ದಾವಣಗೆರೆ:ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ವಾಸವಿ ಯುವಜನ ಸಂಘದ ವತಿಯಿಂದ 45ನೇ ವರ್ಷದ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ದತ್ತ ಅವತಾರ ವೈಭವ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಬಾರಿಯ ಪ್ರದರ್ಶನವನ್ನು ಸಾರ್ವಜನಿಕರಿಗೆ ವಿಶೇಷವಾಗಿ ಎಐ (AI) ಮೂಲಕ ಪ್ರದರ್ಶಿಸಲಾಗುತ್ತಿದೆ.
ಸೆ.14ರ ಇಂದು ಮಧ್ಯಾಹ್ನ 12-30ಕ್ಕೆ ಶ್ರೀ ವಿಘ್ನೇಶ್ವರ ಸ್ವಾಮಿಯ ಪ್ರತಿಷ್ಠಾಪನೆ ನಡೆಯಲಿದೆ. ಪ್ರದರ್ಶನವು ಸೆ.15ರ ಮಂಗಳವಾರದಿಂದ 19ರ ಶನಿವಾರದವರೆಗೆ ಪ್ರತಿದಿನ ಸಂಜೆ 6-30 ರಿಂದ 9 ರವರೆಗೆ ನಡೆಸಲಾಗುವುದು, ಸೆ.20ರ ಭಾನುವಾರ ಸಂಜೆ 7-30ರಿಂದ ಶ್ರೀ ವಿಘ್ನೇಶ್ವರ ಸ್ವಾಮಿಯನ್ನು ಮಂಗಳವಾದ್ಯ ಹಾಗೂ ಭವ್ಯ ಮೆರವಣಿಗೆಯ ಮೂಲಕ ವಿಸರ್ಜಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ಸುನಿಲ್ ತಿಳಿಸಿದ್ದಾರೆ.
ಶ್ರೀ ವಿನಾಯಕ ಮಹೋತ್ಸವದ ಪ್ರಯುಕ್ತ ಸಂಘದಿಂದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಸೆ.16ರ ಬುಧವಾರ ಧನ್ವಂತರಿ ಹೋಮ, ಸೆ.17ರ ಗುರುವಾರ ಜ್ಞಾನಯುಕ್ತ ಷೋಡಶ ಗಣಪತಿ ಪೂಜೆ, ಸೆ.18ರ ಶುಕ್ರವಾರ ಗಣಪತಿ ಹೋಮ, ಸೆ.19ರ ಶನಿವಾರ ಏಕಾದಶ ರುದ್ರಾಭಿಷೇಕ ನಂತರ ಮಹಾಮೃತ್ಯುಂಜಯ ಹೋಮ ನಡೆಯಲಿದ್ದು ಸರ್ವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಕೋರಿದ್ದಾರೆ.

