Friday, February 20, 2026
Homeಸ್ಮರಣೆಕಲಾ ತಪಸ್ವಿ ಡಾ ರಾಜೇಶ್ ರವರ ತಪೋವನ ಮಾಡಲು ನಾಲ್ಕು ಗುಂಟೆ ದಾನವಾಗಿ ನೀಡಿದ ಕೆ.ಶಾಂತರಾಜ್

ಕಲಾ ತಪಸ್ವಿ ಡಾ ರಾಜೇಶ್ ರವರ ತಪೋವನ ಮಾಡಲು ನಾಲ್ಕು ಗುಂಟೆ ದಾನವಾಗಿ ನೀಡಿದ ಕೆ.ಶಾಂತರಾಜ್

ಬೆಂಗಳೂರು: ಕರುನಾಡ ಕನ್ನಡಿಗರ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಕಲಾ ತಪಸ್ವಿ ಡಾ ರಾಜೇಶ್ ಇವರ 4 ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ ನ್ಯೂ ಇಂಡಿಯಾ ಗುಡ್ ಶೆಪರ್ಡ್ ಫೌಂಡೇಶನ್ (ರಿ) ಎನ್ ಜಿ ಓ ಬೆಂಗಳೂರು ವತಿಯಿಂದ ವಿಶೇಷವಾಗಿ ಹಲವಾರು ಸ್ಥಳಗಳಿಂದ ಬಂದಿದ್ದ ಕಲಾಭಿಮಾನಿಗಳು, ದಾಸನಪುರ ಹೋಬಳಿ ಹನುಮಂತಸಾಗರ ಗ್ರಾಮದ ಅಭಯ್ ಆಂಜನೇಯ ಭಜನಾ ಮಂಡಳಿ ಯ ಹಾರ್ಮೋನಿಯಂ ಮಾಸ್ತರ ಶ್ರೀ ರಾಮಣ್ಣ, ಶ್ರೀ ಪೋಲಿಸ್ ಇಲಾಖೆ ನಿವೃತ್ತ ಅಧಿಕಾರಿ ಶ್ರೀ ರಾಮಚಂದ್ರಪ್ಪ, ಶ್ರೀ ಚಂದ್ರಣ್ಣ, ಶ್ರೀ ಕಾಂತಣ್ಣ , ಮರಿಯಪ್ಪ, ಹೊಸ ಪಾಳ್ಯ ಶ್ರೀ ರಾಮಣ್ಣ, ಸ್ಥಳೀಯ ಭಜನಾ ಮಂಡಳಿಯವರು,
ಗೋವಿಂದಪುರ ಗ್ರಾಮದ ಹಾಗೂ ಸುತ್ತಮುತ್ತಲಿನ ಸಕಲ ಅಭಿಮಾನಿಗಳು,
ನಾವು ಶ್ರೀ ಕುಶಾಲ್ ಹುರುವೇಗೌಡ, ಕಲ್ಯಾಣ ಕುಮಾರ್ ಭಕ್ತನ ಪಾಳ್ಯ, ಮುನಿರಾಜು ಕುಕ್ಕನಳ್ಳಿ,ಹೊಂಗಸಂದ್ರ ಗಂಗಾಧರ, ಸಾಹಿತಿಗಳಾದ ಶ್ರೀ ಹನುಮಂತಪ್ಪ ಸೋಮನಕಟ್ಟಿ, ಶ್ರೀ ವಿಜಯಾ ಕುಮಾರಿ, ಶ್ರೀಮತಿ ಅನ್ನಪೂರ್ಣ ಬಗರಿ, ಶ್ರೀ ಮತಿ ಸ್ವರೂಪರಾಣಿ, ಹಾಗೂ ಹಾಲಪ್ಪ ಹೊಂಬಳ,ಕಲಾ ತಪಸ್ವಿ ಡಾ ರಾಜೇಶ್ ಕುಟುಂಬದ ಸದಸ್ಯರು, ವೀರಕುಮಾರ,ದಾಸನಪೂರ ಹೊಬಳಿ ಗೋವಿಂದಪುರ ಗ್ರಾಮದ ಶ್ರೀ ಮತಿ ಹೊನ್ನಮ್ಮ ಕೊಂ ಕೆ ಶಾಂತಕರಾಜ ಇವರು ತಮ್ಮ ತೋಟದಲ್ಲಿ ನಾಲ್ಕು ಗುಂಟೆ ಜಮೀನನ್ನು ಕಲಾ ತಪಸ್ವಿ ಡಾ ರಾಜೇಶ್ ಸರ್ ತಪೋವನ ಮಾಡಲು ದಾನವಾಗಿ ನೀಡಿದ ಮಹನೀಯರು,
ಭಜನೆ ಮೂಲಕ, ಪೂಜೆಯೊಂದಿಗೆ, ನಂತರ ಪ್ರಸಾದ ವಿತರಣೆ ಮಾಡಿ ತುಂಬಾ ವಿಶೇಷ ಕಾರ್ಯಕ್ರಮ ಮಾಡಲು ಒಂದು ಶುಭ ದಿನ.ಸರ್ವ ಜನ ಸುಖಿನೋ ಭವಂತು ಎಂಬ ಅವರ ಶ್ಲೋಕ
ದೊಂದಿಗೆ ಕಾರ್ಯಕ್ರಮ ನಡೆಯಿತು.
ಒಂದು ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಎಂದು ಅಖಿಲ ಭಾರತೀಯ ಒಬಿಸಿ ಮಹಾಸಭಾ (ರಿ)ಭೂಪಾಲ್ ರಾಷ್ಟ್ರೀಯ ಸಂಚಾಲಕರಾದ ಶ್ರೀ ಸತ್ಯಪ್ಪ ಗುರಿಕಾರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments