ಜಗಳೂರು:ಜಗಳೂರು ತಾಲೂಕಿನ ದೊಣ್ಣೆಹಳ್ಳಿಯಲ್ಲಿ ದಿನಾಂಕ:29-11-2025,ಶನಿವಾರ ಸಂಜೆ 6-00 ಗಂಟೆಗೆ ನಡೆಯಲಿದೆ. ಸಂಜೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 10-30 ರಿಂದ ಶ್ರೀ ಸರ್ಪಭೂಷಣ ಮಠದ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ಮಲ್ಲಿಕಾರ್ಜುನ ದೇವರು ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಮಠದ ಮುಂಭಾಗದಲ್ಲಿರುವ “ಬಿಲ್ವಪತ್ರೆ ವೃಕ್ಷ’ಕ್ಕೆ ಶರಣರ ದೀಕ್ಷೆ ಮಂಗಲ ಕಾರ್ಯಕ್ರಮವನ್ನು ದೊಣೆಹಳ್ಳಿಯ ಲಿಂಗೈಕ್ಯ ಶರಣ ಹಂಪಿ ಹನುಮಂತರೆಡ್ಡಿ, ಶರಣೆ ನಿಂಗಮ್ಮ ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗದವರು ನಡೆಸಿಕೊಡುವರು. ಹಾಗೆಯೇ ಶ್ರೀ ಮಠದ ಮುಂಭಾಗದಲ್ಲಿರುವ “ಶಮಿವೃಕ್ಷ-ಬನ್ನಿಮರಕ್ಕೆ ಮಾತೃ-ಶರಣ ದೀಕ್ಷೆ ಮಂಗಲ ಕಾರ್ಯಕ್ರಮವನ್ನು ಮಾಜಿ ಛೇಲ್ಡನ್ ಶ್ರೀ ಜಿ. ಬಸವರಾಜಪ್ಪ ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬ ವರ್ಗದವರು ನಡೆಸಿಕೊಡುವರು ಈ ಕಾರ್ಯಕ್ರಮಗಳಲ್ಲಿ ಸದ್ಭಕ್ಷರು ಭಾಗವಹಿಸುವರು.
ದಯವೇ ಧರ್ಮದ ಮೂಲವಯ್ಯಾ !! ದಯವಿಲ್ಲದ ಧರ್ಮ ಅದಾವುದಯ್ಯಾ !! ಸಕಲ ಜೀವಾತ್ಮರಿಗೆ ಒಳ್ಳೆಯದನ್ನೇ ಬಯಸುತ್ತಾ ಇವನಾರವ ಇವನಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವ ಎಂದು ಸರ್ವರನ್ನೂ ಅಪ್ಪಿಕೊಳ್ಳುವ, ಹಾಗೆಯೇ ಒಪ್ಪಿಕೊಳ್ಳುವ ಮೂಲಕವಾಗಿ ಸೋಹಂ ಎಂದೆನಿಸದೇ, ವಾಸೋಹಂ ಎಂದೆನಿಸಯ್ಯಾ ! ಎಂಬ ಜೀವಪರವಾದ ಮಹಾ ತತ್ವವನ್ನು ಸಾರಿದೆ… ಅದರಂತೆಯೇ ನಡೆಯುತ್ತಾ, ನಡೆ-ನುಡಿ ಸಿದ್ಧಾಂತವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಹನ್ನೆರಡನೇ ಶತಮಾನದಲ್ಲಿ ವಿಶ್ವಜ್ಯೋತಿಯಾಗಿ ಬೆಳಗಿದ ಕೂಡಲ ಸಂಗಮದ ಬಸವಾದಿ ಶರಣರ “ಮಹಾ ಬೆಳಗಿನ ಪ್ರಭೆ” ನಮ್ಮ ದೊಣೆಹಳ್ಳಿಯ ಮೇಲಿದೆ
ಹನ್ನೆರಡನೇ ಶತಮಾನದ ಬಸವಾದಿ ಶರಣ ಪರಂಪರೆಯ ಶೂನ್ಯಪೀಠ ಚಿತ್ರದುರ್ಗದ ಚಿನ್ಮೂಲಾದ್ರಿ ಶ್ರೀ ಮುರುಘರಾಜೇಂದ್ರ ಬೃಹನೃತ ಈ ಮುರುಘರಾಜೇಂದ್ರ ಬೃಹನ್ಮಠದ ಕರ್ತೃಗಳೆಂದರೆ, ಜಗದ್ಗುರು ಶ್ರೀ ಶ್ರೀ ತಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಯವರು || ನಮ್ಮದೇ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ನಿದ್ರೆಗೆ ಜಾರಿದ್ದ ಬಾಲಕನೋರ್ವನಿಗೆ ಸರ್ಪ ಸುತ್ತಿಕೊಂಡಿದ್ದ ಗಂಡಾಂತರವನ್ನು ಗಮನಿಸಿದ ಯತಿವರ್ಯ ಶ್ರೀಗಳು ತಮ್ಮ ದಿವ್ಯ ದೃಷ್ಟಿಯಿಂದ ಹಾವನ್ನು ಬಿಡಿಸಿ, ಬಾಲಕನನ್ನು ರಕ್ಷಿಸುತ್ತಾರೆ!! ಅಷ್ಟರ ವೇಳೆಗೆ ಬಾಲಕನ ತಂದೆ-ತಾಯಿಗಳು ಮಗನ ಬಳಿ ಬಂದಾಗ, ಶ್ರೀಗಳು ನಡೆದ ವಿಷಮ ಘಟನೆಯನ್ನು ದಂಪತಿಗಳಿಗೆ ತಿಳಿಸಿ… ಈ ಬಾಲಕ ಮುಂದೊಂದು ದಿನ “ನಾಡಿ ದೊರೆಯಾಗುತ್ತಾನೆ, ಇವನನ್ನು ಚೆನ್ನಾಗಿ ಕಾಪಾಡಿ ಬೆಳೆಸಿ” ಎಂದು ಹೇಳಿ ಆಶೀರ್ವದಿಸಿ ಮುನ್ನಡೆಯುತ್ತಾರೆ !!
ಶ್ರೀಗಳ ಕೃಪೆಯಿಂದಾಗಿ ಸರ್ಪಗಂಡಾಂತರದಿಂದ ಪಾರಾದ ಆ ಹುಡುಗ ಬೆಳೆದು ದೊಡ್ಡವನಾಗಿ ಮುಂದೊಂದು ದಿನ ಚಿತ್ರದುರ್ಗದ ಪಾಳೆಗಾರ ಪರಂಪರೆಯ ರಾಜವೀರ ಬಿಚ್ಚುಗತ್ತಿ ಭರಮಣ್ಣ ನಾಯಕನಾಗಿ ವಿಜೃಂಭಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ !! ತಾನು ಬಾಲಕನಾಗಿದ್ದಾಗ “ರಾಜನಾಗುವೆ” ಎಂದು ಹರಸಿ ಹಾರೈಸಿದ ಗುರುವನ್ನು ಹುಡುಕಿದ ಬಿಚ್ಚುಗತ್ತಿಯ ಧೀರ-ರಾಜ ವೀರ ಭರಮಣ್ಣ ನಾಯಕ ಅವರನ್ನು ಆರಾಷ್ಟ್ರ ಗುರುವಾಗಿ ಆರಾಧಿಸುತ್ತಾ ಚಿತ್ರದುರ್ಗದ ಬೆಟ್ಟದ ಮೇಲೆ ಮುರುಘರಾಜೇಂದ್ರ ಬೃಹನ್ಮಕವನ್ನು ನಿರ್ಮಿಸಿಕೊಟ್ಟಿದ್ದಲ್ಲದೇ, ಈಗ ದಾವಣಗೆರೆ ಮಾರ್ಗದಲ್ಲಿರುವ ಮುರುಘರಾಜೇಂದ್ರ ಬೃಹತ್ ಮಠವನ್ನು ಕಟ್ಟಿಸಿಕೊಡುತ್ತಾರೆ.
ತಮ್ಮ ದಿವ್ಯದೃಷ್ಟಿ ಮತ್ತು ಮಹೋನ್ನತ ಕತೃತ್ವ ಶಕ್ತಿಯಿಂದ ಚಿತ್ರದುರ್ಗದ ಚಿನ್ಮೂಲಾದ್ರಿ ಮುರುಘ ಪರಂಪರೆಯನ್ನು ಆರಂಭಿಸಿದ ಜಗದ್ಗುರು ಶ್ರೀ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿಯವರ ವಿಷ್ಯದೃಷ್ಟಿಗೆ ಒಳಗಾಗಿ ತಮ್ಮ ಮತದ ಪಟುವಾಗಿದ್ದಾಗಲೇ “ಶ್ರೀ ಶರಣ ಬಸವೇಶ್ವರ” ಎಂಬ ಅಭಿದಾನವನ್ನು ಪಡೆದು ಸಮಾಜಮುಖ ಶರಣ ಪರಂಪರೆಗೆ ಸಮರ್ಪಿಸಿಕೊಂಡವರೇ ದೊಣೆಹಳ್ಳಿ ಮತ್ತು ಕಾನಾಮಡುಗು ಗ್ರಾಮಗಳನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡ ಈ ನಮ್ಮ ಶರಣರು. ‘ದಾಸೋಹ’ವನ್ನೇ ಪರಂಪರೆಯನ್ನಾಗಿಸಿಕೊಂಡು ದೊಣೆಹಳ್ಳಿ, ಜಗಳೂರು, ಹನುಮಂತಾಪುರ, ಅಣಬೂರು, ಕಾನಾಮಡುಗು, ಕುಮತಿ ಹೀಗೆ ಈ ಪ್ರಾಂತ್ಯದ ನೂರಾರು ಹಳ್ಳಿಗಳಲ್ಲಿ ತಮ್ಮ ಪವಾಡ ಸದೃಶ್ಯ ಪಾದಗಳನ್ನು ಕ್ರಮಿಸಿರುವ ಈ ಭೂಮಿ ಅಕ್ಷರಶಃ ಶರಣಸದೃಶ್ಯ ! ಇಂತಹ ತರಣರು ಮೆಟ್ಟಿದ ನೆಲದಲ್ಲಿ ಬದುಕುತ್ತಿರುವ ನಾವುಗಳು ನಿಜಕ್ಕೂ ಭಾಗ್ಯವಂತರು ! ಶರಣರು ಬಿತ್ತಿದ ಕಾಯಕ, ದಯೆ, ಧರ್ಮ, ದಾಸೋಹ ಸಂಸ್ಕೃತಿಯಲ್ಲಿ ಸಾಗುತ್ತಾ ನಮ್ಮ ಬದುಕುಗಳನ್ನು ಸಾರ್ಥಕಪಡಿಸಿಕೊಳ್ಳೋಣ.
“ಶರಣರು ಮೆಟ್ಟಿದ ನೆಲ ಪಾವನವಯ್ಯಾ” ಎಂಬುದೊಂದು ಮಾತಿದೆ. ಅಂತೆಯೇ ಈ ಪಾವನ ಭೂಮಿಯ ಆರಾಧ್ಯಗುರು ಶ್ರೀ ಶರಣ ಬಸವೇಶ್ವರ ಸ್ವಾಮಿಯ ವಚನ ಕಾರ್ತೀಕ ದೀಪೋತ್ಸವ ಇದೇ ನವೆಂಬರ್ 29ರಂದು ಶನಿವಾರ ಸಂಜೆ 6-00 ಗಂಟೆಗೆ ದೋಣೆಹಳ್ಳಿಯಲ್ಲಿ ನಡೆಯಲಿದ್ದು, ಪ್ರತಿ ಮನೆಯಿಂದ ಮಹಿಳೆಯರು, ಮಕ್ಕಳು ದೀಪಗಳನ್ನು ತರುವ ಮೂಲಕ “ಶ್ರೀ ಗುರು ಶರಣೇಶ ಸ್ವಾಮಿ’ಗೆ ತಮ್ಮ ಭಕ್ತಿ-ಭಾವವನ್ನು ಸಮರ್ಪಿಸುವರು.
ದಿವ್ಯ ಸಾನಿಧ್ಯ:ಮ.ನಿ.ಪ್ರ. ಶ್ರೀ ಶ್ರೀ ಗುರು ಮಲ್ಲಿಕಾರ್ಜುನ ದೇವರು,
ದಿವ್ಯ ನೇತೃತ್ವ:ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು
ಶಿವಕರಣ ಮಾದಾರ ಚನ್ನಯ್ಯ ಗುರುಪೀಕರ, ಚಿತ್ರದುರ್ಗ,
ಶ್ರೀ ದಾಮ ಕರಣಪ್ಪನವರು, ಶಾನಾಮಡಗು ದಾಸೋಹಮಠದ ಶರಣ ಬಿ. ದೇವೇಂದ್ರಪ್ಪನವರು,
ಶರಣ ಎಚ್.ಪಿ. ರಾಜೇಶ್,
ಮಾಜಿ ಶಾಸಕರು ಗೌರವಾಧ್ಯಕ್ಷರು, ಶ್ರೀ ಶರಣಬಸವೇಶ್ವರ ಸ್ವಾಮಿ ಮಠ ನಿರ್ಮಾಣ ಸಮಿತಿ,
ಶರಣ ಎಸ್.ವಿ.ರಾಮಚಂದ್ರಪ್ಪ ಮಾಜಿ ಶಾಸಕರು, ಮಾಜಿ ಅಧ್ಯಕ್ಷರು, ಮಹರ್ಷಿ ವಾರ್ಲೀಕ ಅಭಿವೃದ್ಧಿ ನಿಗಮ, ಶರಣ ಜಿ.ಎಂ. ಸಿದ್ದರಾಮಯ್ಯಸ್ವಾಮಿ,
ಶರಣ ಜಿ. ಮಂಜುನಾಥ್,ಶರಣ ಕೆ.ಎಂ. ವೀರೇಶ್
ರಾಜ್ಯ ಉಪಾಧ್ಯಕ್ಷರು, ಅವಲ ಭಾರತ ಶರಣ ಸಾಹಿತ್ಯ ಪರಿಷತ್, ಶರಣ ವೇಣುಗೋಪಾಲರೆಡ್ಡಿಯವರು,
ಮಾಜಿ ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಸಹಕಾರಿ ಬ್ಯಾಂಕ್, ಶರಣ ಎ.ಪಿ. ಸಂಜು ಯುವ ಮುಖಂಡರು, ವೀರಕ್ಕೆ ಸಮಾಜ ಬರಕಲಗೂಡು, ಶರಣ ದೊಣೆಹಳ್ಳಿ ಗುರುಮೂರ್ತಿ ಮುಖ್ಯ ಸಂಚಾಲಕರು, ಮಠ ನಿರ್ಮಾಣ ಸಮಿತಿ,ಕಾರ್ಯಕ್ರಮ ನಿರೂಪಣೆ – ನಿರ್ವಹಣೆ :ಶ್ರೀ ಎಲ್.ಪಿ. ಸುಭಾಷ್ ಚಂದ್ರ ಬೋಸ್, ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು,ಶ್ರೀ ಶರಣಬಸವೇಶ್ವರ ಶಿಕ್ಷಕರ ತರಬೇಣಿ ಕೇಂದ್ರ ಕಾನಾಮಡುಗು.ಶರಣಶ್ರೀ ವಿದ್ಯಾ ಮಂದಿದ ದೊಣೆಹಳ್ಳಿ, ಕಾರ್ಯಕ್ರಮದ ನಂತರ ಮಹಾದಾಸೋಹ.
ವಚಣ ಸಂಗೀತ:ಶರಣ ಉಮೇಶ್ ಪತ್ತಾರ್ ಮತ್ತು ಸಂಗಡಿಗ ಕಲಾವಿದರು.ಜ.ಮು.ನಾ. ಕಲಾ ವೃಂದ, ಬೃಹಸ್ಯನ, ಚಿತ್ರದುರ್ಗ,ಬಿಲ್ಲ ವೃಕ್ಷ ದೀಕ್ಷೆ,ಶಮಿ ವೃಕ್ಷ ದೀಕ್ಷೆ.ಶರಣೆ ಹಂಪಿ ನಿಂಗಮ್ಮ ಮಕ್ಕಳು,ಶರಣ ಜಿ. ಬಸವರಾಜಪ್ಪ ಮಾಜಿ ಛೇರ್ಮನ್ ಮಕ್ಕಳು, ಮೊಮ್ಮಕ್ಕಳು
ಮೊಮ್ಮಕ್ಕಳು, ಕುಟುಂಬ ವರ್ಗದವರು, ದೊಣೆಹಳ್ಳಿ,
ಹಾಗೂ ಕುಟುಂಬ ವರ್ಗದವರು, ದೊಣೆಹಳ್ಳಿ,
ಶರಣೆ ನಿಂಗಮ್ಯ ಲಿಂಗೈಕ್ಯ ಕರಣ ಹಂಪಿ ಹನುಮಂತರೆಡ್ಡಿ, ಮಾನ ಛೇರ್ಮನ್ ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರು, ದೊಣೆಗಳ್ಳಿ, ವೇದಿಕೆ – ಶಾಮಿಯಾನ ಮುದ್ರಣ ಸೇವೆ :
ಶರಣ ಕೆ. ಗುರುಮೂರ್ತಿ, ಅಧ್ಯಕ್ಷರು,ವಿ.ಎಸ್.ಎಸ್.ಎನ್. ದೊಣೆಹಳ್ಳಿ,
ಶರಣ ವೈ.ಎನ್. ಜಯ್ಯಣ್ಯ ದೊಡ್ಡಹಳ್ಳಿ,
ಶರಣ ಎ.ಟಿ. ತಿಪ್ಪೇಸ್ವಾಮಿ, ಡಿ.ಎಸ್.ಎಸ್.ಎನ್.ಸಿ.ಟಿ.ಸಿ.
ಶರಣ ಕೆ.ಆರ್. ಭೀಮಲಿಂಗಪ್ಪ ಆದಿ ಸದ್ಗುರು ಟ್ರೈದರ್ ದೊಣೆಹಳ್ಳಿ, ಭಕ್ತಾಧಿಗಳಿಗೆ ವಿಶೇಷ ಸೂಚನೆ :ನೂತನ ಶ್ರೀಮಠದ ಮಹಾದ್ದಾರ, ಕಂಬದ ಮಠ, ದಾಸೋಹ ಭವನ, ಹಾಗೂ ಕಲ್ಯಾಣಿ ಕಾಮಗಾರಿಗಳಿಗೆ ಧರ್ಮದೇಣಿಗೆ ಸಮರ್ಪಿಸುವವರಿಗೆ ಸಭಾ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

