ದಾವಣಗೆರೆ : ಸ್ವಾತಂತ್ರ್ಯ ಎಂಬುದು ಬ್ರಿಟಿಷರ ದಾಸ್ಯದ ಮುಕ್ತಿಯ ಜೊತೆ ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವೈ ವಿರೂಪಾಕ್ಷಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಕುರುಬರ ಹಾಸ್ಟೆಲ್ ನಲ್ಲಿ ಇಂದು 80 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳೆದ 80 ವರ್ಷಗಳಲ್ಲಿ ದೇಶದ ಪ್ರಗತಿ ಆಗಿರುವ ಬಗ್ಗೆ ದೇಶದ ಯುವ ಜನತೆ ಆಲೋಚನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ಮಲ್ಲೇಶ್ ಬಿ ಬಿ, ಯುವಕರ ಸೋಮಾರಿಗಳಾಗುತ್ತಿದ್ದಾರೆ ತಂತ್ರಜ್ಞಾನದ ಬೆಳೆದಂತೆ ಯುವಕರು ಮಂದರಾಗುತ್ತಿದ್ದರೆ. ಪ್ರಸ್ತುತ ಇರುವ ವ್ಯವಸ್ಥೆ ಬಳಸಿಕೊಳ್ಳದೆ ತಂದೆ ತಾಯಿಗೆ ಹೊರೆಯಾಗುತ್ತಿದ್ದಾರೆ. ಯುವಕರು ಅವಕಾಶ ಬಳಸಿಕೊಂಡು ತಂದೆ ತಾಯಿಗೆ ಒಳ್ಳೆ ಮಕ್ಕಳಾಗಬೇಕು ಎಂದು ಕಾಲೇಜು ಮಕ್ಕಳಿಗೆ ಹಿತವಚನ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಬೀರಲೀಂಗೇಶ್ವರ ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರಪ್ಪ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೆ ಲಕ್ಷಾಂತರ ಬಲಿದಾನಗಳಾಗಿವೆ ಇವತ್ತಿನ ಯುವ ಶಕ್ತಿ ಬಲವಾಗಿದೆ ಸಂಘಟನೆ ಯುಕ್ತವಾಗಿದೆ, ಇದಕ್ಕೆ ಇತ್ತೀಚೆಗೆ ಜಂತರ್ ಮಂತರ್ ಮೈದಾನದಲ್ಲಿ ಸಿಜೆಪಿ ಪಕ್ಷದ ಯುವಕರು ನಡೆಸಿದ ಹೋರಾಟವೇ ಉದಾಹರಣೆ. ಯುವ ಜನತೆಯನ್ನು ನಿರ್ಲಕ್ಷ್ಯ ಮಾಡಿದ ಯಾವುದೇ ಸರ್ಕಾರವನ್ನು ಕಿತ್ತೋಗೆಯಲಿದ್ದಾರೆ ಎಂದರು ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಭಗತ್ ಸಿಂಹ, ಕೆ ಬಿ ರವಿ, ಮಾಜಿ ಉಪಾಧ್ಯಕ್ಷ ರೇವಣಸಿದ್ದಪ್ಪ ಗಂಗನರಸಿ, ದ್ಯಾಮಣ್ಣ, ನಿರ್ದೇಶಕರಾದ ದೇವಿಕುಮಾರ್ ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರು ಮತ್ತು ವಿಶೇಷ ಆಹ್ವಾನಿತ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖಜಾಂಚಿ ಅವಿನಾಶ್, ನಿರ್ದೇಶಕರಾದ ಎಸ್ ವೆಂಕಟೇಶ್, ಜಿ ಕೆ ಸುರೇಶ್, ಮೂರ್ತ್ಯಾಪ್ಪ ಲೊಕಿಕೆರೆ, ಮಹಾಂತೇಶ್ ಹದಡಿ, ವಿಶೇಷ ಆಹ್ವಾನಿತರಾದ ಮನು, ಗುಡ್ಡಪ್ಪ, ಬಸವರಾಜಪ್ಪ, ಮಹೇಂದ್ರಪ್ಪ, ಪರಶುರಾಮ್, ಪ್ರಸನ್ನ ಬೆಳಕೆರೆ, ಶ್ರೀನಿವಾಸ್ ಕುಂಬಳೂರು, ಬೀರಪ್ಪ ಮಲೆಬೆನ್ನೂರು, ಹೆಚ್ ನಾಗರಾಜ್ ಹಾಸ್ಟೆಲ್ ಸಿಬ್ಬಂದಿ ಹಾಗೂ ಶ್ರೀ ಬೀರಲೀಂಗೇಶ್ವರ ಕಾಲೇಜಿನ ಉಪನ್ಯಾಸಕರು ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಮತ್ತು ಹಾಸ್ಟೆಲ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.(ವರದಿ:ಅಣ್ಣಪ್ಪ)

