ ದ್ವನಿ ಎತ್ತಿದರೆ ಎಲ್ಲಾ ರಾಜಕೀಯ ಚೇಲಾಗಳು ಒಂದಾಗಿ ನಾವು ನಮ್ಮ ಮಕ್ಕಳು,ಬಂಧುಬಳಗ ಜೀವನ ನಡೆಸುವುದೇ ಬಹಳ ಕಷ್ಟವಾಗುತ್ತದೆಂದು ಭಯದ ವಾತಾವರಣದಲ್ಲಿ ಬದುಕು ಸಾಗಿಸುತ್ತೇವೆಂದು ಹೇಳುತ್ತಾರೆ.ಈ ಗ್ರಾಮಗಳಲ್ಲಿ ಒಂದೇ ಒಂದು ಲಿಕ್ಕರ್ ಶಾಪ್ ಇಲ್ಲಾ.ಆದರೂ ಹಗಲು ರಾತ್ರಿಯನ್ನದೆ ಗ್ರಾಮದ ಬಹುತೇಕರು ನಶೆಯಲ್ಲೇ ಓಲಾಡತ್ತಿರುವುದು ಸೋಜಿಗದ ವಿಷಯವಾಗಿದೆ. ಆದ್ದರಿಂದ ಈ ಗ್ರಾಮಕ್ಕೆ ಸಂಬಂದಿಸಿದ ಅಧಿಕಾರಿಗಳು,ಜನಪ್ರತಿನಿದಿಗಳು ಕೂಡಲೇ ಇದನ್ನು ಪರಿಗಣಿಸಿ ಈ ಗ್ರಾಮಗಳಲ್ಲಿ ನಡೆಯುತ್ತದೆಯನ್ನಲಾಗುವ ಓ.ಸಿ.ಸರಾಯಿ ಮಾರಾಟ,ಜೂಜಾಟ,ಕಿಡಗೇಡಿಗಳ ಅಟ್ಟಹಾಸಕ್ಕೆ ತಡೆ ನೀಡಲು ಸೂಕ್ತ ಮತ್ತು ಉಗ್ರ ಕ್ರಮ ಕೈಗೊಳ್ಳಲು ನೊಂದ ಅಸಹಾಯಕ ಗ್ರಾಮದ ಜನಪರಕಾಳಜಿಯುಳ್ಳ ಸಾರ್ವಜನಿಕರ ಒತ್ತಾಶೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments