Monday, June 15, 2026
Homeರಾಜಕೀಯಡಾ ಯತಿಂದ್ರರವರನ್ನು ಎಂ ಎಲ್ ಸಿ ಮಾಡಿದ್ದೇ ಸಿದ್ದರಾಮಯ್ಯನವರ ಕೊಡುಗೆ. ಕೊನೆಯಲ್ಲಿ ಸಮಾಜದ ಮಳವಳ್ಳಿ ಶಿವಣ್ಣ...

ಡಾ ಯತಿಂದ್ರರವರನ್ನು ಎಂ ಎಲ್ ಸಿ ಮಾಡಿದ್ದೇ ಸಿದ್ದರಾಮಯ್ಯನವರ ಕೊಡುಗೆ. ಕೊನೆಯಲ್ಲಿ ಸಮಾಜದ ಮಳವಳ್ಳಿ ಶಿವಣ್ಣ ನವರನ್ನು ಎಂ ಎಲ್ ಸಿ ಮಾಡಿದರು ಎಂದು ಸಮಾಧಾನ ಅಷ್ಟೇ: ಬಿಎಮ್.ಸತೀಶ್ ಕೊಳೇನಹಳ್ಳಿ

ದಾವಣಗೆರೆ:ಸುಮಾರು 40 ವರ್ಷಗಳ ಹಿಂದೆ ಮೈಸೂರು ಕಡೆಯವರಾದ ಕುರುಬ ಜನಾಂಗದ ಹೆಚ್ ಬಸವರಾಜು ಎಂಬುವರು ನಮ್ಮ ರಾಜ್ಯದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ತದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರು ಪ್ರಶ್ನಾತೀತ ನಾಯಕರಾದ್ರೂ ನಮ್ಮ ಸಮುದಾಯದ ಯಾರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ತ್ಯಾಗ ಮಾಡಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಹೆಚ್ ವಿಶ್ವನಾಥ್ ಮತ್ತು ಹೆಚ್ ಎಂ ರೇವಣ್ಣನವರ ಪೈಕಿ ಹೆಚ್ ವಿಶ್ವನಾಥ್ ರವರನ್ನು ರಾಜ್ಯಸಭೆ ಎಂ.ಪಿ ಮಾಡಿದ್ದರೆ ಅವರು ಸಾಯುವವರೆಗೂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದರು. ಆದರೆ ಅವರನ್ನು ರಾಜ್ಯಸಭೆ ಎಂ.ಪಿ ಮಾಡಲಿಲ್ಲ. ಆದ್ದರಿಂದ ಅವರು ಸಾಯುವವರೆಗೂ ಬೈಯ್ಯುವುದು ಬಿಡುವುದಿಲ್ಲ.
ಈಗ ಬಿಜೆಪಿ ಕುರುಬ ಸಮುದಾಯದ ಪ್ರೊ ಎಂ ನಾಗರಾಜ್ ರವರನ್ನು ರಾಜ್ಯಸಭೆ ಎಂ.ಪಿ ಮಾಡಿದೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಕುರುಬ ಸಮುದಾಯದವರನ್ನು ಒಂದು ರಾಜ್ಯದ ರಾಜ್ಯಪಾಲರನ್ನು ಮಾಡಿದ್ದು ಬಿಜೆಪಿ.
ಕುರುಬ ಸಮುದಾಯದ ಬೆಂಬಲ ಪಡೆದ ಸಿದ್ದರಾಮಯ್ಯನವರಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಲಿ ಕೊನೆ ಪಕ್ಷ ನಮ್ಮ ಸಮುದಾಯದವರನ್ನು ಎಂ ಎಲ್ ಸಿ ಮಾಡಲಿಲ್ಲ. ಅವರ ಮಗ ಡಾ ಯತಿಂದ್ರರವರನ್ನು ಎಂ ಎಲ್ ಸಿ ಮಾಡಿದ್ದೇ ಅವರ ಕೊಡುಗೆ. ಕೊನೆಯಲ್ಲಿ ಈಗ ಮಳವಳ್ಳಿ ಶಿವಣ್ಣ ನವರನ್ನು ಎಂ ಎಲ್ ಸಿ ಮಾಡಿದರು ಎಂದು ಸಮಾಧಾನ ಮಾಡಿಕೊಳ್ಳಬಹುದಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments