Tuesday, February 3, 2026
Homeಸಾರ್ವಜನಿಕ ಧ್ವನಿವಿಜಯಪುರ ಜಿಲ್ಲೆಗೆ ಕಲ್ಯಾಣ ಕರ್ನಾಟಕ ಮೀಸಲಾತಿ ಅನ್ಯಾಯವನ್ನು ಸರಿಪಡಿಸಲು"371ಜೆ ಮೀಸಲಾತಿ" ಚಳಿಗಾಲ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ

ವಿಜಯಪುರ ಜಿಲ್ಲೆಗೆ ಕಲ್ಯಾಣ ಕರ್ನಾಟಕ ಮೀಸಲಾತಿ ಅನ್ಯಾಯವನ್ನು ಸರಿಪಡಿಸಲು”371ಜೆ ಮೀಸಲಾತಿ” ಚಳಿಗಾಲ ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ

ವಿಜಯಪುರ:

ವಿಜಯಪುರ ಜಿಲ್ಲೆಗೆ ಕಲ್ಯಾಣ ಕರ್ನಾಟಕ ಮೀಸಲಾತಿ ವಿಷಯದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಜಿಲ್ಲೆಯಲ್ಲಿ ದೊಡ್ಡ ಹೋರಾಟಗಳು ನಡೆಯುತ್ತಿವೆ.

ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟ ರೈತ ಭಾರತ ಪಕ್ಷ, ಕರ್ನಾಟಕ ರಕ್ಷಣಾ ಸ್ವಾಭಿಮಾನಿ ಸೈನ್ಯ, ಜಯ ಕರ್ನಾಟಕ, ದಲಿತ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿವೆ.

ಕಳೆದ ಅಧಿವೇಶನದಲ್ಲಿ ಇಂಡಿ ಶಾಸಕ ಯಶವಂತರಾಯ ಪಾಟೀಲರು ಚರ್ಚೆ ಮಾಡಿ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಮುಖ್ಯವಾಗಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರುಗಳಾದ
ಎಂ ಬಿ ಪಾಟೀಲ ಮತ್ತು ಶಿವಾನಂದ ಪಾಟೀಲರು ಜಿಲ್ಲೆಗೆ 371 ಜೆ ಮೀಸಲಾತಿ ಒದಗಿಸಲು ಮುಂದಾಗಬೇಕು ಆ ಮೂಲಕ ಯುವ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

ವಿಜಯಪುರ ನಿಜಾಮನ ಆಡಳಿತದ ಭಾಗವಾಗಿದೆ, ಅದಕ್ಕೆ ಅವರ ಆಡಳಿತದ ನಕಾಶೆ,ಐತಿಹಾಸಿಕ ದಾಖಲೆ ಸಾಕ್ಷಿಯಾಗಿವೆ. ಇಂದಿಗೂ ನಮ್ಮ ಸಾರಿಗೆ ವ್ಯವಸ್ಥೆ ಕಲ್ಯಾಣ ಕರ್ನಾಟಕ ನಿಗಮದಲ್ಲಿದೆ. ಕಲಬುರಗಿ ಉಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಯಾರು ಅದನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ತಾವು ವಿಜಯಪುರವನ್ನು ಉಲ್ಲೇಖಸಿದ್ದು ನೂರಕ್ಕೆ ನೂರು ಸತ್ಯವಿದೆ. ವಿಜಯಪುರವನ್ನು ಹೈದ್ರಾಬಾದ್ ಕರ್ನಾಟಕದ ಇತಿಹಾಸ ಅಪೂರ್ಣವಾಗುತ್ತದೆ.

ಹೈದ್ರಾಬಾದ್ ಪ್ರಾಂತದ ಭಾಷೆ ದಖನಿ ಉರ್ದು ಹುಟ್ಟಿದ್ದು ವಿಜಯಪುರದಲ್ಲೇ, ರಜಾಕಾರರ ದಾಳಿಗೆ ಘೋರ ದಾಳಿಗೆ ತುತ್ತಾಗಿದ್ದು ವಿಜಯಪುರ ಜಿಲ್ಲೆ.

ನಿಜಾಮ್ ನ ವಿರುದ್ಧ ಸ್ವಾತಂತ್ರ್ಯ ಚಳುವಳಿ ಸಂಘಟಿಸಿದ್ದು ಸ್ವಾತಂತ್ರ್ಯ ಯೋಧರಾದ ವಿಜಯಪುರ ಜಿಲ್ಲೆಯ ಸಿಂದಗಿಯ ಶ್ರೀ ಸ್ವಾಮಿ ರಮಾನಂದ ತೀರ್ಥರು. ಎಂಬುದು ಯಾರು ಮರೆಯಬಾರದು.ಅದಕ್ಕಾಗಿ ಅವರನ್ನು ಹೈದ್ರಾಬಾದ್ ವಿಮೋಚನಾ ಚಳುವಳಿಯ ಪಿತಾಮಹ ಎಂದು ಕರೆಯುತ್ತಾರೆ.

ಕಲಬುರಗಿ ವಿಭಾಗದ ಜನ ಈಗಾಗಲೇ ಸಾಕಷ್ಟು ಅನುಕೂಲ ಮತ್ತು ಸರಕಾರಿ ಸೌಲಭ್ಯ ಪಡೆದಿದ್ದಾರೆ ಅದರ ವಿಜಯಪುರ ಜಿಲ್ಲೆಯ ಜನರಿಗೆ ಯಾವುದೇ ತಕರಾರು ಇಲ್ಲ.

ಕಲಬುರಗಿ ವಿಭಾಗದ ಜಿಲ್ಲೆಗಳು ಅಭಿವೃದ್ಧಿ ಆದರೆ ಮೊದಲು ಸಂತೋಷ ಪಡುವವರೇ ವಿಜಯಪುರ ಜಿಲ್ಲೆಯ ಜನರು.

ಹೈದ್ರಾಬಾದ್ ಆಡಳಿತದಲ್ಲಿದ್ದ ವಿಜಯಪುರದ ಇತಿಹಾಸ ತಿರುಚಿ ಮಾತನಾಡುವುದನ್ನು ಮೊದಲು ಪ್ರತಿಯೊಬ್ಬರೂ ಬಿಡಬೇಕು.ಇದು ಇತಿಹಾಸಕ್ಕೆ ಮಾಡುವ ಅಪಚಾರವಾಗಿದೆ.
ಕಲ್ಯಾಣ ಚಾಲುಕ್ಯರ ಕಾಲದಿಂದ ಅಖಂಡ ವಿಜಯಪುರ ಜಿಲ್ಲೆ ಕಲ್ಯಾಣ ರಾಜ್ಯದ ಆಡಳಿತದಲ್ಲಿಯೇ ಇತ್ತು. ಅದು ಐತಿಹಾಸಿಕವಾಗಿ ಭಾವನಾತ್ಮಕವಾಗಿ, ಭಾಷೆ, ವೇಷ, ಜಾನಪದ ಹಿನ್ನಲೆ, ಆಹಾರ ಪದ್ಧತಿ, ಪ್ರಾಕೃತಿಕ ಸಂಬಂಧ, ಕೌಟುಂಬಿಕ ಸಂಬಂಧಗಳು, ಸಾಹಿತ್ಯ, ಸಂಸ್ಕೃತಿ, ಸ್ವಾತಂತ್ರ್ಯ ಚಳುವಳಿಯೊಂದಿಗೆ ಸುಧೀರ್ಘವಾಗಿ ಬೆಸೆದುಕೊಂಡಿದೆ.

ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದರಿಂದ ಇತಿಹಾಸ ಅಳೆಸಿ ಹಾಕಲು ಆಗುವುದಿಲ್ಲ.

ಇತಿಹಾಸ ಅಳೆಸಿ ಹಾಕುತ್ತೇವೆ ಎಂಬ ಭ್ರಮೆಯಲ್ಲಿ ಇರುವವರಿಗೆ ಬಳ್ಳಾರಿ -ವಿಜಯನಗರ ಬಗ್ಗೆ ಮಾತನಾಡುವ ಧೈರ್ಯ ಇದೆಯಾ? ಇದ್ದರೆ ಮಾತಾಡಿ ಹೈದ್ರಾಬಾದ್ ಕರ್ನಾಟಕದ ನಕಾಶೆ ಬದಲಾಗುತ್ತದೆ. ಆಗ ವಿಜಯಪುರ ಜಿಲ್ಲೆಗೆ ಒಳ್ಳೇದು ಆಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments