ದಾವಣಗೆರೆ: ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಉತ್ತರಾಧಿಕಾರಿಗಳ ಸಂಘದ ವತಿಯಿಂದ 80 ನೇ ಸ್ವಾತಂತ್ರೋತ್ಸವವನ್ನು ದಿನಾಂಕ 15-08-2026 ರಂದು ಸಂಘದ ಅಧ್ಯಕ್ಷರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಆದ ಶ್ರೀ ಹೆಚ್.ಮರಳಸಿದ್ದಪ್ಪ ನವರ ಅಧ್ಯಕ್ಷತೆ ವಹಿಸಿದ್ದರು ಹಾಗೂ ಕಾರ್ಯಾಧ್ಯಕ್ಷ ಇಂದುಧರ್ ನಿಶಾನಿಮಠ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು
ಸದಸ್ಯರು ಹಾಗೂ ಸಾರ್ವಜನಿಕರು ವಿರ್ಜಂಬಣೆಯಿಂದ ಸಿಹಿ ಹಂಚುವ ಮೂಲಕ
ಸ್ವಾತಂತ್ರೋತ್ಸವವನ್ನ ಆಚರಿಸಲಾಯಿತು ಇದೇ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂದದ್ದು ಎಂದು ಸವಿಸ್ತಾರವಾಗಿ ತಿಳಿಸಿದರು ಹಾಗೂ ಕಾರ್ಯಾಧ್ಯಕ್ಷ ಇಂದುಧರ್ ನಿಶಾನಿಮಠ್ ಉತ್ತಾರಾಧಿಕಾರಿಗಳ ಬಗ್ಗೆ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಾಟ್ಟಾಗಿ ಹೋರಾಟ ಮಾಡಲು ಹಾಗೂ ಈಗ ಸರ್ಕಾರ ಕೊಡುವ ಪಿಂಚಣಿಯು ಯಾವುದಕ್ಕೂ ಸಾಲುವುದಿಲ್ಲ ಅದನ್ನ ಹೆಚ್ಚಿಸುವುದು ಮತ್ತು ಉತ್ತರಾಧಿಕಾರಿಗಳ ಕೆಲವು ಬೇಡಿಕೆಗಳ ಬಗ್ಗೆ ಮಾತನಾಡಿ ದರು ರಾಷ್ಟ್ರ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯಿತು.🇮🇳

