ದಾವಣಗೆರೆ: ಸ್ನೇಹಜೀವಿ,ಸಂಘಜೀವಿ,ಜನಪರ ತುಡಿತ,ಹಿರಿಯ ಪತ್ರಕರ್ತ ಓ ಎನ್.ಶಿದ್ದಯ್ಯ ನವರು ದಿನಾಂಕ: ೨೬-೦೮-೨೦೨೬,ರಾತ್ರಿ ಎರಡುಗಂಟೆಯ ಸಮಯದಲ್ಲಿ ಕೊನೆಉಸಿರು ಎಳೆದಿದ್ದಾರೆ.ಮೃತ ಶಿದ್ದಯ್ಯ ಒಡೆಯರ್ ರವರು ಹಲವಾರು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಪ್ರಗತಿಪರ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ ಅಕ್ಷರದೀಪ,ಸಾಕ್ಷರತ,ಇಪ್ಟಾ ಮುಂತಾದ ಅನೇಕ ಜನಜಾಗೃತಿ ಸಂಘಟನೆಗಳ ಮುಖಂಡರಾಗಿ ಜನಜಾಗೃತಿ ಸಭೆ,ಬೀದಿನಾಟಕ,ಗಳ ಮುಖಾಂತರ ಎಡಪಂಥೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಜನಪರ ಚಿಂತನೆಗಳತ್ತ ಮನೋಭಾವದ ಶಿದ್ದಯ್ಯ ಒಡೆಯರ್ ರವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ಯಹಿಸಿ ನಂತರ ಜನತಾವಾಣಿ ಕನ್ನಡ ದಿನಪತ್ರಿಕೆಯ ವರದಿಗಾರರಾಗಿ ಶ್ರದ್ಧೆ,ಪ್ರಾಮಾಣಿಕತೆ ನೈಜ ವರದಿಗಾರಿಕೆ ಮಾಡುವ ಜವಾಬ್ದಾರಿಯುತ ಪತ್ರಕರ್ತರಾಗಿ ಸಮಾಜದ ಒಳಿಗೆ ಉತ್ತಮ ಲೇಖನಗಳನ್ನು ನೀಡುತ್ತಿದ್ದರು.ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುತ್ತಾ ಮಾಧ್ಯಮ ಸಾಂಸ್ಕೃತಿಕ ವೇದಿಕೆಯೆಂಬ ಸಂಘಟನೆಯ ಅಧ್ಯಕ್ಷರಾಗಿ ಅದರ ಮುಖಾಂತರ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಪುರಸ್ಕಾರ ನೀಡುತಿದ್ದರು.ಶಿದ್ದಯ್ಯ ಒಡೆಯರ್ ರವರ ಜನಪರ ಚಿಂತನೆಗಳು,ಜನಜಾಗೃತಿ ಕಾರ್ಯಕ್ರಮಗಳು,ಉತ್ತಮ ವರದಿಗಾರಿಕೆಯ ಪತ್ರಕರ್ತ ಮುಂತಾದವುಗಳನ್ನು ಗಮನಿಸಿ ಅವರಿಗೆ ಜಿಲ್ಲಾಜ್ಯೋತ್ಸವ ಪ್ರಶಸ್ತಿ, ಇತರೆ ಸಂಘ ಸಂಸ್ಥೆಗಳ ಹೆಸರಾಂತ ಪ್ರಶಸ್ತಿ ಗಳು ಲಭ್ಯವಾಗಿದ್ದಿದೆ.ಅಲ್ಲದೆ ರಾಜ್ಯಮಟ್ಟದ ಯುವಜನಪ್ರಶಸ್ತಿಕೂಡಾ ಇವರ ಮುಡಿಗೇರಿದ್ದಿದೆ.
