ದಾವಣಗೆರೆ : ಕರ್ನಾಟಕ ಕೇರಂ ಸಂಸ್ಥೆಯಿಂದ ಅನುಮೋದಿಸಲ್ಪಟ್ಟಿರುವ ದಾವಣಗೆರೆ ಜಿಲ್ಲಾ ಕೇರಂ ಸಂಸ್ಥೆ (ರಿ). ದಾವಣಗೆರೆ ವತಿಯಿಂದ ದಿ।। ಟಿ.ಎಸ್. ಶಿವಕುಮಾರ್ ಇವರ ಸ್ಮರಣಾರ್ಥವಾಗಿ ಕನ್ನಡ ರಣಧೀರ ಪಡೆ ಯುವಕರ ಸಂಘ ಹಾಗೂ ಯಂಗ್ ಚಾಲೆಂಜರ್ಸ್ ಕೇರಂ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಅಂತರ್ ಜಿಲ್ಲಾ ಮಟ್ಟದ ಕೇರಂ ಪಂದ್ಯಾವಳಿ-2025 ನ್ನು ದಿನಾಂಕ: 10-10-2025 ರಿಂದ 12-10-2025 ರ ವರೆಗೆ ಶ್ರೀ ಗುರುಭವನ, ಎ.ವಿ.ಕೆ. ಕಾಲೇಜು ರಸ್ತೆ, ದಾವಣಗೆರೆ ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕೇರಂ ಸಂಸ್ಥೆಯ ಅಧ್ಯಕ್ಷರು ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸಲು ದಿನಾಂಕ: 08-10-2025 ಕೊನೆಯ ದಿನವಾಗಿದ್ದು, ಪ್ರವೇಶ ಶುಲ್ಕವು ಸಿಂಗಲ್ಸ್ ಪಂದ್ಯಾವಳಿಗೆ ರೂ.500/-. ಡಬಲ್ಸ್ ಪಂದ್ಯಾವಳಿಗೆ ರೂ.600/- ಹಾಗೂ ವೆಟರನ್ಸ್ (ಸೀನಿಯರ್) ಪಂದ್ಯಾವಳಿಗೆ ರೂ.300/-ಗಳನ್ನು ನಿಗದಿಪಡಿಸಲಾಗಿದೆ.
ಸಿಂಗಲ್ಸ್ ಪ್ರಥಮ ಬಹುಮಾನ ರೂ.10.000/- ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.6.000/-ಮತ್ತು ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ರೂ.3,000/- ಆಕರ್ಷ ಟ್ರೋಫಿ, ಡಬಲ್ಸ್ ಪ್ರಥಮ ಬಹುಮಾನ ರೂ.15.000/- ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.8.000/- ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ರೂ.4.000/- ಆಕರ್ಷಕ ಟ್ರೋಫಿ ಹಾಗೂ ಸೀನಿಯರ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ನೀಡಲಾಗುವುದು.
ದಿನಾಂಕ: 12-10-2025 ರಂದು ಮಹಿಳೆಯರ ಸಿಂಗಲ್ಸ್ ಪಂದ್ಯಾವಳಿಗಳು ನಡೆಯಲಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಹೊರ ಜಿಲ್ಲೆಯ ಆಟಗಾರರಿಗೆ ವಸತಿ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಮೇಶ್-9448256094. ಕೇರಂ ಗಣೇಶ್-9448233389, ಗೋಪಿ-8123558673, ಸುರೇಶ್-9686584163. ಶ್ರೀನಿವಾಸ್ (ಅಗ್ನಿ)-9902550188. ಮಾರುತಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕೇರಂ ಗಣೇಶ್ ಅವರು ತಿಳಿಸಿದ್ದಾರೆ.