ತಾನು ಉಪವಾಸವಿದ್ದರೂ ಇನ್ನೊಬ್ಬರ ಹೊಟ್ಟೆತುಂಬಿಸುವ ಶಿದ್ದಯ್ಯ ಒಡೆಯರ್ ಒಬ್ಬ ಅತ್ಯಂತ ಸ್ವಾಭಿಮಾನಿ ಪತ್ರಕರ್ತರಾಗಿದ್ದರು.ತನ್ನ ವಯಕ್ತಿಕ ಹಲವು ನೋವುಗಳಿದ್ದರೂ ಒಬ್ಬರೊಂದಿಗೂ ತನ್ನ ನೋವು ಹೇಳಿಕೊಳ್ಳದೆ ನೋವುಂಡ ನಂಜುಂಡನಂತೆ ಸದಾ ಹಸನ್ಮುಖಿಯಾಗಿ ಸ್ನೇಹಿತರ ಆಪ್ತ ಮಿತ್ರ ಆಗಿದ್ದರು.ಅವರು ಪತ್ರಿಕಾರಂಗ,ಕಲಾರಂಗ,ಹೋರಾಟ ಸಂಘಟಕ ಹೀಗೆ ವಿವಿಧ ರಂಗಗಳ ಸಂಗಾತಿಗಳ ನಿಕಟ ಸಂಪರ್ಕ ಇದ್ದರೂ ಯಾವುದೆ ಒಬ್ಬನೇ ಒಬ್ಬನ ಕುರಿತು ಹಗುರ ವಾಗಿ ಮಾತನಾಡುವುದಾಗಲಿ,ಕೆಳಮಟ್ಟದಲ್ಲಿ ನೋಡುವುದಾಗಲಿ,ಇನ್ನೊಬ್ಬರ ಮುಂದೆ ಇಲ್ಲದವರ ಕುರಿತು ಮಾತನಾಡದೆ ಎಲ್ಲರನ್ನೂ ಆಪ್ತಮಿತ್ರನಂತೆ ನೋಡುವ ದೊಡ್ಡ ಗುಣ ಅವರಲ್ಲಿತ್ತು.ಮತ್ತು ಸಂಗಾತಿಗಳ ಯೋಗಕ್ಷೇಮ ವಿಚಾರಿಸಿ ತನಗಿಲ್ಲದಿದ್ದರೂ ತನ್ನಲ್ಲಿದ್ದಷ್ಟನ್ನೂ ಅವರಿಗೆ ಕೊಟ್ಟು ಹೋಗುತಿದ್ದರು ಅವರು ಹಲವು ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿ ಬೆಳಸಿದ್ದಾರೆ.
ಇಂಥ ಅಜಾತ ಶತೃ ಶಿದ್ದಯ್ಯ ಒಡೆಯರ್ ಅವರ ನಿಧನಸುದ್ಧಿ ತಿಳಿದ ತಕ್ಷಣ ಕನ್ನಡಪರ ಸಂಘಟಕರು,ಸಾಹಿತಿಗಳು, ಕಲಾವಿದರು, ಹೋರಾಟಗಾರರು,ರಾಜಕಾರಣಿಗಳು,ಚಿಂತಕರು,ಸಾಹಿತಿಗಳು,ಪತ್ರಕರ್ತರು,ರೈತ ಸಂಘಟಕರು,ದೌಡಾಯಿಸಿ ಅಂತಿಮದರ್ಶನ ಪಡೆದರು.ಇದೇ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಾಮದೇವಪ್ಪನವರು,ರಂಗಾಯಣದ ಕಡಕೋಳ ಮಲ್ಲಿಕಾರ್ಜುನ ರವರು ಹಾಗೂ ಎನ್.ಜಿ.ಪುಟ್ಟ ಸ್ವಾಮಿಯವರು ಹಾಗೂ ಇಪ್ಟಾ ಸಂಘಟಕರುಗಳಾದ ಷಣ್ಮುಖ ಸ್ವಾಮಿ,ಐರಣಿ ಚಂದ್ರು,ಬಾನಪ್ಪ,ಹೆಗ್ಗೆರೆ ರಂಗಪ್ಪ,ಮುಂತಾದ ವರು,ಕಟ್ಟಡ ಮತ್ತು ಕಲ್ಲುಕ್ವಾರಿ ಕಾರ್ಮಿಕ ಸಂಘದ ಅಧ್ಯಕ್ಷರು ಮಾಜಿ ನಗರಸಭೆಸದಸ್ರಾದ ಹೆಚ್.ಜಿ.ಉಮೇಶ್,ಸುರೇಶ್,ಮುಂತಾದ ವರು,ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು,ಎಐಕೆಎಸ್ ಮುಖಂಡ ಇ.ಶ್ರೀನಿವಾಸ್,ಮಾನವ ಮಂಟಪದ ಆವರಗೆರೆ ರುದ್ರಮುನಿ, ಮುಂತಾದವರು, ನೂರಾರು ಮುಖಂಡರು ಸಂತಾಪಸೂಚಿಸಿದರು.ಮತ್ತು ದಾವಣಗೆರೆ ಜಿಲ್ಲಾ ವರದಿಗಾರರಕೂಟದ ಅಧ್ಯಕ್ಷರಾದ ನಾಗರಾಜ್ ಬಡದಾಳ್,ಪ್ರಧಾನಕಾರ್ದರ್ಶಿ ಸತೀಶ್ ವೈ ಎಂ,ಹಾಗೂ ಸಾಹಿತಿಗಳಾದ ಬಿಎನ್.ಮಲ್ಲೇಶ್,ಬಾ.ಮ.ಬಸವರಾಜ್,ಹಿರಿಯಪತ್ರಕರ್ತರಾದ ವಿರುಪಾಕ್ಷಪ್ಪ,ಕಾಡಜ್ಜಿ ಮಂಜುನಾಥ,ವಿಷ್ಣು,ಕುಣುವೆಬೆಳಕೆರೆ ಸುರೇಶ್,ಸದಾನಂದ ಹೆಗಡೆ,ಮಟ್ಟಿಕಲ್ ವೀರಭದ್ರ ಸ್ವಾಮಿ,ಕಾನಿಪ ಜಿಲ್ಲಾ ಪ್ರಧಾನಕಾರ್ಯದರ್ಶಿ ಎನ್.ವಿ.ಬದರಿನಾಥ್,ಖಜಾನ್ಸಿ ಜೆಎಸ್.ವೀರೇಶ್,ಕಾರ್ಯದರ್ಶಿ ಸಿ.ವೇದಮೂರ್ತಿ, ಎನ್.ನಿಂಗಪ್ಪ,ಉದಯವಾಣಿ ವರದಿಗಾರ ರವಿ ಬಾಬು,ದಾವಣಗೆರೆ ಕನ್ನಡಿಗ ಸಂಪಾದಕ ಆರ್.ರವಿ,ರಂಗನಾಥ್,ಎ.ಫಕೃದ್ದಿನ್,ಬಕ್ಕೇಶ್ ನಾಗನೂರು, ಮಾಜಿ ನಗರ ಸಭೆಯ ಸದಸ್ಯ ಎನ್ ಜೆ.ನಿಂಗಪ್ಪ,ಮತ್ತು ಹರಿಹರ ಶಾಸಕ ಹರೀಶ್ ರವರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ಎಸ್.ರಾಮೇಗೌಡ,ಕಾರ್ಯದರ್ಶಿ ರವಿ.ಹೀಗೆ ಅನೇಕ ಸಂಘಟನೆಗಳ ಮುಖಂಡರು ಸಂತಾಪಸೂಚಿಸಿದರು.ಎಸ್ ಡಿ ಎಂ ಸಿ ಸಂಘಟನೆಗಳ ಒಕ್ಕೂಟದ ಮಾಧ್ಯಮ ಕಾರ್ಯದರ್ಶಿ ರಮೇಶ್ ಸಿ ದಾಸರ್,ಪ್ರಿಯಾ ಪ್ರಕಾಶ್,ವಿಕೆ ಶಾಸ್ತ್ರೀ,ಪುರಂದರ್ ಲೋಕಿಕೆರೆ,ಲೋಕಿಕೆರೆ ಆಂಜಿನಪ್ಪ, ಮಾಗನೂರು ಮಂಜಪ್ಪ ಹೀಗೆ ನಗರದ ಮತ್ತು ಗ್ರಾಮೀಣ ಭಾಗದ ಬಹುತೇಕ ಎಲ್ಲಾ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಅಂತಿಮದರ್ಶನ ಮಾಡಿದರು.

